Headlines

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಗೆ ಕಾಗೋಡು ತಿಮ್ಮಪ್ಪ ಅರ್ಜಿ ಸಲ್ಲಿಕೆ – ಕುತೂಹಲ ಮೂಡಿಸಿದ ಕಾಗೋಡು ನಡೆ!!..???|Kagodu


ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಲು ಎಲ್ಲರೂ ಸೇರಿ ವ್ಯವಸ್ಥಿತ ಸಂಘಟನೆ ಮಾಡಲಾಗುತ್ತಿದೆ. ಚುನಾವಣಾ ಉಮೇದುವಾರಿಕೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಪಕ್ಷದ ನಿಯಮದಂತೆ ನಾನು ಹಾಗೂ ರಾಜನಂದಿನಿ ಅರ್ಜಿ ಸಲ್ಲಿಸಿದ್ದೇವೆ.ಪಕ್ಷ ಬಯಸಿದರೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ತಾಲೂಕಿನ ತ್ಯಾಗರ್ತಿಯಲ್ಲಿ ಅವರು ಮಾದ್ಯಮದೊಂದಿಗೆ ಮಾತನಾಡಿ, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಲು ಉತ್ತಮ ವಾತಾವರಣ ಇದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು. ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ. ಚುನಾವಣಾ ಸಿದ್ಧತೆಗಾಗಿ ಕ್ಷೇತ್ರಾದ್ಯಂತ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಡಾ ರಾಜನಂದಿನಿ, ಬರೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣ ಪುಟ್ಟಪ್ಪ, ತಾಪಂ ಮಾಜಿ ಅಧ್ಯಕ್ಷ ಟಿ.ಕೆ.ಹನುಮಂತಪ್ಪ, ತ್ಯಾಗರ್ತಿ ಗ್ರಾಪಂ ಸದಸ್ಯರಾದ ಎಚ್. ಗಿರೀಶ್, ಪ್ರಮುಖರಾದ ಟಿ.ಕೆ. ಕೃಷ್ಣಪ್ಪ, ಕಿರಣ್ ದೊಡ್ಡಮನೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Exit mobile version