Headlines

ಗಾಜನೂರಿನ ಫಿಶ್ ಹೊಟೇಲ್ ಗಳ ಮೇಲೆ ಅಬಕಾರಿ ಇಲಾಖೆ ದಾಳಿ – ಅಪಾರ ಪ್ರಮಾಣದ ಮದ್ಯ ವಶ|gajanoor

ಗಾಜನೂರಿನಲ್ಲಿರುವ ಫಿಶ್ ಹೋಟೆಲ್ ಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಿದೆ. ಯಾವುದೇ ಪರವಾನಗಿ ಇಲ್ಲದೆ ಫಿಶ್ ಹೋಟೆಲ್ ಗಳು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ದಾಳಿ ನಡೆದಿದೆ.

ಮಂಗಳವಾರ ಅಬಕಾರಿ ಉಪ ಆಯುಕ್ತರು ಕ್ಯಾಪ್ಟನ್ ಅಜೀತ್ ಕುಮಾರ್ ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಶಿವಮೊಗ್ಗ ತಾಲ್ಲೂಕಿನ ಗಾಜನೂರು ವ್ಯಾಪ್ತಿಯಲ್ಲಿನ ರೆಸ್ಟೋರೆಂಟ್ ಗಳು ಯಾವುದೇ ಅಬಕಾರಿ ಲೈಸೆನ್ಸ್ ಹೊಂದಿಲ್ಲದೆ ಸಾರ್ವಜನಿಕರಿಗೆ ಹೋಟೆಲ್ ನಲ್ಲಿ ಮದ್ಯ ಸರಬರಾಜು ಮಾಡಿ‌ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುವ 7 ಹೋಟೆಲ್ ಗಳ ಮೇಲೆ ದಾಳಿ ನಡೆಸಿವೆ.

ದಾಳಿಯಲ್ಲಿ ಅಪಾರ ಪ್ರಮಾಣದಲ್ಲಿ ಮದ್ಯ ಪತ್ತೆಯಾಗಿವೆ.

ಕಿನಾರಾ ಹೋಟೆಲ್, ಸರೋವರ ಹೋಟೆಲ್ , ಭೂಮಿಕ‌ ಹೋಟೆಲ್, ಗ್ರೀನ್ ಫಿಶ್ ಲ್ಯಾಂಡ್ ಹೋಟೆಲ್, ವನಶ್ರೀ‌ಹೋಟೆಲ್ ಗಳ ಮೇಲೆ ಒಟ್ಟು 07 ಅಬಕಾರಿ ಪ್ರಕರಣಗಳನ್ನು‌ ದಾಖಲಿಸಲಾಯಿತು. ಸದರಿ ದಾಳಿಯಲ್ಲಿ‌ ನಿರೀಕ್ಷಕರಾದ ಶೀಲಾ ಧಾರಜ್ಕರ್, ಹಾಲಾನಾಯ್ಕ‌್.ಎನ್, ಮಂಜುನಾಥ ಜಿ.ಬಿ ಹಾಗೂ‌ ಸಿಬ್ಬಂದಿಗಳು ಪಾಲ್ಗೋಂಡಿದ್ದರು.

Leave a Reply

Your email address will not be published. Required fields are marked *

Exit mobile version