ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಯುವಕನೊಬ್ಬ ನಿಗೆ ಪಿಎಫ಼್ ಐ ಸಂಘಟನೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ instragram ನಲ್ಲಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಕೆಂಚನಾಲ ಗ್ರಾಮದ ಸುಮಂತ್ ಎಂಬ ಯುವಕನಿಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟ್ರಾಗ್ರಾಮ್ ನಲ್ಲಿ only____pfi ಎಂಬ ಖಾತೆಯಿಂದ ಜೀವ ಬೆದರಿಕೆ ಬಂದಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ಹಿನ್ನಲೆ :
ಸಾಮಾಜಿಕ ಜಾಲತಾಣವಾದ Instagram ನ ಸಕ್ರೀಯ ಸದಸ್ಯನಾಗಿರುವ ಸುಮಂತ್ ಗೆ only___pfi ಎಂಬ ಖಾತೆಯಿಂದ ಒಂದು ಪೋಸ್ಟ್ ಟ್ಯಾಗ್ ಮಾಡಲಾಗಿತ್ತು.ಆ ಪೋಸ್ಟ್ ನಲ್ಲಿ ಸುಮಂತ್ ಭಾವಚಿತ್ರದ ಮೇಲೆ ವಾರ್ನಿಂಗ್ ಎಂಬ ಪದ ಹಾಗೂ ಅಸಭ್ಯವಾದ ಬರಹಗಳನ್ನು ಬರೆಯಲಾಗಿತ್ತು.ಕೂಡಲೇ ಆ only___pfi ಖಾತೆಯನ್ನು ಪರೀಕ್ಷಿಸಿದಾಗ ಆ ಗುಂಪಿನಲ್ಲಿ ಸ್ಥಳೀಯ ಯುವಕರು ಇರುವುದು ಕಂಡು ಬಂದಿದೆ.ಕೆಲ ಸಮಯದಲ್ಲಿ ಅವರೆಲ್ಲಾ ಆ ಗುಂಪಿನಿಂದ ಎಕ್ಸಿಟ್ ಆಗಿದ್ದಾರೆ ಆದ್ದರಿಂದ ಕೂಡಲೇ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸುಮಂತ್ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.