ತೀರ್ಥಹಳ್ಳಿ : 2023 ರ ವಿಧಾನಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಕಾವೇರುತ್ತಿದ್ದೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಆಕಾಂಕ್ಷಿಯಾಗಿ ಆರ್ ಎಂ ಮಂಜುನಾಥ ಗೌಡರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಆರ್ ಎಂ ಎಂ ಮತ್ತು ಕಿಮ್ಮನೆ ರತ್ನಾಕರ್ ನಡುವೆ ಮುಸುಕಿನ ಗುದ್ದಾಟ ಯಾವಾಗಲು ನೆಡೆಯುತ್ತಿತ್ತು. ಇತ್ತೀಚಿಗಷ್ಟೇ ಆರ್ ಎಂ ಮಂಜುನಾಥ ಗೌಡರು ಮತ್ತು ಕಿಮ್ಮನೆ ರತ್ನಾಕರ್ ರವರ ಮುಸುಕಿನ ಗುದ್ದಾಟಕ್ಕೆ ಅನೇಕ ಕಾಂಗ್ರೆಸ್ ನಾಯಕರು ಬೈಟೆಕ್ ಕೂರಿಸಿ ಮಾತನಾಡಿಸಿದ್ದಾರೆ ಎಂಬ ಗುಸು ಗುಸು ಸುದ್ದಿ ಪಟ್ಟಣದಲ್ಲಿ ಹರಡಲಾರಂಭಿಸಿದ್ದು ಮುಂದುವರಿದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಿಮ್ಮನೆ ರತ್ನಾಕರ್ ಅವರಿಗೆ ಬಿಟ್ಟು ಕೊಟ್ಟು ಆರ್ ಎಂ ಎಂ ಸಹಕಾರಿ ರಂಗಕ್ಕೆ ಪುನಃ ವಾಪಾಸ್ ಆಗಿದ್ದಾರೆ ಎಂಬ ಮಾತು ಕೂಡ ಅಲ್ಲಲ್ಲಿ ಚರ್ಚೆ ಆಗುತ್ತಿತ್ತು.
ಆದರೆ ಈ ಎಲ್ಲಾ ಚರ್ಚೆಗೆ ಪೂರ್ಣ ವಿರಾಮವೆಂಬಂತೆ ಆರ್ ಎಂ ಎಂ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿ ಪುನಃ ಅಖಾಡಕ್ಕಿಳಿದಿದ್ದಾರೆ.