Headlines

ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ : ಕೊಲೆ ಎಂಬ ಶಂಕೆ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು | MISSING

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಅನ್ವರ್ ಕಾಲೋನಿ‌ ನಿವಾಸಿ ಜಮೀರ್(19) ಎರಡು ದಿನಗಳ ಹಿಂದ ಎಲೆಕ್ಟ್ರಿಕಲ್ ಕೆಲಸಕ್ಕೆ ತೆರಳಿದ್ದ ಆದರೆ ಇಂದು ಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಅನ್ವರ್ ಕಾಲೋನಿಯ ಜಮೀರ್ ಮೊನ್ನೆ ಟಿವಿ ರಿಪೇರಿಗಾಗಿ ದೇವನರಸೀಪುರ ಗ್ರಾಮಕ್ಕೆ ಹೋಗಿದ್ದ ನಂತರ ಆತನ ಮೊಬೈಲ್ ಸ್ವಿಚ್ ಆಫ಼್ ಆಗಿತ್ತು. ಆತನ ಮೊಬೈಲ್ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಗಾಬರಿಗೊಂಡು ಹೊಸಮನೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಇಂದು ಜಮೀರ್ ನ ಮೃತ ದೇಹ ಗುಂಡಪ್ಪಶೆಡ್ ಬಳಿಯ ಭದ್ರಾ ನದಿಯಲ್ಲಿ ದೊರೆಕಿದೆ.ಜಮೀರ್ ನ ಮೃತದೇಹ ಪತ್ತೆಯಾಗಿರುವ ಹಿನ್ನಲೆಯಲ್ಲಿ ಆತನ ಕುಟುಂಬಸ್ಥರು ಜಮೀರ್ ನನ್ನು ಕೊಲೆ ಮಾಡಲಾಗಿದೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.

ಆತನ ಮೃತ ದೇಹ ಶಿವಮೊಗ್ಗ ಮರುಣೋತ್ತರ ಪರೀಕ್ಷೆಗೆ ಕರೆತರುವ ಸಾಧ್ಯತೆ ಇದೆ.ಹೆಚ್ಚಿನ‌ಮಾಹಿತಿ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಳ್ಳಬೇಕಿದೆ.


About The Author

Leave a Reply

Your email address will not be published. Required fields are marked *

Exit mobile version