ರಿಪ್ಪನ್ ಪೇಟೆ : ಸದೃಢ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಪಣತೊಡಬೇಕು ಎಂಬ ಆಶಯದೊಂದಿಗೆ ಆ ನಿಟ್ಟಿನಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆ ಮೂಲಕ ಜನಜಾಗೃತಿ ಗೊಳಿಸುತ್ತಿರುವುದು  ವಿಶೇಷ.
 ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ- ಐನಾಪುರ ಗ್ರಾಮದ ಶ್ರೀ ಕ್ಷೇತ್ರ ಹೊಂಬುಜ ಪದ್ಮಾವತಿ ಪಾದಯಾತ್ರ  ಸಂಘವು   ಈ ಕಾರ್ಯದಲ್ಲಿ ತೊಡಗಿಕೊಂಡಿದೆ.
 ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಶ್ರೀ ಕ್ಷೇತ್ರ ಹೊಂಬುಜಕ್ಕೆ  ಸುಮಾರು 450  ಕಿಲೋ ಮೀಟರ್ ಪಾದಯಾತ್ರೆ ಯಲ್ಲಿ ಬಂದು ದರ್ಶನ  ಪಡೆಯುತ್ತಿದ್ದಾರೆ.
 ಪದ್ಮಾವತಿ ಪಾದಯಾತ್ರಾ ಸಂಘ ಐನಾಪುರ್ ಶಿರಹಟ್ಟಿಯಿಂದ  ಪ್ರಾರಂಭವಾದ  ಪಾದಯಾತ್ರೆ ಯಲ್ಲಿ  ಮಾರ್ಗದುದ್ದಕ್ಕೂ ನಮ್ಮ  ಜೈನ ಧರ್ಮ ಪ್ರಭಾವನೆ ಆಗಬೇಕು. ಯುವಜನತೆ ವ್ಯಸನದಿಂದ  ಹಾಗೂ ದುಶ್ಚಟಗಳಿಂದ ಮುಕ್ತರಾಗಬೇಕು ಎಂಬ ಸದುದ್ದೇಶದಿಂದ ಈ ಪಾದಯಾತ್ರೆಯನ್ನು ಪ್ರತಿವರ್ಷ ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಈ ಪಾದಯಾತ್ರೆ ಯನ್ನು ಮಿಲಿಂದ್ ಪಾಟೀಲ್, ಯಶವಂತ್ ಪಾಟೀಲ್ ಸಂತೋಷ್ ಪಾಟೀಲ್  ಮುಂದಾಳತ್ವದಲ್ಲಿ ನಡೆಸಿಕೊಂಡು ಬಂದಿದ್ದೇವೆ ಎಂದು ಅಣ್ಣಪ್ಪ ಪಾಟೀಲ್  ರವರು ಮಾಹಿತಿ ನೀಡಿದರು.
 ಆರಂಭದಲ್ಲಿ ಕೇವಲ ಹದಿನೈದು ಜನರಿಂದ  ಪ್ರಾರಂಭವಾದ ಈ ಪಾದಯಾತ್ರೆ ಜನರು 2018  ರ ಹೊತ್ತಿಗೆ ಸುಮಾರು 150  ಕ್ಕೂ ಅಧಿಕ ಯಾತ್ರಾರ್ಥಿಗಳು ಸೇರ್ಪಡೆಗೊಂಡಿದ್ದರು.
  ಆರಂಭದಲ್ಲಿ ಊಟ ವಸತಿ ವ್ಯವಸ್ಥೆ ಗಳಿಗೆ ಸ್ವಲ್ಪ ಅಡಚಣೆಯಾಗಿತ್ತು .ಕ್ರಮೇಣ ಮಾರ್ಗ ಮಧ್ಯೆ ಕೆಲವು ಸಂಘ ಸಂಸ್ಥೆಗಳು ಸರ್ಕಾರ ಮತ್ತಿತರ ಇಲಾಖೆ ಅಧಿಕಾರಿಗಳು ಊಟೋಪಚಾರ ಸೇರಿದಂತೆ ರಾತ್ರಿ ತಂಗಲು ವಸತಿ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು .
 ಪ್ರತಿನಿತ್ಯ 35 – 40  ಕಿಲೋಮೀಟರ್ ನಡಿಗೆ ಹಾಕಿದ್ದೇವೆ.
 ಇಂದಿಗೆ 11 ದಿನಗಳಾಗಿದ್ದು ನಮ್ಮ ಪಾದಯಾತ್ರೆ ಅಂತಿಮಗೊಳ್ಳಲಿದೆ ಎಂದರು.
 2019 ರಲ್ಲಿ ಕೃಷ್ಣಾ ನದಿ ಪ್ರವಾಹ 20- 21 ರಲ್ಲಿ ರಲ್ಲಿ ಕೊರೋನಾ   ಹಿನ್ನಲೆಯಲ್ಲಿ ಪಾದಯಾತ್ರೆ ಸ್ಥಗಿತಗೊಂಡಿತ್ತು .2022 ರಲ್ಲಿ ಪುನಃ ಪಾದ ಯಾತ್ರೆ ಆರಂಭಗೊಂಡಿದ್ದು ಇದೀಗ 75 ಜನರ ತಂಡ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ ಎಂದರು.ಬಯಲು ನಾಡಿನಿಂದ ಮಲೆನಾಡಿನ ಕಡೆಯ ಈ ಪ್ರಯಾಣ ಆಯಾಸ ಕಂಡುಬರುವುದಿಲ್ಲ ಎಂದು ಸಂತೋಷ್ ಪಾಟೀಲ್ ಪೋಸ್ಟ್ ಮ್ಯಾನ್ ನ್ಯೂಸ್ ಗೆ ಮಾಹಿತಿ ನೀಡಿದರು .
 ಶುಕ್ರವಾರ ದೇವಿ ಪದ್ಮಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆ ದಿನದ ಅನ್ನ ಸಂತರ್ಪಣೆಯ ವೆಚ್ಚವನ್ನು  ಭಕ್ತರಿಗೆ ನಮ್ಮ ಖರ್ಚಿನಲ್ಲಿ ಭರಿಸುತ್ತೇವೆ  ಎಂದರು.
 ನಮ್ಮ ಈ ಕಾಯಕಕ್ಕೆ ಹೊಂಬುಜ ಜೈನ ಮಠದ ಪೀಠಾಧಿಕಾರಿ  ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅವರ ಪ್ರೇರಣೆ  ಕಾರಣ ಎಂದು ಯಾತ್ರಾರ್ಥಿಗಳು ತಿಳಿಸಿದರು.
 ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇
   


