ರಿಪ್ಪನ್‌ಪೇಟೆ: ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ದ 55ನೇ ವರ್ಷದ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷರಾಗಿ ವೈ.ಜೆ.ಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾದಿಕಾರಿಗಳ ವಿವರ :
ನಾಗರಾಜ ಪವಾರ್, ರಾಜೇಶ್ ಎಲ್.ಕೆ, ಸಂದೀಪ್‌ಶೆಟ್ಟಿ, ರವಿಚಂದ್ರ, ಹೆಚ್.ಆರ್.ಆಶೋಕ್, (ಉಪಾಧ್ಯಕ್ಷ), ತೀರ್ಥಶ್ ಅಡಿಕಟ್ಟು (ಕಾರ್ಯಾಧ್ಯಕ್ಷರು), ಶ್ರೀಧರ್, ಲಕ್ಷ್ಮಣ ಬಳ್ಳಾರಿ (ಸಹ ಕಾರ್ಯದರ್ಶಿ), ಶ್ರೀನಿವಾಸ ಆಚಾರ್ ಗ್ಯಾರೇಜ್, ಮಂಜುನಾಥ ಅಚಾರ್, ರಾಘವೇಂದ್ರ ಎಸ್.ಎಂ, ರಾಘವೇಂದ್ರ ಎಂ,(ಸಂಘಟನಾ ಕಾರ್ಯದರ್ಶಿ), ಸುಜೇಯ, ಸಹಾಸ್, ಸತೀಶ್ ಎಂ,(ಸಂಚಾಲಕರುಗಳು), ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಆರ್.ರಾಘವೇಂದ್ರ, ಎನ್.ಸತೀಶ್, ಸುಧೀಂದ್ರ ಪೂಜಾರಿ, ವಾಸುಶೆಟ್ಟಿ, ಆರ್.ಈ.ಭಾಸ್ಕರ್, ಕೆ.ಆರ್.ರವೀಂದ್ರ, ಈಶ್ವರ ಮಳಕೊಪ್ಪ, ನಾಗರಾಜ, ಎಸ್.ದಾನಪ್ಪ, ಮುರುಳಿ, ಕೆ.ವಿ.ಲಿಂಗಪ್ಪ ಕಗ್ಗಲಿ, ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹೆಚ್.ಎನ್.ಉಮೇಶ್, ಭಾಸ್ಕರ್ ಆಚಾರ್, ಡಿ.ಈ.ರವಿಭೂಷಣ, ರವಿಶೆಟ್ಟಿ, ಸತೀಶ್ ಶೆಟ್ಟಿ, ಲಕ್ಷ್ಮಣ, ವೀರಭದ್ರಪ್ಪ, ಆರ್.ಎಂ.ನವೀನ, ಸತೀಶ್ ಗವಟೂರು, ಜಿ.ಆರ್.ಮಂಜುನಾಥ, ಎ.ನವೀನ್, ದೇವರಾಜ್ ಪವಾರ್, ಜಿ.ರಂಜನ್, ದೇವರಾಜ್, ಆಯ್ಕೆಯಾಗಿದ್ದಾರೆ.
ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾದ ಗಣೇಶೋತ್ಸವವನ್ನು ಎರಡು ವರ್ಷ ಸರಳವಾಗಿ ಆಚರಿಸಲಾಗಿತ್ತು.
ಈ ಬಾರಿ 11 ದಿನಗಳ ಕಾಲ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನೆಯನ್ನು ಭಕ್ತಿ ಹಾಗೂ ಸಡಗರ,ಸಂಭ್ರಮದಿಂದ ಆಚರಿಸಲಾಗುವುದು ಎಂದು ನೂತನ ಅಧ್ಯಕ್ಷ ವೈ ಜೆ ಕೃಷ್ಣ ತಿಳಿಸಿದ್ದಾರೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್