ಪ್ರೀತಿಸಿ ಮದುವೆಯಾಗಲು ಮನೆಯವರು ಒಪ್ಪದೇ ಇರುವ ಕಾರಣ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಪೋಷಕರ ಆಶೀರ್ವಾದ ಪಡೆದು ಹೊಸ ಜೀವನವನ್ನು ಆರಂಭಿಸಬೇಕಾಗಿದ್ದ ಯುವ ಪ್ರೇಮಿಗಳ ಮದುವೆಯ ಪ್ರಸ್ತಾಪಕ್ಕೆ ಪೋಷಕರು ವಿರೋಧಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ
ಘಟನೆಯ ಹಿನ್ನಲೆ :
ತೀರ್ಥಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಪೇದೆ ಹಾಗೂ ಬೆಳಗಾವಿ ಮೂಲದ ಪ್ರವೀಣ್ ಎಂಬ ಅರಣ್ಯ ಫಾರೆಸ್ಟರ್ ಇಬ್ಬರು ಸುಮಾರು ವರ್ಷಗಳಿಂದ ಪ್ರೀತಿಸುತಿದ್ದು ಈಗ ಮನೆಯಲ್ಲಿ ಅವರಿಬ್ಬರ ಮದುವೆಗೆ ಒಪ್ಪದ ಹಿನ್ನಲೆಯಲ್ಲಿ ಇಬ್ವರು ಭದ್ರಾವತಿಯ ಆರ್ ಎಂಸಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ
ಆತ್ಮಹತ್ಯೆಗೆ ಯತ್ನಿಸಿದ ಪ್ರವೀಣ್ ನನ್ನು ಮೆಗ್ಗಾನ್ ಗೆ ದಾಖಲಿಸಲಾಗಿದೆ. ಯುವತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಧ್ಯಕ್ಕೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯುವತಿ ಭದ್ರಾವತಿ ತಾಲ್ಲೂಕು ಕಲ್ಲಾಪುರ ವಾಸಿಯಾಗಿದ್ದು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವೀಣ್ ತೀರ್ಥಹಳ್ಳಿಯಲ್ಲಿ ಅರಣ್ಯ ಸಿಬ್ಬಂದಿಯಾಗಿದ್ದು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಮೂಲದವರಾಗಿದ್ದಾರೆ.



