Headlines

ಗ್ರಾಮ ಪಂಚಾಯತ್ ಅಧ್ಯಕ್ಷಗಾದಿ ಕೈ ತಪ್ಪಿದ್ದಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ :

ಅಧ್ಯಕ್ಷಗಾದಿ ದೊರಕಲಿಲ್ಲವೆಂದು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಭದ್ರಾವತಿ ತಾಲೂಕಿನ ದೊಣಬಘಟ್ಟದಲ್ಲಿ(ದರಮಘಟ್ಟ) ಪೊಲೀಸ್ ಬಂದೋಬಸ್ತ್ ನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆದಿದ್ದು ಡ್ರಾಮಾ ಹೈಡ್ರಾಮಕ್ಕೆ ಎಡೆ‌ಮಾಡಿಕೊಟ್ಟಿದೆ.


ಖಲೀಮ್ ಎಂಬುವರು ಇಂದು ದೊಣಬಘಟ್ಟ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಆಯ್ಕೆ ಆಗುವುದು ಅದರಂತೆ ಉಪಾಧ್ಯಕ್ಷರಾಗಿ ಮಾಲಮ್ಮ ಎಂಬುವರು ಆಯ್ಕೆಯಾಗುವುದು ಬಹತೇಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಕೌಸರ್ ಭಾನು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಆಯ್ಕೆಗೂ ಮೊದಲು ಕೌಸರ್ ಭಾನು ಎಂಬ 50 ವರ್ಷದ ಮಹಿಳೆ ಅಧ್ಯಕ್ಷಗಾದಿಗಾಗಿ ದೊಣಬಘಟ್ಟ ಗ್ರಾಪಂ ಮುಂಭಾಗ ವಿಷ ಸೇವಿಸಲು ಮುಂದಾಗಿದ್ದಾರೆ.

ಈ ಸಂಧರ್ಭದಲ್ಲಿ ದೊಣಬಘಟ್ಟ ಗ್ರಾಪಂ ಆವರಣದಲ್ಲಿ ಕೆಲಕಾಲ ಗೊಂದಲದ ವಾತವರಣ ನಿರ್ಮಾಣವಾಗಿತ್ತು.ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಕೌಸರ್ ಭಾನು ವಿಷ ಸೇವಿಸಲು ಯತ್ನಿಸಿದ್ದೇಕೆ?

2021 ಫೆಬ್ರವರಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿದೆ. ಆದರೆ ಕೌಸರ್ ಸಹ ದೊಣಬಘಟ್ಟದ ಗ್ರಾಪಂ ಅಧ್ಯಕ್ಷದ ಆಕಾಂಕ್ಷಿಯಾಗಿದ್ದರು. ಈ ವೇಳೆ ಖಲೀಲ್ ನಾನು 14 ತಿಂಗಳು ಅಧ್ಯಕ್ಷನಾಗುತ್ತೇನೆ ನೀವು 14 ತಿಂಗಳ ಬಳಿಕ ಅಧ್ಯಕ್ಷರಾಗಿ ಎಂದು ಕೌಸರ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಆದರೆ ಖಲೀಲ್ ಮಾತಿಗೆ ತಕ್ಕಂತೆ 14 ತಿಂಗಳು ಅವಧಿ ಮುಗಿಸಿ ರಾಜೀನಾಮೆ ನೀಡಿದ್ದಾರೆ. ಒಡಂಬಡಿಕೆಯ ಪ್ರಕಾರ ಕೌಸರ್ ಭಾನು ಇಂದು ಅಧ್ಯಕ್ಷರಾಗಬೇಕಿತ್ತು ಎಂಬುದು ಅವರ‌ಬೆಂಬಲಿಗರ ಹೇಳಿಕೆಯಾಗಿದೆ. ಆದರೆ ಇಂದು‌ ಗ್ರಾಪಂ‌ ಅಧ್ಯಕ್ಷರಾಗಿ ಖಲೀಮ್ ಎಂಬುವರು ಆಯ್ಕೆಯಾಗಿದ್ದಾರೆ.

ಖಲೀಲ್ ಮತ್ತು ಎಲ್ಲಮ್ಮ ನನ್ನ ಬಳಿ ಹಣ ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬೇಕಿದ್ದ ನನಗೆ ಅಧ್ಯಕ್ಷ ಸ್ಥಾನದಿಂದ ತಪ್ಪಿಸಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಕೌಸರ್ ಭಾನು ಆರೋಪಿಸಿದ್ದಾರೆ.

ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಕೌಸರ್ ಭಾನು ಅವರನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *

Exit mobile version