Headlines

ಆರ್ ಎಸ್ ಎಸ್ ನಿಂದ ಮಾಹಿತಿ ಪಡೆದು ಗೃಹಸಚಿವರು ಹೇಳಿಕೆ ನೀಡುತ್ತಿದ್ದಾರೆ : ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ

ಗೃಹಸಚಿವ ಆರಗ ಜ್ಞಾನೇಂದ್ರರವರು ಚಂದ್ರು ಹತ್ಯೆಯ ಹೇಳಿಕೆಗೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನೆಡೆಸುತ್ತಿದ್ದು ಇಂದು ಶಿವಮೊಗ್ಗದಲ್ಲಿ ಬೇಳೂರು  ಗೋಪಾಲಕೃಷ್ಣ ಆರಗ ವಿರುದ್ಧ ವಾಗ್ದಾಳಿ ನೆಡೆಸಿದರು.

ಆರಗ ಮಾತನಾಡುವ ರೀತಿ ನೋಡಿದರೆ ಸಣ್ಣ ಮಕ್ಕಳು ಸಹ ಆ ರೀತಿ ಮಾತನಾಡುವುದಿಲ್ಲ. ಆರಗ ತಮ್ಮ ನೇತೃತ್ವದಲ್ಲಿ ಇರುವ ಅಧಿಕಾರಿಗಳ ಮಾಹಿತಿ ತೆಗೆದುಕೊಳ್ಳದೆ ಆರ್ ಎಸ್ ಎಸ್ ನಿಂದ ಮಾಹಿತಿ ಪಡೆದು ಹೇಳಿಕೆ ನೀಡಿದ್ದಾರೆ. 


ರಾಜ್ಯದಲ್ಲಿ ಕೋಮು ಪ್ರಚೋದನೆಗೆ ಗೃಹಸಚಿವರೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.  ಯಾವ ವ್ಯಕ್ತಿ ಸತ್ತರು ಅದನ್ನು ಕೋಮು ವಿವಾದ ಮಾಡುತ್ತಿದ್ದಾರೆ.  ರಾಜ್ಯಪಾಲರು ಇದ್ದರೆ ತಕ್ಷಣವೇ ಗೃಹಸಚಿವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು. 

About The Author

Leave a Reply

Your email address will not be published. Required fields are marked *

Exit mobile version