ಹೊಸನಗರ ಪಿಎಸ್ ಐ ರಾಜೇಂದ್ರನಾಯ್ಕ್ ವಿರುದ್ದ ನಡೆಯುತ್ತಿರುವ ಬೆಳವಣಿಗೆಗಳ ಹಿಂದಿದೆಯಾ ಮರಳು ಮಾಫ಼ಿಯಾ?????? ಪಿಎಸ್ ಐ ಪರವಾಗಿ ಹೊಸ ವೀಡಿಯೋ ವೈರಲ್


ಹೊಸನಗರ ಪಿಎಸ್ ಐ ರಾಜೇಂದ್ರನಾಯ್ಕ್ ಬಗ್ಗೆ ಇತ್ತೀಚೆಗೆ ಹೊಸನಗರ ಪಟ್ಟಣದ ನಾಗರೀಕರು ಮಾಡಿದ್ದ ವೀಡಿಯೋ ಗೆ ವಿರುದ್ದವಾಗಿ ಇಂದು ಕೆಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಇಂದು ಮಾತನಾಡಿರುವ ಹೊಸನಗರದ ಸಾರ್ವಜನಿಕರು ಪಿಎಸ್ ಐ ಮೇಲೆ ಇರುವ ಆರೋಪಕ್ಕೆ ಎಳೆ ಎಳೆಯಾಗಿ ಉತ್ತರ ನೀಡಿದ್ದಾರೆ.

ಪಿಎಸ್ ಐ ರಾಜೇಂದ್ರನಾಯ್ಕ್ ಬಗ್ಗೆ ಯಾಕಿಷ್ಟು ಧ್ವೇಷ ಎಂದೂ ಕೆದಕುತ್ತಾ ಹೊರಟರೇ ಕೊನೆಗೆ ಸಿಗುವುದೇ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಫ಼ಿಯಾ!!! ಹೌದು ರಾಜೇಂದ್ರನಾಯ್ಕ್ ಕರ್ತವ್ಯಕ್ಕೆ ಬಂದ ನಂತರದ ದಿನಗಳಿಂದ ಮರಳು ಕಳ್ಳರಿಗೆ ಮರಳು ಸಾಗಿಸಲು ಕಷ್ಟವಾಗುತಿದ್ದು ಅಕ್ರಮ ಕಲ್ಲು ಗಣಿಗಾರಿಕೆಗಳೆಲ್ಲಾ ಮುಚ್ಚಿಹೋಗಿವೆ ಇದನ್ನು ಸಹಿಸದ ಮಾಫ಼ಿಯಾದವರು ಈ ರೀತಿಯಾಗಿ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ಎನ್ನಲಾಗುತ್ತಿದೆ.

ಅಷ್ಟಕ್ಕೂ ರಾಜೇಂದ್ರನಾಯ್ಕ್ ರವರ ಮೇಲೆ ಈ ತರಹದ ಆರೋಪ ಹೊಸದೇನಲ್ಲ ಕೆಲದಿನಗಳ ಹಿಂದೆ ಮಾರುತಿಪುರ ಘಟನೆಯ ಒಂದು ವೀಡಿಯೋ ವೈರಲ್ ಆಗಿ ಪಿಎಸ್ ಐ ಬಗ್ಗೆ ಆಕ್ರೋಶದ ಧ್ವನಿ ಎದ್ದಿತ್ತು.

ಮಾರುತಿಪುರ ಘಟನೆಯ ಸತ್ಯಾಸತ್ಯತೆ

ಅಂದು ಹೊಸನಗರದ ಮಾರುತಿಪುರದ ವಿಜಾಪುರದಲ್ಲಿ ಸುಬ್ರಹ್ಮಣ್ಯನ ಅಸಹಜ ಸಾವಿಗೆ ಸಂಬಂಧಿಸಿದಂತೆ ರಾಜೇಂದ್ ನಾಯ್ಕ್​ ಬಂದಿದ್ದರು. ಈ ವೇಳೆ ಜಟ್ಟಪ್ಪ, ತನ್ನನ್ನೇ ಏನೋ ಮಾಡಲು ಬಂದಿದ್ದಾರೆ ಎಂದು ಕೊಂಡು ಪೊಲೀಸರ ಮೇಲೆ ಅಚಾನಕ್​ ದಾಳಿ ನಡೆಸಿದ್ದಾರೆ.

ಇದಕ್ಕೂ ಮೊದಲು ಜಟ್ಟಪ್ಪ ಕುಡಿದು ಬೀದಿಯಲ್ಲಿ ರಂಪ ಮಾಡ್ತಿದ್ದಾಗ ರಾಜೇಂದ್ರ ನಾಯ್ಕ್​ ಬುದ್ದಿವಾದವೂ ಹೇಳಿದ್ದರಂತೆ. ಈ ಸಿಟ್ಟು ಕೂಡ ಜಟ್ಟಪ್ಪನಲ್ಲಿತ್ತು.

ಊರಿನವರ ಪ್ರಕಾರ, ಜಟ್ಟಪ್ಪ ಸಾಮಾನ್ಯ ವ್ಯಕ್ತಿ ಆದರೆ ಆತ ಅವತ್ತು ವಿಚಿತ್ರವಾಗಿ ಆಡಿದ್ದ, ರಾಜೇಂದ್ರ ನಾಯ್ಕ್​​ರ ಮೇಲೆ ಹಲ್ಲೆ ಮಾಡಿ, ಅವರ ಕೈ ಕಚ್ಚಿದ್ದ, ಈ ವೇಳೆ ಆತನ ಒಂದು ಏಟು ಕೊಟ್ಟು ದೂರ ಕಳಿಸಿದ್ದರು.

ಆದರೆ ಮತ್ತೆ ಮತ್ತೆ ರೊಚ್ಚಿಗೆದ್ದ ಜಟ್ಟಪ್ಪ, ಎಸ್​ಐ ಕೈ ಕಾಲು ಸೇರಿದಂತೆ ಸಿಕ್ಕಲೆಲ್ಲಾ ಕಚ್ಚಿದ್ದಾನೆ. ಅಲ್ಲದೆ, ಬಿಡಿಸಲು ಬಂದ ಪೇದೆ ಅವಿನಾಶ್​ ನ ಬೆರಳಿಗೆ ಗಂಭೀರವಾದ ಗಾಯ ಮಾಡಿದ್ದಾನೆ.

ಇದರ ನಡುವೆ ಜಟ್ಟಪ್ಪನ ತನ್ನ ಬಳಿಯಿದ್ದ ಚಾಕುವನ್ನ ಕೂಡ ತೆಗೆದಿದ್ದಾನೆ. ಇದರಿಂದ ಏನೋ ಆಪಾಯವಿದೆ ಎಂದು ಅರಿತ ಎಸ್​ಐ ರಾಜೇಂದ್ರ ನಾಯಕ್​ ತಮ್ಮ ಜೀಪಿನತ್ತ ಬಂದಿದ್ದಾರೆ. ಅಲ್ಲದೆ ಪೇದೆ ಸಹಾಯದಿಂದ ಜಟ್ಟಪ್ಪನ ಬಂಧಿಸಿ ಕರೆದೊಯ್ಯಲು ಮುಂದಾಗಿದ್ಧಾರೆ.

ಈ ವೇಳೆ ಮತ್ತಷ್ಟು ಗಲಾಟೆ ಮಾಡಿದ ಜಟ್ಟಪ್ಪನಿಗೆ ಲಾಠಿ ಏಟು ಕೊಟ್ಟಿದ್ದಾರೆ. ಇನ್ನೂ ಅದಕ್ಕೂ ಮೀರಿ ರಾಜೇಂದ್ರ ನಾಯ್ಕ್​ರ ಕೊರಳು ಪಟ್ಟಿ ಹಿಡಿದು ಹೊಡೆಯಲು ಬಂದಾಗ ಊರಿನವರೆಲ್ಲರೂ ಸೇರಿಕೊಂಡು ಪೊಲೀಸರ ರಕ್ಷಣೆಗೆ ನಿಂತಿದ್ದಲ್ಲದೆ, ಜಟ್ಟಪ್ಪನ ಕೈ ಕಾಲು ಕಟ್ಟಿ ಹಾಕಿದ್ದಾರೆ.

ಸದ್ಯ ವಿಚಾರಣೆಯಲ್ಲಿ ಊರಿನವರು ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದು, ಘಟನೆ ಅಷ್ಟೆಲ್ಲಾ ಆಗೋದಕ್ಕೆ ಸಂಪೂರ್ಣವಾಗಿ ಜಟ್ಟಪ್ಪನೇ ಕಾರಣ. ಪೊಲೀಸರ ತಮ್ಮ ಕೈಲಾದಷ್ಟು ತಾಳ್ಮೆ ವಹಿಸಿದ್ದರು, ಘಟನೆ ನಂತರವೂ ಪೊಲೀಸರು ಹೈರಾಣಾಗಿದ್ದರು ಎಂದು ನಡೆದಿದ್ದನ್ನ ವಿವರಿಸಿದ್ಧಾರೆ.

ಇನ್ನೂ ಪೊಲೀಸ್​ ವಲಯದಲ್ಲಿಯು ಕೂಡ ರಾಜೇಂದ್ರ ನಾಯ್ಕ್​ರದ್ದು ಆಚಾನಕ್​ ನಡೆದ ಘಟನೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅಲ್ಲದೆ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಮರುದಿನವೇ ಹೊಸನಗರ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಹೀಗೆ ಖಡಕ್ ಪಿಎಸ್ ಐ ರಾಜೇಂದ್ರನಾಯ್ಕ್ ರವರನ್ನು ಅರಗಿಸಿಕೊಳ್ಳಲು ಆಗದ ಅಕ್ರಮ ಮರಳು ಮತ್ತು ಕಲ್ಲು ಮಾಫ಼ಿಯಾದವರು ಹೀಗೆ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ ಎಂದು ಹೊಸನಗರದ ಜನತೆ ಮಾತನಾಡಿಕೊಳ್ಳುತಿದ್ದಾರೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇👇

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…

53 minutes ago

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ A school bus lost control…

8 hours ago

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ Congress leaders in Sagar have hit…

10 hours ago

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Summa S.…

13 hours ago

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ Power outage in…

17 hours ago

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ Retired government employees were specially honoured by senior…

20 hours ago