Headlines

ಸಮಾಜದ ಮಹಿಳಾ ವರ್ಗಕ್ಕೆ ಸ್ಪೂರ್ತಿಯ ಚಿಲುಮೆಯಾಗಿರುವ ಹೊಸನಗರದ ಸೀಮಾ ಕಿರಣ್ ತೆಂಡೂಲ್ಕರ್ :

ಹೊಸನಗರ, ತಾಲ್ಲೂಕಿನ ಕೊಡಚಾದ್ರಿ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷೆ ಸೀಮಾ ಶರಾವ್ ರವರ ಸಮಾಜ ಮುಖಿ ಕೆಲಸಗಳಿಗೆ ಸಾರ್ವಜನಿಕರ ಗಮನ ಸೆಳೆದಿದೆಯಲ್ಲದೇ ತಾಲ್ಲೂಕಿನ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳು  ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಲಾಗಿದೆ.


ಸೀಮಾ ಕಿರಣ್ ತೆಂಡೂಲ್ಕರ್ ರವರು ಹಲವು ವರ್ಷಗಳಿಂದ ಸದಸ್ಯರಾಗಿದ್ದ ಹೊಸನಗರದ ಕೊಡಚಾದ್ರಿ ಜೆಸಿಐ ಸಂಸ್ಥೆಯಲ್ಲಿ ಅಧ್ಯಕ್ಷೆಯಾಗಿ ಮೂರೇ ತಿಂಗಳಲ್ಲಿ ಸಾಮಾಜಿಕ ಕಳಕಳಿಯನ್ನು ಹೊತ್ತು ಅನೇಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೊಸನಗರ ತಾಲ್ಲೂಕಿನಲ್ಲಿ ಪ್ರಚಲಿತರಾಗಿದ್ದಾರೆ.


ಮಾನವರ ದೇಹದಿಂದ ಸಾರ್ವಜನಿಕರಿಗೆ ಅಗತ್ಯವಿರುವ ರಕ್ತದಾನ ಶಿಬಿರ, ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಶಸ್ತ್ರ ಚಿಕಿತ್ಸೆಯ ನಂತರ ತಲೆ ಮೇಲಿನ ಕೂದಲುಗಳು ಉದುರಿರುವವರಿಗೆ ಕೇಶ ಧಾನ, ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಿ ನೇತ್ರ ದಾನ ಶಿಬಿರ ಹೀಗೆ ವಿಭಿನ್ನ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಜೇಸಿಐ ಹೊಸನಗರ ಕೊಡಚಾದ್ರಿ ಸಂಸ್ತೆಗೆ ಹೊಸತನವನ್ನು ನೀಡಿದ್ದಾರೆ.


ಇತ್ತೀಚೆಗೆ ಜೆಸಿಐ ಹೊಸನಗರ ಕೊಡಚಾದ್ರಿ ಸಂಸ್ಥೆಯ ಮೂಲಕ ಹೋಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಮಹಿಳೆಯರೇ ವಿವಿಧ ರೀತಿಯ ಬಣ್ಣ ಹಚ್ಚಿ ಹೋಳಿ ಹಬ್ಬವನ್ನು ಆಚರಿಸುವುದರ ಜೊತೆಯಲ್ಲಿಯೇ, ಸ್ವಚ್ಛತೆ ಕಾರ್ಯಕ್ರಮ, ಅಗ್ನಿ ಶಾಮಕದಳದ ಅಧಿಕಾರಿಗಳಿಂದ ಅಗ್ನಿ ದುರಂತವನ್ನು ತಪ್ಪಿಸುವುದರ ಬಗ್ಗೆ ಸಾರ್ವಜನಿಕರಿಗೆ  ಮಾಹಿತಿಗಳನ್ನು ತಿಳಿಸುವುದು, ಪರ್ಯಾವರಣ ಮಿತ್ರ ಹಸಿರಿಕರಣದ   ಕಾರ್ಯಕ್ರಮದ ಅಡಿಯಲ್ಲಿ ನಿವೃತ್ತ ಎಎಸ್ಐ, ಜೆ ಸಿ ಕೇಶವರವರ ಪತ್ನಿ ಜೆ ಸಿ ಶೈಲಜಾರವರ ಹುಟ್ಟುಹಬ್ಬವನ್ನು
“ಕೇಕ್ ಬಿಡಿ ಗಿಡ ನೆಡಿ ” ಶೀರ್ಷಿಕೆಯಡಿ ಗಿಡವನ್ನು ನೆಡುವುದು, ಅಂತರ್ರಾಷ್ಟ್ರೀಯ  ಮಹಿಳಾ ದಿನಾಚರಣೆಯ ಪ್ರಯುಕ್ತ ಬಿಸಿಎಂ ಹಾಸ್ಟೆಲ್ ಹೊಸನಗರದಲ್ಲಿ ಉಚಿತ ದಂತ ತಪಾಸಣೆ, ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ, ಕೌನ್ಸಿಲಿಂಗ್, ಮಾಡಲಾಗಿದೆ,

ದಂತ ವೈದ್ಯರಾದ ಡಾಕ್ಟರ್ ಆತ್ಮ ಗೌಡರವರಿಂದ ದಂತ ಪರೀಕ್ಷೆ, ಆಪ್ತ ಸಮಾಲೋಚಕರಾದ ಶ್ರೀಮತಿ ಸುಷ್ಮಾ ಹೆಬ್ಬಾರ್, ಆರೋಗ್ಯ ತಜ್ಞರಾದ  ಕರಿಬಸಮ್ಮ, ಲ್ಯಾಬ್ ಟೆಕ್ನಿಷಿಯನ್ ಶ್ರೀಮತಿ ಲತಾ, ಅಂಚೆ ಇಲಾಖೆ ನೌಕರರು ಶ್ರೀಮತಿ ಪವಿತ್ರ, ರವರ ನಿಸ್ವಾರ್ಥ ಸೇವೆಗಾಗಿ  ಸನ್ಮಾನಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಸೀಮಾ ಶರಾವ್ ರವರು ಮೊದಲು ತಮ್ಮನ್ನು ತಾವು ಪ್ರೀತಿಸಿ, ಆಗಲೇ ಬೇರೆಯವರನ್ನು ಪ್ರೀತಿಸುವ ಮನಸ್ಸು ಬರುತ್ತದೆ” ಎಂಬ ಸಂದೇಶವನ್ನು ಕೊಟ್ಟರು.
ಜೆಸಿ ಪೂರ್ಣೇಶ್ ರವರು  ಹೆಣ್ಣಾಗಿ ಹುಟ್ಟಿ ಸಂತೋಷ ಪಡುವುದರ ಜೊತೆಗೆ ಹೆಣ್ಣಿನ ಸ್ಥಾನವನ್ನು ಉಳಿಸಿಕೊಳ್ಳುವುದರ ಮೂಲಕ ಜವಾಬ್ದಾರಿಯನ್ನು ನಿರ್ವಹಿಸುವ ಬಗ್ಗೆ ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ಪಟ್ಟಣ  ಪಂಚಾಯಿತಿಯ ಉಪಧ್ಯಕ್ಷರಾದ ಕೃಷ್ಣವೇಣಿ ಅವರು ಎಲ್ಲ ಕ್ಷೇತ್ರದಲ್ಲೂ ಹೆಣ್ಣುಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನ್ನು ಕೊಟ್ಟರು. ಹೊಸನಗರ ಕೋರ್ಟ್ ನೌಕರರಾದ ಜೆಸಿ ರೇಖಾ ಹರೀಶ್ ರವರು ಹೆಲ್ಮೆಟ್ ಮತ್ತು ರಸ್ತೆ ನಿಯಮ ಪಾಲಿಸುವಂತೆ ಕರೆಕೊಟ್ಟರು.

ಜೆಸಿ ಪವಿತ್ರ ರವರು ಯಾವುದೇ ಕೆಲಸ ದೊಡ್ಡದು ಅಲ್ಲ ಚಿಕ್ಕದೂ ಅಲ್ಲ ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ವ್ಯವಸ್ಥಾಪಕರು ಕುಮಾರಿ ಕಲಾವತಿ, ಕಲ್ಯಾಣ ಅಧಿಕಾರಿ ಮಂಜಪ್ಪ ಕೆ,ಹಾಜರಿದ್ದರು.

ಮೆಟ್ರಿಕ್ ಪೂರ್ವ ಸರ್ಕಾರಿ ಹಾಸ್ಟೆಲ್ ಹೊಸನಗರ ವಾರ್ಡನ್ ಕಲ್ಪನಾ ರವರ ಸಹಕಾರದಲ್ಲಿ ವಿಜ್ಞಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಬಿ ಎಸ್ ಸುರೇಶ್ ರವರು ಉಪನ್ಯಾಸ ನೀಡಿದರು. ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪುನೀತ್ ಜನ್ಮದಿನದ ಪ್ರಯುಕ್ತ ನೇತ್ರ ತಪಾಸಣೆ ಮತ್ತು ನೇತ್ರದಾನ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದರು. ನೇತ್ರ ವೈದ್ಯರು ಕೃಷ್ಣ ರಾಜ್ ಕಣ್ಣಿನ ಮಹತ್ವವನ್ನು ತಿಳಿಸುವುದರ ಜೊತೆಗೆ ಉಚಿತ ತಪಾಸಣೆಯನ್ನು ಮಾಡಿದರು. ಮುಖ್ಯ ವೈದ್ಯರು ಶಾಂತರಾಜ್ ರವರು ಕಣ್ಣಿನ ಮಹತ್ವವನ್ನು ತಿಳಿಸಿದರು, ಸಿಬ್ಬಂದಿ ವರ್ಗದವರು, ಗಜೇಂದ್ರ ಸರ್ ಓಟಿ ಸ್ಪೆಷಲಿಸ್ಟ್, ಜೆಸಿ ಧನ್ಯಕುಮಾರ್ ಫಾರ್ಮಸಿಸ್ಟ್, ಶಾರಿಕಾ ಸಹಾಯಕರು ನೇತ್ರ ವಿಭಾಗ, ಸಾರ್ವಜನಿಕರು, ಜೆಸಿ ಸದಸ್ಯರು, ಭಾಗವಹಿಸಿದ್ದರು,

ಸೀಮಾ ಶರಾವ್ ರವರು ಕ್ಯಾನ್ಸರ್ ರೋಗಿಗಳ ಸಲುವಾಗಿ ತಮ್ಮದೇ ಕೇಶದಾನ ಮಾಡುವ ಮುಖಾಂತರ ಹಲವರಿಗೆ ಮಾದರಿಯಾಗಿದ್ದಾರೆ. ಹೊಸನಗರದ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ತಮ್ಮ ಮಗಳು ಜೆಸಿ ಅರ್ಚನಾ ಕರ್ವಾಲೋ, ರೋನೀಟಾ ಬಾಂಜ್, ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಓದುತ್ತಿರುವ ಜೆಸಿ ಸಿರಿ ರವರು ಸಹ ಕ್ಯಾನ್ಸರ್ ರೋಗಿಗಳಿಗೆ ಕೇಶ ದಾನವನ್ನು ಮಾಡಿ  ಮಾದರಿಯಾಗಿದ್ದಾರೆ.

ಜೆಸಿಐ ಹೊಸನಗರ ಕೊಡಚಾದ್ರಿಯಲ್ಲಿ   ಅಧ್ಯಕ್ಷರಾದ ಮೂರು ತಿಂಗಳುಗಳಲ್ಲಿ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡ ಇವರು ಬಳ್ಳಾರಿಯಲ್ಲಿ ನಡೆದ ಲೋಕಲ್ ಆರ್ಗನೈಸೇಷನ್ ಆಫೀಸರ್ಸ್ ಟ್ರೈನಿಂಗ್ ನಲ್ಲಿ ಹಲವಾರು ಪುರಸ್ಕಾರಗಳನ್ನು ಪಡೆದಿರುತ್ತಾರೆ. ಮೈಸೂರಿನ ಪ್ರತಿಷ್ಠಿತ ಸಂಸ್ಥೆಯಾದ ದುರ್ಗಾ ಫೌಂಡೇಶನ್ ರವರು, ಇವರ ಸಮಾಜ ಸೇವೆಯನ್ನು ಗುರುತಿಸಿ “ಕರ್ನಾಟಕ ಮಹಿಳಾ ರತ್ನ” ಅವಾರ್ಡ್ ನೀಡಿರುತ್ತಾರೆ.

ಮಹಿಳಾ ದಿನಾಚರಣೆಯ ಪ್ರಯುಕ್ತ ತ್ರಿಣಿವೆ ಗ್ರಾಮ ಪಂಚಾಯಿತಿ, ಬ್ರಹ್ಮಕುಮಾರಿ ಹೊಸನಗರ ಇವರು  ಮಹಿಳಾ ಸಾಧಕಿ ಎಂದು ಗೌರವಿಸಿದ್ದಾರೆ, ಹೀಗೆ ಹಲವಾರು  ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಜೆಸಿ ಸೀಮಾ ಕಿರಣ್ ಶರಾವ್ ರವರು ತಮ್ಮ ಅಧ್ಯಕ್ಷತೆಯಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ನೀಡಲಿ ಎಂದು  ಜೆಸಿಐ ಹೊಸನಗರ ಕೊಡಚಾದ್ರಿ, ಮತ್ತು ಸ್ನೇಹಿತರು, ಕುಟುಂಬದವರು, ಶುಭ ಹಾರೈಸಿದ್ದಾರೆ.

ವರದಿ : ಪುಷ್ಪಾ ಜಾಧವ್

Leave a Reply

Your email address will not be published. Required fields are marked *

Exit mobile version