Headlines

ಆನಂದಪುರ ಸಮೀಪ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ದಂಪತಿಗಳಿಗೆ ಗಾಯ :




ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಅನಾಹುತ ಸಂಭವಿಸಿದೆ.

ಅಮಟೆಕೊಪ್ಪ ದಿಂದ ಹಾಲುಗುಡ್ಡೆಗೆ ಗೃಹಪ್ರವೇಶದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಇರುವಕ್ಕಿ ಬಳಿ   ಬೈಕ್ ನಲ್ಲಿ ಕೂತಿದ್ದ ಗಂಡ ಹೆಂಡತಿಯ ಮೇಲೆ ಚಲಿಸುತ್ತಿರುವಾಗಲೇ ಬೃಹತ್ ಆಕಾರದ ಮರ ಬಿದ್ದು ಬೈಕ್ ಸವಾರರಿಗೆ ತೀವ್ರ ಗಾಯವಾಗಿದೆ


ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು  ಸ್ಥಳೀಯರ ಸಹಕಾರದಿಂದ ಇಬ್ಬರ ಜೀವ ಉಳಿದಂತಾಗಿದೆ.

ಬೈಕ್ ಇದೀಗ ಮರದಡಿ ಅಪ್ಪಚ್ಚಿಯಾಗಿದ್ದು ತೆರವುಗೊಳಿಸುವ ಕಾರ್ಯ ಚಾಲನೆಯಲ್ಲಿದೆ.

ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *

Exit mobile version