Headlines

ಹಿಜಾಬ್ – ಕೇಸರಿ ಶಾಲು ಸಂಘರ್ಷ : ಇಂದು ಶಿವಮೊಗ್ಗದ ATNC ಕಾಲೇಜಿಗೆ ರಜೆ ಘೋಷಣೆ !

ಶಿವಮೊಗ್ಗ : ಹಿಜಾಬ್, ಕೇಸರಿ ಶಾಲು ಸಂಘರ್ಷದ ಬೆನ್ನಿಗೆ, ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ (ATNCC) ಒಂದು ದಿನ ತರಗತಿ ನಡೆಸದಿರಲು ಆಡಳಿತ ಮಂಡಳಿ ನಿರ್ಧರಿಸಿದೆ.
ಫೆಬ್ರವರಿ 8ರಂದು ತರಗತಿ ನಡೆಯುವುದಿಲ್ಲ. ಆದರೆ ಉಪನ್ಯಾಸಕರು ಮತ್ತು ಸಿಬ್ಬಂದಿ ಕಾಲೇಜಿಗೆ ಬರಲಿದ್ದಾರೆ ಎಂದು ATNC ಕಾಲೇಜು ಪ್ರಾಂಶುಪಾಲರಾದ ಸುರೇಶ್ ಅವರು ತಿಳಿಸಿದ್ದಾರೆ.
ATNC ಕಾಲೇಜು ವಿದ್ಯಾರ್ಥಿಗಳು ನಿನ್ನೆ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಹಿಜಾಬ್ ಧರಿಸುವ ಸಂಬಂಧ ಮಂಗಳವಾರ ನ್ಯಾಯಾಲಯ ತೀರ್ಪು ನೀಡುವ ಸಾಧ್ಯತೆ ಇದೆ. ಆದ್ದರಿಂದ ಒಂದು ದಿನ ತರಗತಿ ನಡೆಸದಿರಲು ನಿರ್ಧರಿಸಲಾಗಿದೆ.
                                      ಜಾಹಿರಾತು

About The Author

Leave a Reply

Your email address will not be published. Required fields are marked *

Exit mobile version