Headlines

ಚಿನ್ಮನೆ ಬಳಿ ಭೀಕರ ಅಪಘಾತ : ಒಬ್ಬ ಸಾವು,ಇಬ್ಬರ ಸ್ಥಿತಿ ಗಂಭೀರ

ಚಿನ್ನಮನೆ ಗ್ರಾಮದ ಬಳಿ ಬೊಲೆರೊ ಪಿಕಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.ಅಪಘಾತವಾಗಿ ನಿಲ್ಲಿಸಿದ್ದ ಬೊಲೆರೊ ಪಿಕಪ್ ಗೆ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.


ಆಯನೂರು ಕಡೆಯಿಂದ ಬರುತ್ತಿದ್ದ ಬೊಲೆರೊ ಪಿಕಪ್ ವಾಹನಕ್ಕೆ ಸೂಡೂರು ಕಡೆಯಿಂದ ಆಯನೂರು ಕಡೆ ಬರುತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಚಿಕ್ಕಮಚಲಿ ಗ್ರಾಮದ ನಿವಾಸಿ ಶ್ಯಾಮು (40) ಎಂಬುವವನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.


ನಂತರ ಹಿಂಬದಿಯಿಂದ ಬಂದು ಬೊಲೆರೊ ಪಿಕಪ್ ಗೆ ಡಿಕ್ಕಿ ಹೊಡೆದ ಇನ್ನೊಂದು ಬೈಕ್ ನ ಸವಾರ ದೊಡಮಚಲಿ ಗ್ರಾಮದ ನಿವಾಸಿ ಗೋಪಾಲಕೃಷ್ಣ,ಹಿಂಬದಿ ಕುಳಿತಿದ್ದ ರವಿ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು ಮೆಗ್ಗಾನ್ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.


ಹೆಚ್ವಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

About The Author

Leave a Reply

Your email address will not be published. Required fields are marked *

Exit mobile version