ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಗೌಸಿಯಾ ಹೋಟೆಲ್ ನಲ್ಲಿ ಗ್ಯಾಂಗ್ ವಾರ್ ಮಾರಾಮಾರಿ ನಡೆದಿದೆ. ರಿಯಲ್ ಎಸ್ಟೇಟ್ ನ ಹಣದ ವಿಚಾರದಲ್ಲಿ ಯುವಕರ ನಡುವೆಯೇ ಭರ್ಜರಿ ಕಾಳಗವೇ ನಡೆದಿದೆ
ಶಿವಮೊಗ್ಗದ ಬಹುತೇಕ ಮಂದಿಗೆ ಈ ಗೌಸಿಯಾ ಹೋಟೆಲ್ ನೆನಪಿರಬಹುದು, ಹೋಗಲಿ ಮಾಲೀಕ ಮನ್ಸೂರ್ ನೆನಪಿರಬಹುದು. ಹೋಗಲಿ ಅಸಲಿ ಫ್ಲಾಶ್ ಬ್ಯಾಕ್ ಹೇಳಬಿಡುತ್ತೇನೆ. ಬುಡಬುಡಕಿ ಸಾಧಿಕ್ ನ ಮರ್ಡರ್ ಪ್ರಕರಣದಲ್ಲಿ ಅರೊಪಿಯಾಗಿ ಜೈಲಿನಲ್ಲಿರುವ ಮನ್ಸೂರೇ ಈ ಹೋಟೆಲ್ ನ ಮಾಲೀಕ. ಬುಡಬುಡಕಿ ಸಾಧಿಕ್ ನ ಕೊಲೆಯೂ ಇದೇ ರಿಯಲ್ ಎಸ್ಟೇಟ್ ವಿಚಾರದಲ್ಲಿ ನಡೆದಿತ್ತು.
ಈಗ ಗೌಸಿಯಾ ಹೋಟೆಲ್ ನಲ್ಲಿ ಇಂದು ರಾತ್ರಿ ನಡೆದಿದ್ದು ಅದೇ ರಿಯಲ್ ಎಸ್ಟೇಟ್ ವಿಚಾರಕ್ಕೆ. ಒಂದು ತರಹ ರಿಯಲ್ ಎಸ್ಟೇಟ್ ಉದ್ದಿಮೆಗಳ ಹಾಟ್ ಸ್ಪಾಟ್ ಆಗೋಗಿರುವ ಗೌಸಿಯಾ ಹೋಟೆಲ್ ನಲ್ಲಿ ಮಾಜಿಕಾರ್ಪರೇಟರ್ ರೆಹಮಾನ್ ಅವರ ಮಗ ಶಫಿ ಜಮೀನಿನ ಖರೀದಿ ವಿಚಾರದಲ್ಲಿ ಜುನೈದ್ ಬಳಿ ಬಂದು ಹಣ ಕೇಳ್ತಾನೆ.
ಮನ್ಸೂರ್ ನ ಸಹೋದರ ಸೈಫುಲ್ಲಾ ಈ ಜುನೈದ್ ನ ಸಂಬಂಧಿಯೂ ಸಹ ಹೌದು, ಯಾವಾಗ ಜುನೈದ್ ಹಣದ ವಿಚಾರ ನನ್ನ ಬಳಿ ಹೇಳಬೇಡ ಯಾರಿಗೆ ನೀನು ವ್ಯವಹಾರ ಮಾಡಿಕೊಂಡಿದ್ಯೋ ಅವರನ್ನ ಕೇಳು ಎಂದು ಹೇಳುತ್ತಾನೆ. ಇಷ್ಟಕ್ಕೆ ಕುಪಿತನಾದ ಶಫಿ ಕೂಗಾಡುತ್ತಾನೆ. ಜುನೈದ್ ಮೇಲೆ ಹಲ್ಲೆ ನಡೆಸುತ್ತಾನೆ.
ಹೊರಗಡೆ ಹೋಗಿ ಸಿದ್ಧಿಕಿಯನ್ನ ಕರೆದುಕೊಂಡು ಬರುತ್ತಾನೆ. ಸಿದ್ದಕಿ, ಶಫಿ ಹಾಗೂ ಜುನೈದ್ ಮತ್ತು ಸೈಫುಲ್ಲಾ ನಡುವೆ ಗ್ಯಾಂಗ್ ವಾರ್ ಟೈಪು ಮಾರಾಮಾರಿ ನಡೆಯುತ್ತೆ. ಈ ವೇಳೆ ಸ್ಥಳಕ್ಕೆ ಬಂದ ದೊಡ್ಡಪೇಟೆ ಪೊಲೀಸರು ಮಧ್ಯಪ್ರವೇಶದಿಂದ ಜಗಳ ತಣ್ಣಗಾಗುತ್ತೆ.
ಜುನೈದ್ ಈ ವಿಚಾರದಲ್ಲಿ ಶಫಿ ವಿರುದ್ಧ ದೂರು ನೀಡುತ್ತಾನೆ. ಶಫಿಗೆ ದೊಡ್ಡಪೇಟೆ ಪೊಲೀಸರು ಶರಣಾಗಲು ಸೂಚಿಸಿದ್ದಾರೆ.
ಮಾಹಿತಿ ಕೃಪೆ : @ ಸುದ್ದಿ ಲೈವ್