ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಕಲ್ಲು ಗಣಿಗಾರಿಕೆಗಳು ತಾರಕಕ್ಕೇರಿದ್ದು ಅದರಂತೆ ಶಿವಮೊಗ್ಗದ ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ನವೀನ್ ವಿ.ಎಸ್ ನೇತೃತ್ವದ ತಂಡ ನಂಜವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ತುಂಬಿದ ಎರಡು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಹಾಗೇಯೆ ಆನಂದಪುರದಲ್ಲಿ ಅಕ್ರಮ ಜಂಬಿಟ್ಟಿಗೆ ನಡೆಸುತ್ತಿದ್ದ ಗಣಿಗಾರಿಕೆಗೆ ನುಗ್ಗಿ ಅಕ್ರಮಕ್ಕೆ ಬಳಸಿದ್ದ ಎರಡು ಜೆಸಿಬಿ ವಶ ಪಡಿಸಿಕೊಂಡು ಒಟ್ಟು ಎರಡು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅಕ್ರಮ ಮರಳು ಮಾಫ಼ಿಯಾ ನಡೆಸುವವರಿಗೆ ಎಚ್ಚರಿಕೆ:
ಹೊಸನಗರ ತಾಲ್ಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಆಕ್ರಮ ಮರಳುಗಾರಿಕೆ ನಡೆಸುತ್ತಿರುವವರಿಗೆ ಭೂ ವಿಜಾನ ಇಲಾಖೆಯ ಅಧಿಕಾರಿ ನವೀನ್ ರವರು ಎಚ್ಚರಿಕೆ ನೀಡಿದ್ದು ತಕ್ಷಣ ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೇ ಮುಂದಿನ ದಿನದಲ್ಲಿ ಅಕ್ರಮವಾಗಿ ಮರಳು, ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮವಾಗಿ ಗ್ರಾಮಗಳಲ್ಲಿ ಮರಳು ಗಣಿಗಾರಿಕೆ ಅಥವಾ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೇ ತಕ್ಷಣ ನಮ್ಮ ಇಲಾಖೆಯ ಗಮನಕ್ಕೆ ತನ್ನಿ,ಹಾಗೇಯೆ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಈ ಸಂಧರ್ಭದಲ್ಲಿ ತಿಳಿಸಿದ್ದಾರೆ.