Headlines

ಪ್ರಪಂಚದ ಸಕಲ ಜೀವಿಗಳ ಮೇಲೆ ಸೃಷ್ಟಿಕರ್ತನು ದಯೆ ತೋರಲಿ : ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್-ಬುಖಾರಿ (ಕೂರತ್ ತಂಙಳ್).

ರಿಪ್ಪನ್ ಪೇಟೆ : ಪ್ರಪಂಚದ ಸಕಲ ಜೀವಿಗಳ ಮೇಲೆ ಸೃಷ್ಟಿಕರ್ತನ ದಯೆ ಇರಲಿ, ಪ್ರಪಂಚಕ್ಕೆ ಅಂಟಿಕೊಂಡಿರುವ ಕೊರೊನಾ ಮಹಾಮಾರಿ ಮುಕ್ತವಾಗಲಿ ಎಂದು ಮುಸ್ಲಿಂ ಧರ್ಮಗುರು ಬಹು|| ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್-ಬುಖಾರಿ (ಕೂರತ್ ತಂಙಳ್) ಹೇಳಿದರು.

ಇಲ್ಲಿನ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಆಯೋಜಿಸಿದ್ದ ನೂತನ ಉಳೂಖಾನ ಶಿಲಾನ್ಯಾಸ,ಮಹಿಳಾ ಷರಿಯತ್ ಕಾಲೇಜು ಮತ್ತು ಪ್ರತ್ಯೇಕ ಮಹಿಳಾ ನಮಾಜ್ ಕೊಠಡಿ ಉದ್ಘಾಟನೆಯನ್ನು ನೆರವೇರಿಸಿದ ಅವರು 2019 ರಿಂದ ಇಡೀ ಜಗತ್ತನ್ನೆ ತಲ್ಲಣಗೊಳಿಸಿದಂತಹ ಕೊರೊನಾ ಮಹಾಸೋಂಕು ಲಕ್ಷಾಂತರ ಜನರನ್ನು ಬಲಿ ಪಡೆಯುವದರೊಂದಿಗೆ ಕೋಟ್ಯಾಂತರ ಜನರನ್ನು ಸೋಕಿತರನ್ನಾಗಿಸಿದೆ ಇಂತಹ ಮಹಾಮಾರಿ ತೊಲಗಿ ಇಡೀ ಪ್ರಪಂಚವೇ ಕೊರೊನಾ ಮುಕ್ತವಾಗಲಿ,ಪ್ರಪಂಚದ ಸಕಲ ಜೀವಿಗಳ ಮೇಲೆ ಸೃಷ್ಟಿಕರ್ತನ ದಯೆ ಇರಲಿ ಎಂದು ದುವಾ ನೆರವೇರಿಸಿದರು.


ಇದೇ ಸಂಧರ್ಭದಲ್ಲಿ ಗವಟೂರಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮದರಸ ಕಟ್ಟಡಕ್ಕೆ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್-ಬುಖಾರಿ (ಕೂರತ್ ತಂಙಳ್) ರವರು ಶಂಕುಸ್ಥಾಪನೆ ನೆರವೇರಿಸಿದರು.


ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫಿ, ಜುಮ್ಮಾ ಮಸೀದಿ ಖತೀಬ್ ಮುನೀರ್ ಸಖಾಫಿ,ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷರಾದ ಆರ್ ಎ ಚಾಬುಸಾಬ್,ಗ್ರಾಪಂ ಸದಸ್ಯರಾದ ಆಸೀಫ಼್ ಭಾಷಾಸಾಬ್,ಸಾಮಾಜಿಕ ಹೋರಾಟಗಾರ ಆರ್ ಎನ್ ಮಂಜುನಾಥ್,ಹಿರಿಯ ಖತೀಬ್ ಜಬ್ಬಾರ್ ಸಅದಿ,ಸೈಫ಼ುಲ್ಲಾ,ಇಸ್ಮಾಯಿಲ್ ಸಖಾಫ಼ಿ ,ಜುಮ್ಮಾ ಮಸೀದಿ ಕಾರ್ಯದರ್ಶಿಯಾದ ಶಫ಼ಿ ಚಾಬುಸಾಬ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Exit mobile version