ಸಾಗರದ ಕೆ ಎಸ್ ಆರ್ ಟಿಸಿ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯ ಆನಂದಪುರದಲ್ಲಿ ಬಸ್ ಹತ್ತುವಾಗ ಕೆಳಗೆ ಬಿದ್ದ ವಿದ್ಯಾರ್ಥಿನಿ!!!!!! ಸಾಗರ ಬಸ್ ಡಿಪೋ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಬೆಳಿಗ್ಗೆ 9.15 ರ ಸಂದರ್ಭದಲ್ಲಿ ಶಿವಮೊಗ್ಗದಿಂದ ಸಾಗರದ ಕಡೆ ಬಸ್ ಹೊರಟ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬಸ್ ಹತ್ತುತ್ತಿದ್ದರು ಇನ್ನೂ ಹತ್ತು ಜನ ಹುಡುಗರು ಬಸ್ ಹತ್ತುತ್ತಿರುವಂತಹ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯತನದಿಂದ ಒಬ್ಬ ವಿದ್ಯಾರ್ಥಿನಿ ಬಸ್  ಹತ್ತುತ್ತಿರುವಾಗಲೇ ಬಸ್ಸನ್ನು ಚಲಾಯಿಸಿದ್ದರಿಂದ  ವಿದ್ಯಾರ್ಥಿನಿಯೊಬ್ಬಳು ಬಸ್ಸಿನಿಂದ ಕೆಳಗೆ ಬಿದ್ದಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ತಕ್ಷಣ ಉಳಿದ ವಿದ್ಯಾರ್ಥಿಗಳು ಆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಸಾಗರದ ಕೆಎಸ್ ಆರ್ ಟಿಸಿ ಬಸ್ ಡಿಪೋ ಮುಂದೆ ಧರಣಿ ನಡೆಸಿದರು.
ಈ ಬಸ್ ನವರು ಪ್ರತಿದಿನ ಹೀಗೆ ಗಡಿಬಿಡಿ ಮಾಡುತ್ತಿದ್ದಾರೆ ಹಾಗೂ ನಮಗೆ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಹಾಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ತೊಂದರೆ ಕೊಡಬೇಡಿ ಎಂದು  ಡಿಪೋ ಮ್ಯಾನೇಜರ್ ಹತ್ತಿರ ಮನವಿ ಕೂಡ ಮಾಡಿದರು.
ಮನವಿಗೆ ಸ್ಪಂದಿಸಿ ದಂತಹ ಡಿಪೋದವರು ಇನ್ನು ಮುಂದೆ ಈ ರೀತಿಯಾದಂತಹ  ದುರ್ಘಟನೆ ನಡೆಯುವುದಿಲ್ಲ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಿಗ್ಗೆ ಸಂದರ್ಭದಲ್ಲಿ  2 ಬಸ್ಸುಗಳನ್ನು ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಈ ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿಎಂ ಚಿನ್ಮಯ್,ಅಜಿತ್ ಕೇಶವ್,ರೋಷನ್, ವಾಗೇಶ, ಅಜಿತ್ M.N ,ಸಂಚಿತ,ಮಾಲತಿ, ಜ್ಯೋತಿ,ಸಹನಾ,ನೇಹಾ ಇನ್ನಿತರರು ಉಪಸ್ಥಿತರಿದ್ದರು.




ವರದಿ : ಪವನ್ ಕುಮಾರ್ ಕಠಾರೆ
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ನಾಗರ ಪಂಚಮಿ ವಿಶೇಷ : ಆಗಸ್ಟ್ 17ರಂದು ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರೆ — ಭಕ್ತರಿಗೆ ಇಲ್ಲಿದೆ ಮಾಹಿತಿ

ನಾಗರ ಪಂಚಮಿ ವಿಶೇಷ : ಆಗಸ್ಟ್ 17ರಂದು ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರೆ — ಭಕ್ತರಿಗೆ ಇಲ್ಲಿದೆ ಮಾಹಿತಿ…

6 hours ago

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ Ripponpete Kenchanala Sri Marikamba Devi…

6 hours ago

ಅಂಬ್ಲಿಗೋಳ ಜಲಾಶಯ ಭರ್ತಿ: ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರರಿಂದ ಬಾಗಿನ ಅರ್ಪಣೆ

ಅಂಬ್ಲಿಗೋಳ ಜಲಾಶಯ ಭರ್ತಿ: ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರರಿಂದ ಬಾಗಿನ ಅರ್ಪಣೆ Shikaripura MLA B.Y. Vijayendra…

6 hours ago

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ Mysuru DRM Mudit Mittal inspected…

7 hours ago

ರಿಪ್ಪನ್‌ಪೇಟೆ–ಆಯನೂರು ರಸ್ತೆ ಬಂದ್; 9 MS ಬಳಿ ಬೃಹತ್ ಮರ ಉರುಳಿ ಟ್ರಾಫಿಕ್ ಜಾಮ್ , ಪರ್ಯಾಯ ಮಾರ್ಗ ಮಾಹಿತಿ ಇಲ್ಲಿದೆ.

ರಿಪ್ಪನ್‌ಪೇಟೆ–ಆಯನೂರು ರಸ್ತೆ ಬಂದ್; 9 MS ಬಳಿ ಬೃಹತ್ ಮರ ಉರುಳಿ ಟ್ರಾಫಿಕ್ ಜಾಮ್ , ಪರ್ಯಾಯ ಮಾರ್ಗ ಮಾಹಿತಿ…

10 hours ago

ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್‌ ಬಳಕೆ ಆರೋಪ, FSSAI ಕಠಿಣ ಕ್ರಮ – ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!?? ಈ ಸುದ್ದಿ ನೋಡಿ

ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್‌ ಬಳಕೆ ಆರೋಪ, FSSAI ಕಠಿಣ ಕ್ರಮ - ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!??…

12 hours ago