ಶಿವಮೊಗ್ಗ ಕ್ಷೇತ್ರದ ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಡಿ ಎಸ್ ಅರುಣ್ ಗೆಲುವು ನಿಶ್ಚಿತ : ಎಂ ಬಿ ಮಂಜುನಾಥ್

ರಿಪ್ಪನ್ ಪೇಟೆ : ಶಿವಮೊಗ್ಗ ಕ್ಷೇತ್ರದ ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿ ಡಿ ಎಸ್ ಅರುಣ್ ಗೆಲುವು ನಿಶ್ಚಿತವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸಗಳೇ ಡಿ ಎಸ್ ಅರುಣ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ತಿಳಿಸಿದ್ದಾರೆ.

ಅವರು ಪೋಸ್ಟ್ ಮ್ಯಾನ್ ನ್ಯೂಸ್ ತಂಡದೊಂದಿಗೆ ಮಾತನಾಡಿ ರಾಜ್ಯದಲ್ಲಿ 25 ಕ್ಷೇತ್ರದಲ್ಲಿ ಯಡಿಯೂರಪ್ಪ ಕನಿಷ್ಠ 20 ಕ್ಷೇತ್ರದಲ್ಲಿ‌ ಗೆಲವು ಸಾಧಿಸಲು ಪಣತೊಟ್ಟಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 4166 ಮತದಾರರಿದ್ದು ಶೇ. 93.5 ರಷ್ಟು ಗ್ರಾಪಂ ಸದಸ್ಯರಿದ್ದಾರೆ. ಪ್ರತಿ ಪಂಚಾಯಿತಿಯಲ್ಲಿಯೂ ಕಾರ್ಯ ಪ್ರಮುಖ್ ನೇಮಿಸಲಾಗಿದೆ. ಎಂಎಲ್ಸಿ, ಎಂಪಿ, ಗ್ರಾಪಂ ಸದಸ್ಯರು ಹಾಗೂ ಪಾಲಿಕೆ, ನಗರಸಭೆ, ಪುರಸಭೆ ಸದಸ್ಯರು ಮತ ಚಲಾಯಿಸಲಿದ್ದಾರೆ ಎಂದರು.

ಪಂಚಾಯತ್ ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಈ ಅಡಿಪಾಯ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿಲುವುಗಳಿಂದ ಉತ್ತಮ ಸ್ಥಿತಿಯಲ್ಲಿದೆ. ಪಂಚಾಯತ್ ವ್ಯವಸ್ಥೆ ಪರಿಪೂರ್ಣ ಪಕ್ವತೆ ಪಡೆಯಬೇಕಾದರೆ ಸಮಾಜದ ಎಲ್ಲಾ ವರ್ಗಗಳಿಗೆ ಸಂವಿಧಾನದತ್ತವಾಗಿ ಅಧಿಕಾರ ಲಭ್ಯವಾಗಬೇಕಾಗಿದೆ. ಈ ವ್ಯವಸ್ಥೆ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಬೇಕೆಂದರು.

ಮತದಾನಕ್ಕೆ 2 ದಿನ ಬಾಕಿ ಉಳಿದಿದೆ.ರಿಪ್ಪನ್ ಪೇಟೆ ಶಕ್ತಿ ಕೇಂದ್ರದ ಪ್ರತಿ ಪಂಚಾಯಿತಿ ಸದಸ್ಯರನ್ನ ಸಂಪರ್ಕಿಸಲಾಗಿದೆ.ಎಲ್ಲಾ ಸದಸ್ಯರು ಬಿಜೆಪಿಯನ್ನು ಬೆಂಬಲಿಸುವ ಭರವಸೆ ಇದೆ ಎಂದರು.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಚಿಂದಿ ಆಯುವ ಮಕ್ಕಳಿಗೆ ಭದ್ರ ಕೌಟುಂಬಿಕ ಸ್ಥಾನ ಮತ್ತು ಸಾಮಾಜಿಕ ಮನ್ನಣೆ – ಶಿಕ್ಷಣ ನೀಡಲು ಮಾಧವ ನೆಲೆಯ ಅಭಿವೃದ್ಧಿಗೆ ಡಿ ಎಸ್ ಅರುಣ್ ರವರ ಶ್ರಮ ಅನನ್ಯವಾಗಿದೆ ಎಂದರು.

ಈ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು ಚುನಾಯಿತ ಪ್ರತಿನಿಧಿಗಳು ತಮ್ಮ ಅಮೂಲ್ಯ ಮತವನ್ನು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ನೀಡುವಂತೆ ವಿನಂತಿಸಿದರು.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು

ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು Gold mangalsutra…

32 minutes ago

ರಿಪ್ಪನ್ ಪೇಟೆ : ಕೂಲಿ ಕೆಲಸಕ್ಕೆಂದು ಬಂದಿದ್ದ ಬಾಲಕಿಗೆ ಕಂಟಕವಾದ ಕಾಮುಕನಿಂದ ಲೈಂಗಿಕ ದೌರ್ಜನ್ಯ, ಗರ್ಭಿಣಿ! ಆರೋಪಿಯ ಬಂಧನ

ರಿಪ್ಪನ್ ಪೇಟೆ : ಕೂಲಿ ಕೆಲಸಕ್ಕೆಂದು ಬಂದಿದ್ದ ಬಾಲಕಿಗೆ ಕಂಟಕವಾದ ಕಾಮುಕನಿಂದ , ಗರ್ಭಿಣಿ! ಆರೋಪಿಯ ಬಂಧನ A 16-year-old minor…

1 hour ago

ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ

ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ A major disaster…

5 hours ago

ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ

ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…

7 hours ago

ಹಿಟ್ ಅಂಡ್ ರನ್; ಬೈಕ್‌ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು

ಹಿಟ್ ಅಂಡ್ ರನ್; ಬೈಕ್‌ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು Young woman Archana Jain dies…

7 hours ago

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು Ripponpete: Akhila Karnataka Building Workers Organization district president…

24 hours ago