Headlines

ಶಿವಮೊಗ್ಗಕ್ಕೆ ಆಗಮಿಸಿದ್ದ ನಟ ರಮೇಶ್ ಅರವಿಂದ್ : ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

ಶಿವಮೊಗ್ಗ : ನಟ, ನಿರ್ದೇಶಕ ರಮೇಶ್ ಅರವಿಂದ್ ಇಂದು ಶಿವಮೊಗ್ಗದ ಶೋ ರೂಂ ಉದ್ಘಾಟನೆಗಾಗಿ ಆಗಮಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಗಳು ಮುಗಿಬಿದ್ದರು.

ಶೋ ರೂಂ ಉದ್ಘಾಟನೆ ನಂತರ ಮಾಧ್ಯಮದ ಜೊತೆ ಮಾತನಾಡಿ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಅತೀ ದೊಡ್ಡ ನಷ್ಟ ಅನುಭವಿಸುತ್ತಿದ್ದೇವೆ. ನಮ್ಮೆಲ್ಲರೊಂದಿಗೆ ಅವರ ನೆನಪುಗಳಿವೆ. ನ. 16 ರಂದು ಅಪ್ಪು ವಿಗೆ ವಾಣಿಜ್ಯ ಮಂಡಳಿಯಿಂದ ನಮನ ಸಲ್ಲಿಸುವ ಕಾರ್ಯಕ್ರಮ ಇದೆ ಎಂದರು.

ಇನ್ನು ಬಿಡುಗಡೆಗೆ ಸಿದ್ದವಾಗಿರುವ ತಮ್ಮ ಚಲನಚಿತ್ರ ಹಂಡ್ರೆಡ್ (100 ) ನ. 19 ಕ್ಕೆ  ತೆರೆ ಕಾಣಲಿದೆ. ಸಾಮಾಜಿಕ ಜಾಲತಾಣ ಮೊಬೈಲ್ ಬಳಕೆ ಕುರಿತ ಥ್ರಿಲ್ಲರ್ ಸಿನಿಮಾ ಇದರಲ್ಲಿ ರಚಿತಾ ರಾಮ್, ಪೂರ್ಣ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ ಎಂದು ತಿಳಿಸಿದರು.

About The Author

Leave a Reply

Your email address will not be published. Required fields are marked *

Exit mobile version