ಪರೀಕ್ಷೆಗೆ ತೆರಳುತ್ತಿದ್ದ ಸಾಗರದ ವಿದ್ಯಾರ್ಥಿಗಳ ಜೊತೆ ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕ ದುರ್ವರ್ತನೆ ತೋರಿದರೇ ?? ವಿದ್ಯಾರ್ಥಿಗಳ ಹತ್ತಿರ ಕೊನೆಗೆ ಕ್ಷಮೆ ಕೇಳಲು ಕಾರಣವೇನು?? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ !!!!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವಿದ್ಯಾರ್ಥಿಗಳು ನಿನ್ನೆ ಬೆಳಿಗ್ಗೆ ಪರೀಕ್ಷೆ ಬರೆಯುವುದಕ್ಕೋಸ್ಕರ ಶಿವಮೊಗ್ಗಕ್ಕೆ ತೆರಳುತ್ತಿರುತ್ತಾರೆ  ಆದರೆ ಮಾರ್ಗ ಮಧ್ಯೆ ಭಟ್ಕಳ ಡಿಪೋದ ಕೆಎಸ್ ಆರ್ ಟಿಸಿ ನಿರ್ವಾಹಕ ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತದೆ.ವಿದ್ಯಾರ್ಥಿಗಳು ಬಸ್ ನಿರ್ವಾಹಕನ ನಡುವಳಿಕೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸಾಗರ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ದಿಂದಪರೀಕ್ಷೆಗೆ  ಹೊರಟ ವಿದ್ಯಾರ್ಥಿಗಳಿಗೆ ಶಾಕ್ ಕಾದಿತ್ತು.

ಬಸ್ ಕಂಡಕ್ಟರ್ ಟಿಕೆಟ್, ಟಿಕೆಟ್, ಎಂದು ಬಂದೊಡನೆ ವಿದ್ಯಾರ್ಥಿಗಳೆಲ್ಲರೂ  ಪಾಸ್ ತೋರಿಸಿದರೂ ಆದರೆ ಈ ಪಾಸ್ ನಡೆಯುವುದಿಲ್ಲ ಹಾಗಾಗಿ ಎಲ್ಲರೂ ಕೂಡ ಟಿಕೇಟ್ ಪಡೆದು ಕೊಳ್ಳಬೇಕೆಂದು ನಿರ್ವಾಹಕರು ಹೇಳುತ್ತಾರೆ ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳು ಕಂಡಕ್ಟರ್ ನಡುವೆ ಮಾತಿನ ಚಕಮಕಿ ಬೆಳೆಯುತ್ತದೆ.

ನಿರ್ವಾಹಕರು ಪಾಸ್  ನಡೆಯುವುದಿಲ್ಲ ಎನ್ನಲು ಕಾರಣವೇನು ಎಂಬ ನೈಜ ಸತ್ಯಾಂಶ ಇಲ್ಲಿದೆ!!

ಕೆಎಸ್ ಆರ್ ಟಿಸಿ ಸಂಸ್ಥೆ ವಿದ್ಯಾರ್ಥಿಗಳಿಗೆ ಪಾಸ್ ನೀಡಿರುತ್ತದೆ ಆದರೆ ಕೆಲವೊಂದು ನಿಬಂಧನೆಗೆ ಒಳಪಟ್ಟು ಪಾಸ್ ವಿತರಿಸುತ್ತದೆ.

ಪಾಸ್ ನಿಯಮಿತ ಕೆ ಎಸ್  ಆರ್ ಟಿ  ಸಿ ಬಸ್ ನಲ್ಲಿ ವಿದ್ಯಾರ್ಥಿಗಳು ಸಂಚರಿಸುವಾಗ ಕೇವಲ ಎಪ್ಪತ್ತು ಕಿಲೋ ಮೀಟರ್ ವ್ಯಾಪ್ತಿಯ ಮಿತಿಗೆ ಪಾಸನ್ನು ನೀಡಲಾಗಿರುತ್ತದೆ.ಆದ್ದರಿಂದ ವಿದ್ಯಾರ್ಥಿಗಳು ಉಳ್ಳೂರು ಅಥವಾ ಆನಂದಪುರ ದವರೆಗೆ ಟಿಕೆಟ್ ಪಡೆದುಕೊಂಡು ನಂತರದಲ್ಲಿ ಪಾಸನ್ನು ತೋರಿಸಿ ಸಂಚರಿಸಬಹುದಿತ್ತು.
ಆದರೆ ಆ ಬಸ್ ಭಟ್ಕಳ ಡಿಪೋ ಬಸ್ ಆದ್ದರಿಂದ ಉಳ್ಳೂರಿನಲ್ಲಿ ಬಸ್ ಸ್ಟಾಪ್ ಇಲ್ಲದ ಕಾರಣ ಪಾಸನ್ನು ಸ್ವೀಕರಿಸುವುದಿಲ್ಲವೆಂದು ನಿರ್ವಾಹಕರು ಹೇಳಿದ್ದಾರೆ ಎಂದು ಕೆಎಸ್ ಆರ್ ಟಿ ಸಿ ಸಾಗರದ ಪರಿವೀಕ್ಷಕ ಗಿರೀಶ್ ರವರು ಪೋಸ್ಟ್ ಮ್ಯಾನ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಕೊನೆಗೂ ವಿದ್ಯಾರ್ಥಿಗಳ ಹತ್ತಿರ ಕ್ಷಮೆ ಯಾಚಿಸಿದ ನಿರ್ವಾಹಕ:
ಇಂದು ಸಂಜೆ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಕೆ ಎಸ್ ಆರ್ ಟಿ ಸಿ ನಿರ್ವಾಹಕರ ನಡುವೆ ಮಾತಿನ  ವಾಗ್ವಾದ ನಡೆಯಿತು.ವಿದ್ಯಾರ್ಥಿಗಳ ಜೊತೆ ನಾನು ದುರ್ವರ್ತನೆಯನ್ನು ತೋರಿಲ್ಲ ಇರುವಂತಹ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಕೂಡ ವಿದ್ಯಾರ್ಥಿಗಳು ನನ್ನ ಜೊತೆಯೇ ರೇಗಾಡಿದ್ದಾರೆ.
ಆದರೂ ಸಹ ನಾನೇನಾದರೂ ಮಾತಿನ ಭರದಲ್ಲಿ ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರೆ ಎಲ್ಲ ವಿದ್ಯಾರ್ಥಿಗಳಲ್ಲೂ ಕ್ಷಮೆಯಾಚಿಸುತ್ತೇನೆ ಎಂದು ಕೊನೆಗೂ ನಿರ್ವಾಹಕ ವಿದ್ಯಾರ್ಥಿಗಳ ಹತ್ತಿರ ಕ್ಷಮೆ ಯಾಚಿಸುತ್ತಾರೆ.



ವರದಿ: ಪವನ್ ಕುಮಾರ್ ಕಠಾರೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

Ranks Institute–ಜೆಸಿಐ ಹೊಸನಗರ ಡೈಮಂಡ್‌ ಆಯೋಜನೆಯಲ್ಲಿ ‘Gen Z Connect’ ಯಶಸ್ವಿ

ರ‍್ಯಾಂಕ್ಸ್ ಇನ್ಸ್ಟಿಟ್ಯೂಟ್–ಜೆಸಿಐ ಹೊಸನಗರ ಡೈಮಂಡ್‌ ಸಹಯೋಗದಲ್ಲಿ ‘Gen Z Connect’ ತರಬೇತಿ ಯಶಸ್ವಿ Ranks Institute–JCI Hosanagara Diamond Hosts…

8 hours ago

ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ!

ಬೆಳ್ಳೂರು GHPSನಲ್ಲಿ ಸ್ವಾತಂತ್ರ್ಯ ಸಂಭ್ರಮ: ಶಾಲೆಗೆ ಕೊಡುಗೆಗಳ ಮಹಾಪೂರ! Satish Ripponpete donated a TV to GHPS Bellur…

11 hours ago

ಗರ್ತಿಕೆರೆಯಲ್ಲಿ ಮಾರಣಾಂತಿಕ ಹಲ್ಲೆ: ಅಟ್ಟಹಾಸ ಮೆರೆದಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಗರ್ತಿಕೆರೆಯಲ್ಲಿ ಮಾರಣಾಂತಿಕ ಹಲ್ಲೆ: ಅಟ್ಟಹಾಸ ಮೆರೆದಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು Police arrest Raghavendra alias Apple Raghu…

11 hours ago

ಅಕ್ರಮ ಗೋ ಸಾಗಾಟ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ಭೀಕರ ಹಲ್ಲೆ – ಬಿ ವೈ ವಿಜಯೇಂದ್ರ ಆಕ್ರೋಶ

ಅಕ್ರಮ ಗೋ ಸಾಗಾಟ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಮೇಲೆ ಭೀಕರ ಹಲ್ಲೆ - ಬಿ ವೈ ವಿಜಯೇಂದ್ರ ಆಕ್ರೋಶ…

12 hours ago

ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದ ಭೂಫ

ಗರ್ತಿಕೆರೆಯಲ್ಲಿ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ; ತಲೆಯ ಮೇಲೆ ಕಾಲಿಟ್ಟು ಅಟ್ಟಹಾಸ ಮೆರೆದ ಭೂಫ A…

19 hours ago

ಚುಂಚಾದ್ರಿ ಮಹಿಳಾ ಒಕ್ಕಲಿಗರ ವೇದಿಕೆಯಿಂದ ಸ್ವಾತಂತ್ರ್ಯ ದಿನಾಚರಣೆ

ಚುಂಚಾದ್ರಿ ಮಹಿಳಾ ಒಕ್ಕಲಿಗರ ವೇದಿಕೆಯಿಂದ ಸ್ವಾತಂತ್ರ್ಯ ದಿನಾಚರಣೆ Ripponpete Chunchadri Mahila Okkaligar Vedike celebrated the 80th Independence…

20 hours ago