ರಿಪ್ಪನ್ ಪೇಟೆ : ಇಲ್ಲಿನ ಸಿದ್ದಪ್ಪನಗುಡಿ ಬಳಿಯ ಕೆರೆಹಳ್ಳಿ ನಿವಾಸಿ ಗುಂಡಪ್ಪ (67) ಅವರು ವಯೋಸಹಜ ಕಾಯಿಲೆಯಿಂದ ಇಂದು ನಿಧನರಾದರು.
  ರಿಪ್ಪನ್ ಪೇಟೆಯ ಪ್ರಸಿದ್ದ ನೆಹರು ಸಾಮಿಲ್ ನಲ್ಲಿ ಮಿಲ್ ಡ್ರೈವರ್ ಆಗಿ ಸುಮಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಇವರು ಪ್ರಸ್ತುತ ಆಯನೂರು ಸಾಮಿಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
  ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
  ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಸಿದ್ದಪ್ಪನಗುಡಿಯ ಸ್ಮಶಾನದಲ್ಲಿ ನಡೆಯುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
  ಗುಂಡಪ್ಪರವರ ನಿಧನಕ್ಕೆ ರಿಪ್ಪನ್ ಪೇಟೆಯ ಗಣ್ಯರೆಲ್ಲ್ಲಾ ಸಂತಾಪ ಸೂಚಿಸಿದ್ದಾರೆ.
  


