Headlines

ನೇರಲೆ ಮನೆ ದೇವಸ್ಥಾನದ ಜಾಗಕ್ಕೆ ಬೇಲಿ ಹಾಕಲು ಮುಂದಾದ ವ್ಯಕ್ತಿ !!! ಕೇಳಲು ಹೋದ ಗ್ರಾಮಸ್ಥರಿಗೆ ಕೊಲೆಬೆದರಿಕೆ ? ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು !!! ಹಾಗಾದರೆ ಆ ವ್ಯಕ್ತಿ ಯಾರು ??

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ನೇರಳಮನೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ದೇವಸ್ಥಾನಕ್ಕಾಗಿ ಮೀಸಲಿಟ್ಟಿದ್ದ 20ಗುಂಟೆ ಜಾಗವನ್ನು ಪ್ರಭಾವಿ ಖಾಸಗಿ ವ್ಯಕ್ತಿಯೊಬ್ಬ ತನ್ನ ಹಣದ ಪ್ರಭಾವ ಬಳಸಿ  ಬೇಲಿ ಹಾಕಲು ಮುಂದಾಗಿದ್ದು ತಡೆಯಲು ಹೋದ ಗ್ರಾಮಸ್ಥರನ್ನು ಅವಾಚ್ಯವಾಗಿ ನಿಂದಿಸಿ,ಕೊಲೆ ಬೆದರಿಕೆ ಹಾಕಿರುವ  ಘಟನೆ ನಡೆದಿದೆ.
ಇಂದು ರಿಪ್ಪನ್ ಪೇಟೆ ಗ್ರಾಪಂ ಸಭಾಂಗಣದಲ್ಲಿ ಪತ್ರೀಕಾ ಗೋಷ್ಟಿ ನಡೆಸಿ ಮಾತನಾಡಿದ ನೇರಲಮನೆ ಗ್ರಾಮಸ್ಥರು
ದೇವಸ್ಥಾನದ ಜಾಗವನ್ನು ಅಕ್ರಮಿಸಿಕೊಂಡಿರುವ ಬಗ್ಗೆ ನೇರಳಮನೆ ಗ್ರಾಮಸ್ಥರೆಲ್ಲಾ ಸೇರಿ ನಾಗೇಶ್ ಅಲಿಯಾಸ್ ಬಡ್ಡಿ ನಾಗೇಶ್ ಎಂಬ ವ್ಯಕ್ತಿಯನ್ನು ಕೇಳಲು ಹೋದಾಗ ಗ್ರಾಮಸ್ಥರನ್ನು ಅವಾಚ್ಯವಾಗಿ ನಿಂದಿಸಿ,ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನೇರಲಮನೆ ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಗೇಶ್ ಎಂಬ ವ್ಯಕ್ತಿ ಅವಾಚ್ಯವಾಗಿ ನಿಂದಿಸಿ,ಕೊಲೆ ಬೆದರಿಕೆ ಹಾಕಿರುವುದನ್ನು ವೀಡಿಯೋ ಮಾಡಿಕೊಂಡಿದ್ದು ಸದರಿ ವೀಡೀಯೋವನ್ನು ಲಗತ್ತಿಸಿ ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾಳೂರು ಗ್ರಾಮ ಪಂಚಾಯಿತಿಯ ನೇರಲಮನೆ ಗ್ರಾಮದ ಸರ್ವೇ ನಂ 01 ರಲ್ಲಿ ಸುಮಾರು 400 ಎಕರೆ ಅರಣ್ಯ ಪ್ರದೇಶ ಇದ್ದು, ಸದರಿ ಅರಣ್ಯದಲ್ಲಿ ಸುಮಾರು ಬಾಗ ಪ್ರಭಾವಿಗಳಿಂದ ಈಗಾಗಲೇ ಒತ್ತುವರಿಯಾಗಿದ್ದು,ಕೇವಲ ಅಲ್ಪ ಸ್ವಲ್ಪಅರಣ್ಯ ಪ್ರದೇಶ ಉಳಿದಿದ್ದು ಅದನ್ನು ಸಹ ಕೆಲ ಪ್ರಬಾವಿಗಳು,ಹಾಗು ಬಡ್ಡಿ ಮಾಫ಼ಿಯಾದವರು ಕೆಲ ಅರಣ್ಯ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ಭೂ ಕಬಳಿಕೆ ಮಾಫ಼ಿಯಾ ನಡೆಸುತ್ತಿದ್ದಾರೆ ಎಂದು ಹೋರಾಟಗಾರರಾದ ದೇವರಾಜ್ ಹಾಲುಗುಡ್ಡೆ ಆರೋಪಿಸಿದ್ದಾರೆ.
ಈಗಾಗಲೇ ನೇರಲಮನೆ ಗ್ರಾಮಸ್ಥರು ದೇವಸ್ಥಾನ ನಿರ್ಮಿಸಲು ದೇಣಿಗೆ ಸಂಗ್ರಹಿಸುವಲ್ಲಿ ನಿರತರಾಗಿದ್ದು ಸದರಿ ಜಾಗದಲ್ಲಿ ಭವ್ಯವಾಗಿ ಗಣಪತಿ ದೇವಸ್ಥಾನವನ್ನು ನಿರ್ಮಿಸಲು ಸಿದ್ದತೆ ನಡೆಸಿಕೊಂಡಿದ್ದು ಕೆಲ ಪ್ರಭಾವಿ ವ್ಯಕ್ತಿಗಳಿಂದ ದೇವರ ಕಾರ್ಯ ಕುಂಠಿತವಾಗುತ್ತಿರುವುದಕ್ಕೆ ಬೇಸರವಾಗುತ್ತಿದೆ ಎಂದು ಈ ಸಂಧರ್ಭದಲ್ಲಿ ಗ್ರಾಮಸ್ಥರಾದ ವೀರೇಂದ್ರ ಆರೋಪಿಸಿದ್ದಾರೆ.

ಈ ಕೂಡಲೇ ಇದಕ್ಕೆ ಸಂಬಂದಪಟ್ಟಂತೆ ಕಂದಾಯ ಅಧಿಕಾರಿಗಳು,ಪೊಲೀಸ್ ಇಲಾಖೆ ,ಮುಜರಾಯಿ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ದೇವಸ್ಥಾನದ ಜಾಗವನ್ನು ತೆರವುಗೊಳಿಸಿಕೊಡಬೇಕಾಗಿ ಆಗ್ರಹಿಸಿದರು.

ಈ ಪತ್ರೀಕಾ ಗೋಷ್ಟಿಯಲ್ಲಿ ಗ್ರಾಮಸ್ಥರಾದ ಚಂದ್ರಶೇಖರ್,ಸುರೇಶ್ ,ಆನಂದ ,ಕೃಷ್ಣಪ್ಪ ,ರಾಘವೇಂದ್ರ, ರಾಮು,ಯುವರಾಜ ,ರೇವಣ್ಣ ,ನಾಗರಾಜ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.




ಗ್ರಾಮಸ್ಥರಿಗೆ ಬೆದರಿಕೆ ಹಾಕಿರುವ ವೀಡಿಯೋ ಈ ಕೆಳಗೆ ವೀಕ್ಷಿಸಿ:









Leave a Reply

Your email address will not be published. Required fields are marked *

Exit mobile version