Categories: Blog

ತೀರ್ಥಹಳ್ಳಿ:ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಅಬ್ದುಲ್ ಬಷೀರ್ ಸಾಹೇಬ್ ಇನ್ನಿಲ್ಲ

ತೀರ್ಥಹಳ್ಳಿ :  ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅಬ್ದುಲ್ ಬಷೀರ್ ಇವರು ಇಂದು  ಧೀರ್ಘಕಾಲದ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.ಅಬ್ದುಲ್ ಕರೀಂ ಸಾಹೇಬ್ ಹಾಗು  ಶ್ರೀಮತಿ ಹಾಜರಾಂಬಿ ದಂಪತಿಗಳ ಪುತ್ರರಾಗಿ 1940 ರಲ್ಲಿ ಜನಿಸಿದ ಅಬ್ದುಲ್ ಬಶೀರ್ ರವರು ತಮ್ಮ ಇಪ್ಪತಾರನೆಯ ವಯಸ್ಸಿನಲ್ಲಿ ( 1956) ಡಿ ದರ್ಜೆಯ ನೌಕರರಾಗಿ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಸೇವೆಗೆ ಸೇರಿದ ಇವರು ನಂತರದ ದಿನಗಳಲ್ಲಿ ತೀರ್ಥಹಳ್ಳಿಯ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿ ಅನುಪಮ ಸೇವೆ ಸಲ್ಲಿಸಿಸಿರುತ್ತಾರೆ.

ತಮ್ಮ ಸೇವಾ ಅವದಿಯ ಸುದೀರ್ಘಕಾಲ ಶಸ್ತ್ರ ಚಿಕಿತ್ಸೆ, ಅರಿವಳಿಕೆ ಸಹಾಯಕರಾಗಿ ದುಡಿದ ಇವರು ಸರಿಸುಮಾರು 13500  ದೊಡ್ಡ ಹಾಗು 15000  ಸಣ್ಣ ಶಸ್ತ್ರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರು.ಯಾವುದೇ ವೈದ್ಯಕೀಯ ಪದವಿಯನ್ನು ಪಡೆಯದೆ ತಮ್ಮ ಕಲಿಕಾ ಸಾಮರ್ಥ್ಯದಿಂದ ಸತತ ಮೂರು ದಶಕಗಳ ಕಾಲ ರೋಗಿಗಳಿಗೆ ಅರಿವಳಕೆ ನೀಡಿದ ಇವರ ಸಾಧನೆ ವೈದ್ಯ ಲೊಕದ ವಿಸ್ಮಯವಾಗಿದೆಯಲ್ಲದೇ ಶಸ್ತ್ರಚಿಕಿತ್ಸೆಯಲ್ಲಿ ಇವರಿಗಿದ್ದ ಪರಿಣತಿಯನ್ನು ಗಮನಿಸಿದ ಹಲವಾರು ವೈದ್ಯಾಧಿಕಾರಿಗಳು ಇವರ ಶಸ್ತ್ರಚಿಕಿತ್ಸೆಯ ಕೌಶಲ್ಯವನ್ನು ಕಂಡು ಬೆರಗಾಗಿದ್ದರು.

ಕೇವಲ ಸರ್ಕಾರಿ ಆಸ್ಪತ್ರೆಯಲ್ಲದೇ ಎಂಬತ್ತರ ದಶಕದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಆರಂಭವಾದ ಎರಡು ಖಾಸಗಿ ಆಸ್ಪತ್ರೆಯಲ್ಲಿಯೂ ಅರಿವಳಿಕೆ ತಜ್ನರಾಗಿ ಸೇವೆಸಲ್ಲಿಸಿರುವ ಶ್ರೀಯುತರು ತೊಂಬತ್ತರ ದಶಕದ ಅಂತ್ಯದಲ್ಲಿ ರಾಜ್ಯ ಆರೋಗ್ಯ ಇಲಾಖೆ ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಕೇಂದ್ರವಾದ ಜೆ.ಸಿ ಆಸ್ಪತ್ರೆಗೆ ಅದೀಕತೃತವಾಗಿ ಅರಿವಳಿಕೆ ತಜ್ಞರನ್ನು ನೇಮಿಸುವವರೆಗೂ ಶಸ್ತ್ರಚಿಕಿತ್ಸಾ ತಜ್ಞರ ಸಹಾಯಕರಾಗಿ ಕಾರ್ಯನಿರ್ವಹಿಸಿರುವುದಲ್ಲದೇ ಅಂದಿನ ಜಿಲ್ಲಾ ಆರೋಗ್ಯಾಧಿಕಾರಿಗಳು ಇವರ ಕಾರ್ಯವೈಖರಿಯನ್ನು ಅಂದು ಹಾಡಿಹೊಗಳಿದ್ದರು. ದಿನನಿತ್ಯವೂ ಸಣ್ಣ ಮತ್ತು ದೊಡ್ಡ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಶುಚಿಗೊಳಿಸಿ ಶಸ್ತ್ರಚಿಕಿತ್ಸಾ ಪರಿಕರವನ್ನು ಜೋಡಿಸಿ ಆಸ್ಪತ್ರೆಗೆ ಬರುವ ರೋಗಿಗಳನ್ನು ನಗುಮೊಗದಲ್ಲಿ ಉಪಚರಿಸುತಿದ್ದ ಅಬ್ದುಲ್ ಬಷೀರ್ ಸಾಹೇಬ್ ತೀರ್ಥಹಳ್ಳಿ ತಾಲ್ಲೂಕಿನ ಆರೋಗ್ಯ ಇಲಾಖೆಯಲ್ಲಿ ಸಲ್ಲಿಸಿರುವ  ಸೇವೆ ಶ್ಲಾಘನೀಯವಾಗಿದೆ.ಇವರ ಸಾಧನೆಗೆ 1996 ರಲ್ಲಿ ಇವರು ನಾಗರೀಕ ಸನ್ಮಾನಕ್ಕೆ ಭಾಜನರಾದವರು.

ಇವರ ಸಾಧನೆಯನ್ನು ಗುರುತಿಸಿ “ಇಂಡಿಯನ್ ಎಕ್ಸಪ್ರೆಸ್ಸ್” ದಿನಪತ್ರಿಕೆ ಅಂದು ವಿಷೇಶ ಲೇಖನ ಪ್ರಕಟಿಸಿ ಇವರ ಸೇವೆಯನ್ನು ಪ್ರಶಂಸಿಸಿತ್ತು. ತೊಂಬತ್ತರ ದಶಕದಲ್ಲಿ ಆರೋಗ್ಯ ಇಲಾಖೆಯಲ್ಲಿ ಇವರ ಬಹುಮುಖ ಸೇವೆಯನ್ನು ಗುರುತಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ( ಐ.ಎಂ.ಎ ) ಕರ್ನಾಟಕ ವಿಭಾಗ ಇವರನ್ನು ಗೌರವಿಸಿರುವುದನ್ನು ಈ ಸಂಧರ್ಭದಲ್ಲಿ ಸ್ಮರಿಸಬಹುದು.ಕನ್ನಡ, ತುಳು, ಕೊಂಕಣಿ, ಹಿಂದಿ ಭಾಷೆಯ ಮೇಲೆ ಅಗಾಧ ಪ್ರಭುತ್ವ ಸಾಧಿಸಿದ್ದ ಅಬ್ದುಲ್ ಬಷೀರ್ ಇವರು ವೈದ್ಯಕೀಯ ವೃತ್ತಿ ಜೀವನದಲ್ಲಿ ಕೇವಲ ” ಡಿ ” ದರ್ಜೆಯ ನೌಕರರಾಗಿದ್ದರೂ ತ್ಮ ಪ್ರತಿಭೆಯ ಮೂಲಕ ಶಸ್ತ್ರಚಿಕಿತ್ಸೆಯ ವಿವಿದ ಕಾರ್ಯಗಳಲ್ಲಿ‌ ತಮ್ಮನ್ನು ತೊಡಗಿಸಿಕೊಂಡು ತಮ್ಮ ಸೃಜನಶೀಲ ನಡವಳಿಕೆಯ ಮೂಲಕ ಹಲವಾರು ನುರಿತ ಶಸ್ತ್ರಚಿಕಿತ್ಸಾ ತಜ್ಞರ ಪ್ರಶಂಸೆಯನ್ನು ಗಳಿಸಿಕೊಂಡಿದ್ದರು.

1998 ರಲ್ಲಿ ನಿವೃತ್ತಿ ಹೊಂದಿದ ಇವರು ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಬಳಿ “ಬಷೀರ್ ಡ್ರೆಸ್ಸಿಂಗ್ ಸೆಂಟರ್” ನ ಮೂಲಕ ಸಾರ್ವಜನಿಕ ಸೇವೆಯನ್ನು ಮುಂದುವರೆಸಿದ ಇವರು ಸಹಸ್ರಾರು ರೊಗಿಗಳ ಪಾಲಿಗೆ ಆಸರೆಯಾಗಿದ್ದವರು.ಕೆಲವು ವರ್ಷಗಳಿಂದ ದೃಷ್ಠಿ ಹಾಗು ಇತರ ಅರೊಗ್ಯದ ಸಮಸ್ಯೆಯನ್ನು ಎದುರಿಸತ್ತಿದ್ದ ಅಬ್ದುಲ್ ಬಷೀರ್ ಸಾಹೇಬ್ ತೀರ್ಥಹಳ್ಳಿಯ ಹೈಸ್ಕೂಲ್ ರಸ್ತೆಯ ತಮ್ಮ ನಿವಾಸದಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಔಷದೋಪಚಾರದ ಆರೈಕೆಯಲ್ಲಿದ್ದರು.ಕೆಲ ವರುಷಗಳ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದ ಎಂಬತ್ತರ ವಯಸ್ಸಿನ ಶ್ರೀಯುತರು ಇಬ್ಬರು ಪುತ್ರರು ಹಾಗು ಏಕೈಕ ಪುತ್ರಿಯನ್ನು ಅಗಲಿದ್ದಾರೆ.ಶ್ರೀಯುತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು  ನೀಡಲಿ ಎಂದು ತೀರ್ಥಹಳ್ಳಿಯ ಸಮಸ್ತ ನಾಗರಿಕರ ಪರವಾಗಿ ಪ್ರಾರ್ಥಿಸುತ್ತೇವೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ

ಚಂದ್ರಗುತ್ತಿಯಲ್ಲಿ 9 ಅಡಿ ಉದ್ದದ ಹೆಬ್ಬಾವು ಸೆರೆ A 9-foot-long python was safely rescued from behind a…

2 hours ago

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ – ಕೆರೆಗೆ ಹಾರಿ ಸಾಗರದ ಯುವತಿ

ಪಾಗಲ್ ಪ್ರೇಮಿಯಿಂದ ಕಿರುಕುಳ, ಬ್ಲ್ಯಾಕ್‌ಮೇಲ್ ಆರೋಪ - ಕೆರೆಗೆ ಹಾರಿ ಸಾಗರದ ಯುವತಿ A 22-year-old woman from Sagara…

8 hours ago

ಬೆದರಿಸಿ ಹಣ, ಮೊಬೈಲ್ ದೋಚಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ

ಬೆದರಿಸಿ ಹಣ, ಮೊಬೈಲ್ ದೋಚಿದ್ದ ಆರೋಪಿಗಳು ಪೊಲೀಸರ ಬಲೆಗೆ Shivamogga Tunganaagar police arrested three accused in a…

1 day ago

ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ

ಶ್ರೀಗಂಧದ ಮರ ಕಡಿದು ಅಕ್ರಮ ಸಾಗಾಟಕ್ಕೆ ಯತ್ನ: 6 ಮಂದಿ ಅರಣ್ಯಾಧಿಕಾರಿಗಳ ಬಲೆಗೆ Six people were arrested for…

1 day ago

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಅರಸಾಳು, ಕುಂಸಿ ನಿಲುಗಡೆ ಅವಧಿ ಸೆ.23ರವರೆಗೆ ವಿಸ್ತರಣೆ South Western Railway extends temporary stoppages…

1 day ago

ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ

ಪ್ರವಾಸಿ ಬಸ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಅಪಘಾತ Tourist bus and fish transport goods vehicle…

1 day ago