Categories: Blog

ರಿಪ್ಪನ್ ಪೇಟೆ : ದಯಾಮರಣದ ಮೊರೆ ಹೋದ ಎಂಬತ್ತರ ವೃದ್ದೆ :

ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಅರಸಾಳು ಎಂಬಲ್ಲಿ ವಯೋವೃದ್ಧೆಯೋರ್ವರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದು, ಜೀವನ ನಡೆಸಲು ಆಸರೆಯಾಗಬೇಕಿದ್ದ ಪತಿಯು ಇಹಲೋಕ ತ್ಯಜಿಸಿದ್ದಾರೆ. ಒಬ್ಬಂಟಿಯಾಗಿರುವ ಭಾಗ್ಯಲಕ್ಷ್ಮಿ ಎಂಬ ವೃದ್ದೆಯು ಸುಮಾರು 80 ವರ್ಷದವರಾಗಿದ್ದಾರೆ.ಹಳೆಯ ಜೋರಾಗಿ ಮಳೆ ಬಂದರೆ ಬಿದ್ದು ಹೋಗುವಂತಹ ಮನೆಯಲ್ಲಿ ವಾಸಿಸುತ್ತಿದ್ದಾರೆ.ಯಾರೂ ನೆರವಿಗೆ ಬಾರದೇ ಇರುವ ಕಾರಣ ದಯಮರಣಕ್ಕೆ ಸರ್ಕಾರದ ಬಳಿ ಮೊರೆಹೋಗುವತ್ತ ಚಿಂತಿಸಿದ್ದಾರೆ.

ತಮ್ಮ ಪತಿಯು ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು,ಕೆಲವು  ಕೌಟುಂಬಿಕ ಸಮಸ್ಯೆಯಿಂದ ಬರಬೇಕಾಗಿದ್ದ ಸರ್ಕಾರದ ಪಿಂಚಣಿ ಹಣ ಈ ವಯೋವೃದ್ದೆಯ ಕೈ ಸೇರುತ್ತಿಲ್ಲ.ಈ ವೃದ್ದೆಯು ಸ್ಥಳೀಯ ಎಲ್ಲಾ ಜನಪ್ರತಿನಿಧಿಗಳ ಹತ್ತಿರ ತಮ್ಮ ಅಳಲು ತೋಡಿಕೊಂಡಿದ್ದರು ಯಾರೂ ಕೂಡಾ ಸಹಾಯಕ್ಕೆ ಧಾವಿಸಿಲ್ಲ.

ಈ ವೃದ್ದೆಯ ಬಗ್ಗೆ ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಅನೇಕ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಹಲವು ಬಾರಿ ಅರಸಾಳು ಗ್ರಾಮ ಪಂಚಾಯಿತಿಗೆ ಹಳೆ ಮನೆಯನ್ನು ದುರಸ್ತಿಪಡಿಸಲು ಮನವಿ ಮಾಡಿದರು ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ನೌಕರರಿಗೆ ಹಾಗೂ ಸರಕಾರದ ಆದಾಯ ಪ್ರಮಾಣ ಪತ್ರದಲ್ಲಿ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳಿಗೆ ಮನೆಯ ದುರಸ್ತಿ ಹಾಗೂ ಮನೆ ನಿರ್ಮಿಸಲು ಅವಕಾಶವಿರುವುದಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸುತ್ತಾರೆ.

ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸಂದರ್ಭದಲ್ಲಿ ತಾವು ವಾಸವಾಗಿರುವ ಮನೆ ತುಂಬಾ ಜೇನು ಗೂಡು ಕಟ್ಟಿಕೊಂಡಿದೆ. ಈಗಿರುವ ಮನೆ ಇಂದು ಅಥವಾ ನಾಳೆಯೋ ಉರುಳಿ ಬೀಳುವುದರಲ್ಲಿ ಸಂಶಯವಿಲ್ಲ. ಈ ವೃದ್ದೆಯು ಕಳೆದ ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೂ ಸಹ ಪ್ರಯತ್ನಿಸಿದ್ದರು. ಆದರೆ ಸ್ಥಳೀಯರ  ಆಶಾಭಾವನೆಯ ಮಾತುಗಳಿಗೆ ಸ್ಪಂದಿಸಿ ಎದೆಗುಂದದೆ ಕೆಲ ದಿನ ಕಳೆದರು. ಆದರೂ ಸಮಸ್ಯೆ ಬಗೆಹರಿಯಲಿಲ್ಲ ಆದ್ದರಿಂದ ಜೀವನದ ಕಟ್ಟಕಡೆಯ ನಿರ್ಧಾರ ವೆಂಬಂತೆ ಇದೀಗ ಭಾಗ್ಯಲಕ್ಷ್ಮಿ ಎಂಬ ವೃದ್ದೆಯು ದಯಾಮರಣದ ಮೊರೆಹೋಗುವತ್ತ ಚಿಂತಿಸಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ವೃದ್ದೆಯ ಅಹವಾಲುಗಳಿಗೆ ಸ್ಪಂದಿಸಿ ನೆಮ್ಮದಿಯ ಜೀವನ ನಡೆಸಲು ವೃದ್ದೆಗೆ ಬರಬೇಕಾದ ಪಿಂಚಣಿ ಹಣ ಹಾಗೂ ವಾಸಿಸಲು ಮನೆಯನ್ನು ನಿರ್ಮಿಸಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಒತ್ತಾಯಿಸಿದ್ದಾರೆ.




ವರದಿ : ರಫ಼ಿ ರಿಪ್ಪನ್ ಪೇಟೆ
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ

ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ Farmers staged a massive protest…

3 hours ago

ಇಂಡಿಯಾ ಪೋಸ್ಟ್‌ನಲ್ಲಿ 25,000ಕ್ಕೂ ಹೆಚ್ಚು ಹುದ್ದೆ: 10ನೇ ತರಗತಿ ಪಾಸಾದವರಿಗೆ ಅವಕಾಶ, ಪರೀಕ್ಷೆ ಇಲ್ಲದೆ ನೇಮಕಾತಿ

ಇಂಡಿಯಾ ಪೋಸ್ಟ್‌ನಲ್ಲಿ 25,000ಕ್ಕೂ ಹೆಚ್ಚು ಹುದ್ದೆ: 10ನೇ ತರಗತಿ ಪಾಸಾದವರಿಗೆ ಅವಕಾಶ, ಪರೀಕ್ಷೆ ಇಲ್ಲದೆ ನೇಮಕಾತಿ India Post GDS…

4 hours ago

ಶಂಕರಮಠ ರಸ್ತೆಯ ರಾಹುಲ್ ಹುಂಡೈ  ಶೋರೂಮ್‌ನಲ್ಲಿ ಮತ್ತೆ ಅಗ್ನಿ ಆಕಸ್ಮಿಕ

ಶಂಕರಮಠ ರಸ್ತೆಯ ರಾಹುಲ್ ಹುಂಡೈ  ಶೋರೂಮ್‌ನಲ್ಲಿ ಮತ್ತೆ ಅಗ್ನಿ ಆಕಸ್ಮಿಕ Small fire accident reported at Rahul Hyundai…

15 hours ago

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…

2 days ago

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…

2 days ago

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…

2 days ago