ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಇಂದು ಹಾಡುಹಗಲೇ ಭೀಕರ ಕೊಲೆಯಾಗಿದೆ. ಚಾಕುವಿನಿಂದ ಇರಿದು ಈ ಕೊಲೆ ಮಾಡಲಾಗಿದ್ದು, ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ.
ರಾಹಿಲ್(20) ಕೊಲೆಯಾದ ಯುವಕನಾಗಿದ್ದು, ಅಜ್ಗರ್(19) ಕೊಲೆಮಾಡಿರುವ ಯುವಕನಾಗಿದ್ದಾನೆ.ನಿನ್ನೆ ಸಂಜೆ ಕೊಲೆ ಆರೋಪಿ ಅಜ್ಗರ್ ತಂದೆಯು ಟ್ಯಾಂಕ್ ಮೊಹಲ್ಲಾ ರಸ್ತೆಯಲ್ಲಿ ಸೈಕಲ್ ನಲ್ಲಿ ಬರುತ್ತಿದ್ದ ವೇಳೆ, ರಾಹಿಲ್ ನ ಬೈಕ್ ಡಿಕ್ಕಿ ಹೊಡೆದಿತ್ತು. ಈ ವಿಚಾರದಲ್ಲಿ ತನ್ನ ತಂದೆಯ ಸೈಕಲ್ ರಿಪೇರಿ ಮಾಡಿಕೊಡುವಂತೆ ಅಜ್ಗರ್ ತಿಳಿಸಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದು ರಾಹಿಲ್ ನು ಅಜ್ಗರ್ ತಂದೆಗೆ ಕಪಾಳಕ್ಕೆ ಹೊಡೆದಿದ್ದು, ಸ್ಥಳಿಯರು ಜಗಳ ಬಿಡಿಸಿದ್ದರು ಎನ್ನಲಾಗಿದೆ.
ಆದರೆ, ಇಂದು ಅಜ್ಗರ್, ತನ್ನ ತಂದೆಗೆ ಹೊಡೆದಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ರಾಹಿಲ್ ಟ್ಯಾಂಕ್ ಮೊಹಲ್ಲಾ ಎರಡನೇ ತಿರುವಿನಲ್ಲಿ ನಿಂತಿರುವಾಗ ಬಂದು ಮಾತಾನಾಡಿಸುತ್ತಾ ಚಾಕುವಿನಿಂದ ಹೊಟ್ಟೆಗೆ ತಿವಿದಿದ್ದಾನೆ. ಈ ಸಂದರ್ಭದಲ್ಲಿ ರಾಹಿಲ್ ನ ಹೊಟ್ಟೆ ಭಾಗದಿಂದ ರಕ್ತ ಚೆಲ್ಲಿದ್ದು, ಸ್ಥಳೀಯರು ಅಟೋದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ರಾಹಿಲ್ ಪ್ರಾಣ ಬಿಟ್ಟಿದ್ದಾನೆ.
ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಡಿ.ವೈ.ಎಸ್.ಪಿ. ಪ್ರಶಾಂತ್ ಮುನ್ನೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೊಲೆ ಆರೋಪಿ ಅಜ್ಗರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಪ್ಪನ್‌ಪೇಟೆ ಪಟ್ಟಣದ ನಾಲ್ಕು ರಸ್ತೆಗಳಿಗೆ ಬೆಳಕಿನ ಭಾಗ್ಯ: ಬೇಳೂರು ಗೋಪಾಲಕೃಷ್ಣರಿಂದ ಚಾಲನೆ “ಕೊಟ್ಟ ಮಾತಿನಂತೆ ವಿದ್ಯುತ್ ದೀಪ ಅಳವಡಿಸಿದ್ದೇನೆ” —…
ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ Ripponpete celebrates the 59th annual Ganapati festival with…
ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…
ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…
ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…
ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…