January 11, 2026

ಶಿವಮೊಗ್ಗಜಿಲ್ಲೆಯ ನೂತನ ಮಂತ್ರಿಗಳಿಗೆ ಶ್ರೀ ರೇಣುಕಾನಂದ ಸ್ವಾಮೀಜಿಗಳಿಂದ ಅಭಿನಂದನೆ.

ರಿಪ್ಪನ್ ಪೇಟೆ : ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಬಸವರಾಜ್ ಬೊಮ್ಮಾಯಿ ಅವರ ಸರಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಕೆಎಸ್ ಈಶ್ವರಪ್ಪ ಹಾಗೂ ಆರಗ ಜ್ಞಾನೇಂದ್ರ ರವರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ನಿಟ್ಟೂರಿನ ಶ್ರೀನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು ಅಭಿನಂದಿಸಿದ್ದಾರೆ.

ರಿಪ್ಪನ್ ಪೇಟೆ ಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸರಳ ಸಜ್ಜನಿಕೆಯ ವ್ಯಕ್ತಿತ್ವ ಜನನಾಯಕ ಆರಗ ಜ್ಞಾನೇಂದ್ರ ರವರಿಗೆ ರಾಜ್ಯದ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ.

ಭಗವಂತನ ಆಶೀರ್ವಾದದಿಂದ ಅವರುಗಳ ಕಾರ್ಯಾವಧಿಯಲ್ಲಿ ರಾಜ್ಯದ ಜಿಲ್ಲೆಯ ಹಾಗೂ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ನಾಡಿನ ಜನತೆಯ  ಶಾಂತಿ ಹಾಗೂ ನೆಮ್ಮದಿಯ ಬದುಕಿಗೆ ಪ್ರೇರಣೆಯಾಗುವಂತಿರಲಿ. ಈ ಹಿಂದೆ ಶಿವಮೊಗ್ಗ ಜಿಲ್ಲೆಯಿಂದ ಆಯ್ಕೆಯಾಗಿ ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ.ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಅನೇಕರು ತಮ್ಮ ಕಾರ್ಯಗಳ ಮೂಲಕ ಶಿವಮೊಗ್ಗ ಜಿಲ್ಲೆಯ ಕೀರ್ತಿ ಯೊಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೇಶಕ್ಕೆ ತೋರಿಸಿ ಕೊಡುವುದರ ಮೂಲಕ ಕರ್ನಾಟಕ ರಾಜ್ಯವು ಅಭಿವೃದ್ಧಿಯಲ್ಲಿ ನಂಬರ್1 ರಾಜ್ಯವೆಂದು ತೋರಿಸಿಕೊಟ್ಟಿದ್ದಾರೆ. ಇವರುಗಳಿಗೆ ಸಹ ಅದೇ ರೀತಿ ಅಭಿವೃದ್ಧಿಗಳ ಹರಿಕಾರರೆಂದು ಜನಮನ್ನಣೆಗೆ ಪಾತ್ರರಾಗಲಿ ಎಂದು ಹಾರೈಸಿದರು.






ವರದಿ : ಸಬಾಸ್ಟಿನ್ ಮ್ಯಾಥ್ಯೂಸ್‌ ರಿಪ್ಪನ್ ಪೇಟೆ

About The Author

Leave a Reply

Your email address will not be published. Required fields are marked *

Exit mobile version