Headlines

ರಿಪ್ಪನ್ ಪೇಟೆ: ಶಿವಮೊಗ್ಗದ ನರ್ಸಿಂಗ್ ವಿಧ್ಯಾರ್ಥಿನಿ ಬೆಳ್ಳೂರು ಕಾಡಿನಲ್ಲಿ ಶವವಾಗಿ ಪತ್ತೆ : ಕೊಲೆ ಶಂಕೆ !!

ರಿಪ್ಪನ್ ಪೇಟೆ: ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಕಾಡಿನ ಮಧ್ಯೆ ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬಳ ಶವ ಪತ್ತೆಯಾಗಿದೆ.

ತಳಲೆ -ಬೆಳ್ಳೂರು ಮಾರ್ಗದ ಮಧ್ಯದಲ್ಲಿ ರಸ್ತೆಯಿಂದ ಸುಮಾರು ಅರ್ಧ ಕಿ.ಮೀ ಕಾಡಿನ ಒಳಗೆ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ.ಯುವತಿಯು ಶಿವಮೊಗ್ಗದ ಪ್ರತಿಷ್ಠಿತ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು.

ಯುವತಿಯ ಹೆಸರು ಕವಿತಾ(22) ಎಂದು ತಿಳಿದುಬಂದಿದ್ದು ಜೋಗ ಸಮೀಪದ ಕಾನೂರು ನಿವಾಸಿಯಾಗಿದ್ದಾಳೆ. ಕಳೆದ ಐದಾರು ವರ್ಷದ ಹಿಂದೆ ರಿಪ್ಪನ್‌ಪೇಟೆಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಕಗ್ಗಲಿ ಗ್ರಾಮದ ಶಿವಮೂರ್ತಿ ಎಂಬ ಯುವಕನೊಂದಿಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು.ನಂತರ  ಭದ್ರಾವತಿಯಲ್ಲಿ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣದಿಂದಾಗಿ ಅಸಮದಾನಗೊಂಡ ಯುವಕ ಶಿವಮೂರ್ತಿ ನಿನ್ನೆ ದಿನ ಯುವತಿಯನ್ನು ರಿಪ್ಪನ್ ಪೇಟೆಗೆ ಕರೆಯಿಸಿಕೊಂಡು ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಗ್ಗಲಿ ಕಾಡಿಗೆ ಕರೆದುಕೊಂಡು ಹೋಗಿ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ತಾನು ಕಳೆನಾಶಕ ಸೇವಿಸಿ ಸಾವು-ಬದುಕಿನ ಮಧ್ಯ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಗ್ರಾಮಸ್ಥರ ಪ್ರಕಾರ ಯುವತಿಯನ್ನ ಕೊಂದು ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಲಾಗುತ್ತಿದೆ.

ಕವಿತಾಳ ಶವದ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಆದರೆ ಈ ಪತ್ರದಲ್ಲಿ ಶಿವಮೂರ್ತಿ ಎಂಬ ಯುವಕ ಬರೆದ ಪತ್ರವೆಂದು ಹೇಳಲಾಗುತ್ತಿದೆ.


ಈ ಬಗ್ಗೆ ಯುವಕ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಈ ರೀತಿ ಬರೆಯಲಾಗಿದೆ.

“ನಾನು ಪಿಯುಸಿ ಓದುತ್ತಿದ್ದ ಕಾಲೇಜಿನಲ್ಲಿ ಭಟ್ಕಳ ಹುಡುಗಿಯನ್ನು ಪ್ರೀತಿ ಮಾಡಿದ್ದೆ ಆದರೆ ಅವಳು ನನ್ನನ್ನು 7 ವರ್ಷಗಳ ಕಾಲ ಪ್ರೀತಿಸಿ ನಂತರ ಇನ್ನೊಬ್ಬ ಭದ್ರಾವತಿ ಆ್ಯಂಬುಲೆನ್ಸ್ ಡ್ರೈವರ್ ಅನ್ನು ಇಷ್ಟಪಟ್ಟು ನನಗೆ ಮೋಸ ಮಾಡಿದ ಕಾರಣ ನನಗೆ ಸಹಿಸಲಾರದೆ ಅವಳನ್ನು ಕರೆದು ತಂದು ಅವಳ ಅನಿಸಿಕೆಗಳನ್ನು ಕೇಳುವ ಬಗ್ಗೆ ಇಲ್ಲಿ ಕೇಳಿರುತ್ತೇನೆ. ಮುಂದೆ ನಡೆಯುವ ಬಗ್ಗೆ ಅವಳು ನಿರ್ಧಾರ ತೆಗೆದುಕೊಂಡಿರುತ್ತಾಳೆ. ಇಂತಿ ಶಿವಕುಮಾರ್, ಕವಿತಾ ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೆ” ಎಂದು ಬರೆದಿದೆ.

.   :::  ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಗಲ್ ಪ್ರೇಮಿ ;;;;


ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ ಶೇಖರಪ್ಪ, ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಪ್ಪ,ಮತ್ತು ಹೊಸನಗರ ವೃತ್ತ ನಿರೀಕ್ಷಕ ಮಧುಸೂದನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯುವತಿಯ ತಂದೆ ದಾನಪ್ಪ ನೀಡಿದ ದೂರಿನನ್ವಯ ಕೇಸ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮರಣೊತ್ತರ ಪರೀಕ್ಷೆಗೆ ಮೃತದೇಹವನ್ನು ಶಿವಮೊಗ್ಗದ ಸಿಂಸ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಯುವತಿಯ ಕೊಲೆಯೋ ಆತ್ಮಹತ್ಯೆಯೋ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.




ನಿರಂತರ ಸ್ಥಳೀಯ ಸುದ್ದಿಯನ್ನು ಪಡೆಯಲು ಪೋಸ್ಟ್ ಮ್ಯಾನ್ ನ್ಯೂಸ್ ನ ಫೇಸ್‌ಬುಕ್‌ ಪೇಜ್ ನ್ನು ಲೈಕ್ ಮಾಡಿ. 👇👇👇

https://www.facebook.com/ಪೋಸ್ಟ್-ಮ್ಯಾನ್-ನ್ಯೂಸ್-102786798745413/



Leave a Reply

Your email address will not be published. Required fields are marked *

Exit mobile version