ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾ ಎರಡನೇ ಅಲೆಯ ಬಳಿಕ ಮೂರನೇ ಹಂತದ ಅನ್‌ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್‌ಲಾಕ್ 3.O ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಜುಲೈ 5ರ ಮುಂಜಾನೆ 5 ಗಂಟೆಯಿಂದ ಅನ್‌ಲಾಕ್ 3.O ಅನ್ವಯವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಅನ್‌ಲಾಕ್ ಅನ್ವಯವಾಗಲಿದೆ ಎಂದಿದ್ದಾರೆ. ಮಂಗಳೂರು, ಮೈಸೂರು ಸಹಿತ ಅನ್‌ಲಾಕ್ 3.0 ಅನ್ವಯವಾಗಲಿದೆ. ಕೊವಿಡ್ ಉಸ್ತುವಾರಿ ಸಚಿವರ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ್ದಾರೆ. 3ನೇ ಹಂತದ ಅನ್‌ಲಾಕ್ ಪ್ರಕ್ರಿಯೆ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಉಪಮುಖ್ಯಮಂತ್ರಿ ಹಾಗೂ ಕೊವಿಡ್ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಅಶ್ವತ್ಥ್ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಡಾ.ಕೆ.ಸುಧಾಕರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಸಿ..ಎಸ್. ರವಿಕುಮಾರ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ.
ರಾತ್ರಿ ಕರ್ಫ್ಯೂ ಇದೆ, ವೀಕೆಂಡ್ ಕರ್ಫ್ಯೂ ಇಲ್ಲ
ರಾಜ್ಯಾದ್ಯಂತ ಪ್ರತಿದಿನ ಸಂಜೆ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಹಾಗೂ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರುವುದಿಲ್ಲ. ಧಾರ್ಮಿಕ, ರಾಜಕೀಯ ಇತರ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ. ಪಬ್ಗಳು ಕಾರ್ಯನಿರ್ವಹಿಸಲು ಅವಕಾಶ ಇಲ್ಲ ಹಾಗೂ ಸಿನಿಮಾ ಹಾಲ್ಗಳು ಕೂಡ ತೆರೆಯಲು ಅವಕಾಶ ನೀಡಲಾಗಿಲ್ಲ.
ಕೊರೊನಾ ಎರಡನೇ ಅಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಕೆಯಾಗಿದೆ. ಪಾಸಿಟಿವಿಟಿ ದರ ಕೂಡ ಕಡಿಮೆ ಆಗಿದೆ. ಕೊವಿಡ್-19 ಎರಡನೇ ಅಲೆ ಆತಂಕ ಕಡಿಮೆಯಾಗುತ್ತಿರುವಂತೆ ಲಾಕ್ಡೌನ್ ನಿಯಮಾವಳಿಗಳನ್ನು ಹಂತಹಂತವಾಗಿ ಸಡಿಲಿಕೆ ಮಾಡಲಾಗುತ್ತಿದೆ. ಜೂನ್ 14ರಂದು ಮೊದಲ ಅನ್‌ಲಾಕ್ ಘೋಷಿಸಲಾಗಿತ್ತು. ಆ ಬಳಿಕ, ಜೂನ್ 21ರಂದು ಮತ್ತೊಂದು ಹಂತದ ಲಾಕ್ಡೌನ್ ಸಡಿಲಿಕೆ ಮಾಡಲಾಗಿತ್ತು. ಇಂದು (ಜುಲೈ 3) ಮೂರನೇ ಹಂತದ ಅನ್‌ಲಾಕ್ ಘೋಷಿಸಲಾಗಿದೆ. ಜುಲೈ 5 ಅಂದರೆ ಸೋಮವಾರದಿಂದ ಈ ನಿಯಮಾವಳಿಗಳು ಜಾರಿಗೆ ಬರಲಿದೆ.
30 ವರ್ಷ 8 ತಿಂಗಳ ಸಾರ್ಥಕ ಸೇವೆಗೆ ವಿರಾಮ: ಶಿಕ್ಷಕಿ ಅಂಬಿಕಾ ಸಿ. ಅವರಿಗೆ ಆತ್ಮೀಯ ಬೀಳ್ಕೊಡುಗೆ Teacher Ambika…
ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ Ramesh H.B. has been appointed as the…
ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ Thousands of devotees participated in…
ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ Hosanagara PSI…
ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ - 9ನೇ ತರಗತಿ ವಿದ್ಯಾರ್ಥಿನಿ ಸಾವು A tragic incident…
ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು Shivamogga police have registered…