Categories: Blog

ಪೋಸ್ಟ್ ಮ್ಯಾನ್ ನ್ಯೂಸ್ ನ ಬಿಗ್ ಇಂಪ್ಯಾಕ್ಟ್:

ಆನಂದಪುರ: ಮೂರು ದಿನಗಳ ಹಿಂದೆ ಪೋಸ್ಟ್ ಮ್ಯಾನ್ ನ್ಯೂಸ್   ಸಾಗರ ತಾಲ್ಲೂಕು ಆನಂದಪುರದ ಪೊಲೀಸ್ ವಸತಿ ಗೃಹಗಳು  ಪಾಳುಬಿದ್ದಿವೆ ಎಂದು ಸುದ್ದಿ ಪ್ರಸಾರ ಮಾಡಿತ್ತು.ಈ ಜಾಗ ಅಕ್ರಮ ಚಟುವಟಿಕೆಗಳ ತಾಣವೂ ಆಗಿತ್ತು .ಬಾನೆತ್ತರಕ್ಕೆ ಗಿಡಗಂಟಿಗಳು ಬೆಳೆದಿತ್ತು ಎಂದು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಇದೀಗ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೀಗ ಜಾಗವನ್ನು ಸ್ವಚ್ಛಗೊಳಿಸಿ ಗಿಡಗಂಟಿಗಳನ್ನು ಕಡಿದು ಇದೀಗ ಆ ಜಾಗಕ್ಕೆ ಹೊಸ ಕಳೆ ನೀಡುತ್ತಿದ್ದಾರೆ.
ವಸತಿ ಗೃಹದ ಒಳಗಡೆಯೂ ಸಹ ಸ್ವಚ್ಚಗೊಳಿಸಿ ಹೊರಗಡೆಯಿಂದ ಬೀಗ ವನ್ನು ಹಾಕಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಪೋಸ್ಟ್ ಮ್ಯಾನ್ ನ್ಯೂಸ್  ಸುದ್ದಿ ಮಾಡಿದ ಫಲಶ್ರುತಿಗೆ ಇದೀಗ ಆ ಜಾಗ ಹೊಸ ಕಳೆಯೊಂದಿಗೆ ಅಕ್ರಮ ಚಟುವಟಿಕೆಯ  ತಾಣದಿಂದ ಮುಕ್ತಿ ಆಗುತ್ತಿರುವುದು ನಿಜಕ್ಕೂ ನಮ್ಮ ಹೆಮ್ಮೆಯ ಗರಿ.

ವರದಿ : ಪವನ್ ಕುಮಾರ್, ಕಠಾರೆ

ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..




ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

30 ವರ್ಷ 8 ತಿಂಗಳ ಸಾರ್ಥಕ ಸೇವೆಗೆ ವಿರಾಮ: ಬರುವೆ ಶಾಲೆಯ ಶಿಕ್ಷಕಿ ಅಂಬಿಕಾ ಸಿ. ಅವರಿಗೆ ಆತ್ಮೀಯ ಬೀಳ್ಕೊಡುಗೆ

30 ವರ್ಷ 8 ತಿಂಗಳ ಸಾರ್ಥಕ ಸೇವೆಗೆ ವಿರಾಮ: ಶಿಕ್ಷಕಿ ಅಂಬಿಕಾ ಸಿ. ಅವರಿಗೆ ಆತ್ಮೀಯ ಬೀಳ್ಕೊಡುಗೆ Teacher Ambika…

3 hours ago

ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ Ramesh H.B. has been appointed as the…

4 hours ago

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ Thousands of devotees participated in…

4 hours ago

ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ

ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ Hosanagara PSI…

6 hours ago

ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ – 9ನೇ ತರಗತಿ ವಿದ್ಯಾರ್ಥಿನಿ ಸಾವು

ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ - 9ನೇ ತರಗತಿ ವಿದ್ಯಾರ್ಥಿನಿ ಸಾವು A tragic incident…

7 hours ago

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು Shivamogga police have registered…

7 hours ago