Categories: Blog

ಕರೋನಾ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆ ಸಾರ್ವಜನಿಕರ ಸಹಕಾರ ಅಗತ್ಯ: ಡಾ ರಾಘವೇಂದ್ರ

ಚಂದ್ರಗುತ್ತಿ :: ಇಲ್ಲಿ ಪ್ರಾಥಮಿಕ ಅರೋಗ್ಯ  ಕೇಂದ್ರದಲ್ಲಿ ವೈದ್ಯರ ದಿನಾಚರಣೆಯನ್ನು  ಕೇಕ್ ಕತ್ತರಿಸುವ ಮೂಲಕ  ಆಚರಿಸಲಾಯಿತು,ಈ ಸಮಯದಲ್ಲಿ ಡಾ ರಾಘವೇಂದ್ರರವರು ಮಾತನಾಡಿ ಕರೋನಾ ನಿಯಂತ್ರಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಮತ್ತು ಆಶಾಕಾರ್ಯಕರ್ತೆಯರು  ಅಂಗನವಾಡಿ ಕಾರ್ಯಕರ್ತೆಯರ  ಪಾತ್ರ ಮಹತ್ತರವಾದದ್ದದ್ದು ,ಕರೋನ  ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಎಲ್ಲರೂ ತಪ್ಪದೇ ಕರೋನಾ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿಸಿದರು.

ಸೊರಬ ತಾಲೂಕಿನಲ್ಲಿ ಕರೋನ ತಡೆಗಟ್ಟುವಿಕೆಯಲ್ಲಿ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪನವರು ಮತ್ತು ತಾಲೂಕ್ ವೈದ್ಯಾಧಿಕಾರಿ ಅಕ್ಷತಾ ಖಾನಾಪುರ ಹಾಗೂ ತಾಲೂಕು ಆಡಳಿತ ಸಂಪೂರ್ಣ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಈ ಸಂಧರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಸಿಬಂದಿಗಳಾದ ಮಲ್ಲಮ್ಮ,ವೀಣಾ,ಬೇಬಿ,ವೀಣಾ ನಾಯ್ಕ್,ಅನಿತಾ,ಪೂಜಾ,ಉಷಾ,ಕಾವ್ಯ,ಚೇತನಾ,
ಪ್ರಿಯಾಂಕಾ,ಪ್ರವೀಣ್ ಹಾಗೂ ಆಶಾ ಕಾರ್ಯಕರ್ತೆಯರು  ಹಾಜರಿದ್ದರು.
ವರದಿ:ಪ್ರಸನ್ನ ಶೇಟ್ ಚಂದ್ರಗುತ್ತಿ
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

30 ವರ್ಷ 8 ತಿಂಗಳ ಸಾರ್ಥಕ ಸೇವೆಗೆ ವಿರಾಮ: ಬರುವೆ ಶಾಲೆಯ ಶಿಕ್ಷಕಿ ಅಂಬಿಕಾ ಸಿ. ಅವರಿಗೆ ಆತ್ಮೀಯ ಬೀಳ್ಕೊಡುಗೆ

30 ವರ್ಷ 8 ತಿಂಗಳ ಸಾರ್ಥಕ ಸೇವೆಗೆ ವಿರಾಮ: ಶಿಕ್ಷಕಿ ಅಂಬಿಕಾ ಸಿ. ಅವರಿಗೆ ಆತ್ಮೀಯ ಬೀಳ್ಕೊಡುಗೆ Teacher Ambika…

2 hours ago

ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ Ramesh H.B. has been appointed as the…

3 hours ago

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ Thousands of devotees participated in…

3 hours ago

ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ

ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ Hosanagara PSI…

5 hours ago

ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ – 9ನೇ ತರಗತಿ ವಿದ್ಯಾರ್ಥಿನಿ ಸಾವು

ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ - 9ನೇ ತರಗತಿ ವಿದ್ಯಾರ್ಥಿನಿ ಸಾವು A tragic incident…

7 hours ago

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು Shivamogga police have registered…

7 hours ago