Categories: Blog

ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ನೀಡುವಂತೆ ತೀರ್ಥಹಳ್ಳಿ ತಾಲೂಕು ಬಿಜೆಪಿ ಮುಖಂಡರಿಂದ ಒಕ್ಕೊರಲ ಮನವಿ:

ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ‌ ನೀಡುವಂತೆ ತಾಲೂಕಿನ 500ಕ್ಕೂ ಹೆಚ್ಚು ಬಿಜೆಪಿ ಮುಖಂಡರುಗಳು ಇಂದು ಸಂಸದರಾದ ಬಿ.ವೈ.ರಾಘವೇಂದ್ರರನ್ನುಶಿಕಾರಿಪುರದ ಪ್ರವಾಸಿಮಂದಿರದಲ್ಲಿ ಭೇಟಿ ಮಾಡಿ ಮನವಿ ಮಾಡಿದರು.

ಸತತ 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 5 ಬಾರಿ ಶಾಸಕರಾಗಿರುವ ಸ್ನೇಹಮಯಿ ವ್ಯಕ್ತಿತ್ವದ ಆರಗ ಜ್ಞಾನೇಂದ್ರ ರವರು ಓರ್ವ ಹಿರಿಯ ಮುತ್ಸದ್ಧಿ ರಾಜಕಾರಣಿ.ಪಕ್ಷ ಅಧಿಕಾರದಲ್ಲಿರಲಿ ಬಿಡಲಿ ತಾಲೂಕಿನಲ್ಲಿ ತಮ್ಮದೇ ಕಾರ್ಯಶೈಲಿ ಹಾಗೂ ವಿಭಿನ್ನ ವ್ಯಕ್ತಿತ್ವದ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವುದರಲ್ಲಿ ಸಿದ್ದ ಹಸ್ತರು.ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಾ,ಪಕ್ಷ ಬಲವರ್ಧನೆಗೆ ಕಾರಣರಾಗಿರುವ ಸನ್ಮಾನ್ಯ ಶಾಸಕ ಆರಗ ಜ್ಞಾನೇಂದ್ರರು ಅಧಿಕಾರಕ್ಕೋಸ್ಕರ ಎಂದೂ ಲಾಭಿ ಮಾಡದೇ ಹೋದರೂ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಜ್ಞಾನೇಂದ್ರರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ದೊರಕುತ್ತದೆಂಬ ಅಭಿಲಾಷೆಯಾಗಿತ್ತು.
ಸುರ್ಧೀರ್ಘ 45 ವರ್ಷಗಳ ಕಾಲ ತಾಲೂಕಿನಾದ್ಯಂತ ಬಿಜೆಪಿ ಪಕ್ಷವನ್ನು ಸಂಘಟಿಸುತ್ತಾ ತಮ್ಮನ್ನು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಶಾಸಕ ಆರಗ ಜ್ಞಾನೇಂದ್ರರು ಜಾತ್ಯಾತೀತ ನೆಲೆಗಟ್ಟಿನ ತೀರ್ಥಹಳ್ಳಿಯಲ್ಲಿ ಬಿಜೆಪಿ ನೆಲೆಯೂರಲು ಭದ್ರ ಬುನಾದಿ ಕಲ್ಪಿಸಿಕೊಟ್ಟಿದ್ದಾರೆ.


ಆದರೆ ಕಳೆದ ಬಾರಿಯೂ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ಲಭಿಸದೇ ಕಾರ್ಯಕರ್ತರಲ್ಲಿ ನಿರಾಸೆ ಮನೆ ಮಾಡಿತ್ತು.ಇದೀಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸನ್ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ತಾಲೂಕಿನ ಸಮಸ್ತ ಬಿಜೆಪಿ ಕಾರ್ಯಕರ್ತರಿಗೆ ನೂರ್ಮಡಿ ಬಲ ಬಂದಂತಾಗುವುದಲ್ಲದೆ ಭವಿಷ್ಯದಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದಲೂ ಪರಿಣಾಮ ಬೀರಲಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರರವರಲ್ಲಿ ತಾಲೂಕಿನ 500 ಕ್ಕೂ ಹೆಚ್ಚು ಬಿಜೆಪಿ ಮುಖಂಡರುಗಳು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ.ಡಿ.ಮೇಘರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್ , ಸಂಘಟನೆಯ ಹಿರಿಯರಾದ ಪದ್ಮನಾಭ್ ,ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಗುರುಮೂರ್ತಿ,ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಸಾಲೇಕೊಪ್ಪ ರಾಮಚಂದ್ರ, ಬೇಗುವಳ್ಳಿ ಸತೀಶ್,ಅಶೋಕ್ ಮೂರ್ತಿ, ಆರ್.ಮದನ್,ಹೊಸನಗರ ತಾಲೂಕ್ ಬಿಜೆಪಿ ಉಪಾಧ್ಯಕ್ಷರಾದ ಕಲ್ಲೂರು ನಾಗೇಂದ್ರಪ್ಪ ಗೌಡ,ಪಟ್ಟಣ ಪಂಚಾಯತಿ ಸದಸ್ಯರಾದ ಸಂದೇಶ್ ಜವಳಿ,ರಾಘವೇಂದ್ರ ಸೊಪ್ಪುಗುಡ್ಡೆ, ಟಿ.ಎ.ಪಿ.ಸಿ.ಎಮ್.ಎಸ್ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ,ತಾಲೂಕು ಪಂಚಾಯತಿ ಸದಸ್ಯರಾದ ಚಂದವಳ್ಳಿ ಸೋಮಶೇಖರ್ ,ಕುಕ್ಕೆ ಪ್ರಶಾಂತ್,ಅವುಕ ರಾಘವೇಂದ್ರ, ವಿನಾಯಕ ಹುಂಚಾ,ಗರ್ತಿಕೆರೆ ಸೀಮಶೇಖರ್,ಜಂಬಳ್ಳಿ ಗಿರೀಶ್, ಹಸಿರುಮನೆ ನಂದನ್,ನವೀನ ಹೆದ್ದೂರು,ಕೋಣಂದೂರು ಪೂರ್ಣೇಶ್,ಕಟ್ಟೆ ಮಹೇಶ್ ಕಲ್ಗದ್ದೆ ರತ್ನಾಕರ್ ಸೇರಿದಂತೆ ತಾಲೂಕಿನ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.


ವರದಿ: ಪ್ರಶಾಂತ್ ಮೇಗರವಳ್ಳಿ



ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

ಹುಂಚ ಹೋಬಳಿ ಕಾಂಗ್ರೆಸ್ OBC ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ Ramesh H.B. has been appointed as the…

1 hour ago

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ

ರಿಪ್ಪನ್‌ಪೇಟೆ, ಹರತಾಳು, ಗರ್ತಿಕೆರೆಯಲ್ಲಿ ರಾಯರ 355ನೇ ಆರಾಧನೆ; ಹರಿದು ಬಂದ ಭಕ್ತ ಸಾಗರ Thousands of devotees participated in…

2 hours ago

ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ

ಹೊಸನಗರ ಪಿಎಸ್‌ಐ ಶಂಕರ್ ಗೌಡ ಪಾಟೀಲ್ ವರ್ಗಾವಣೆ; ನೂತನ ಪಿಎಸ್‌ಐ ಆಗಿ ಸಂತೋಷ್ ಬಾಗೋಜಿ ಅಧಿಕಾರ ಸ್ವೀಕಾರ Hosanagara PSI…

4 hours ago

ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ – 9ನೇ ತರಗತಿ ವಿದ್ಯಾರ್ಥಿನಿ ಸಾವು

ದೇವಸ್ಥಾನಕ್ಕೆ ತೆರಳಿದ್ದ ಪೋಷಕರು ವಾಪಸ್ ಬರುವಷ್ಟರಲ್ಲಿ ಸಂಭವಿಸಿತ್ತು ದುರಂತ - 9ನೇ ತರಗತಿ ವಿದ್ಯಾರ್ಥಿನಿ ಸಾವು A tragic incident…

5 hours ago

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ನಿಯಮ ಉಲ್ಲಂಘನೆ; ಶಿವಮೊಗ್ಗದಲ್ಲಿ ಒಟ್ಟು 5 ಪ್ರಕರಣ ದಾಖಲು Shivamogga police have registered…

5 hours ago

ಶಿವಮೊಗ್ಗದಲ್ಲಿ ತಡರಾತ್ರಿ ಕಿಡಿಗೇಡಿಗಳ ಕೃತ್ಯ: ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ

ಶಿವಮೊಗ್ಗದಲ್ಲಿ ತಡರಾತ್ರಿ ಕಿಡಿಗೇಡಿಗಳ ಕೃತ್ಯ: ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ Miscreants allegedly set two parked bikes on…

5 hours ago