ರಿಪ್ಪನ್ ಪೇಟೆ:: ಮಾಜಿ ಶಾಸಕರಾದ ಶ್ರೀ ಬೇಳೂರು ಗೋಪಾಲಕೃಷ್ಣ ವಿರುದ್ದ ತೇಜೋವಧೆ ಮಾಡಿರುವ ವೀರೇಶ್ ಆಲುವಳ್ಳಿಯವರಿಗೆ ಗೋಪಾಲಕೃಷ್ಣ ರವರ ಬಗ್ಗೆ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆಯಾಗಲಿ ತೇಜೋವಧೆ ಮಾಡುವ ಯೋಗ್ಯತೆ ಇಲ್ಲ..
ವೀರೇಶ್ ರವರು ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರಿದವರೇ.ಕಳೆದ ವಿಧಾನಸಬೆ ಚುನಾವಣ ಸಂಧರ್ಭದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಪರ ಕೆಲಸ ಮಾಡಿರುವ ತತ್ವ ಸಿದ್ದಾಂತ ಇಲ್ಲದ ವ್ಯಕ್ತಿತ್ವ ಅವರದು..ಎರಡು ಬಾರಿ ಶಾಸಕರಾದವರ ಬಗ್ಗೆ ಹೀಗೆ ನಾಲಗೆ ಹರಿಬಿಟ್ಟಿರುವುದು ಅವರ ಕೀಳು ಮನಸ್ತಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಮುಖಂಡರು ಪತ್ರೀಕಾಗೋಷ್ಟಿಯಲ್ಲಿ ತಿಳಿಸಿದರು.
ಸತ್ಯಾಸತ್ಯತೆ
ಸೂಡುರು ಶಿವು ಅಭಿಮಾನಿ ಬಳಗದಲ್ಲಿ ಗೋಪಾಲಕೃಷ್ಣ ರವರು ಅಶ್ಲೀಲ ಫೋಟೋ ಹರಿಬಿಟ್ಟಿದ್ದಾರೆ ಎನ್ನುವ ಆರೋಪದ ಸತ್ಯಾಸತ್ಯತೆ ಏನೇಂದರೇ ಆ ಬಳಗದಲ್ಲಿ ಈ ಮುಂಚೆ ಯಾರೋ ಇನ್ನೊಬ್ಬ ವ್ಯಕ್ತಿ ಆ ಅಶ್ಲೀಲ ಪೋಟೋ ಕಳುಹಿಸಿದ್ದು ಇದನ್ನು ಸೂಡೂರು ಶಿವಣ್ಣ ಬಳಗದ ಗ್ರೂಪ್ ನ ಅಡ್ಮಿನ್ ಸೂಡೂರು ಶಿವು ಗೆ ಎಚ್ಚರಿಸುವ ಉದ್ದೇಶದಿಂದ ಗ್ರೂಪ್ ನ ಅಡ್ಮಿನ್ ಗೆ ಕಳುಹಿಸುವ ಬದಲು ಕೈ ತಪ್ಪಿನಿಂದ ಅದೇ ಗ್ರೂಪ್ ಗೆ ಹಾಕಿರುತ್ತಾರೆ..ಈ ಸಂಬಧ ಗೋಪಾಲಕೃಷ್ಣ ರವರು ಮುಂಚೆ ಕಳುಹಿಸಿದ್ದ ವ್ಯಕ್ತಿಯ ಮೇಲೆ ದೂರು ದಾಖಲಿಸುವಂತೆ ಆ ಗ್ರೂಪ್ ನ ಅಡ್ಮಿನ್ ಶಿವು ಗೆ ಸೂಚಿಸಿದ್ದರು.
ಮಾಜಿ ಶಾಸಕರು ಮೊನ್ನೆಯ ದಿನ ಸುತ್ತಾ ಮರಳು ಮಾಪಿಯಾದ ವಿರುದ್ದ ಹೋರಾಟ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರಿಂದ ಈ ಮಾಫ಼ಿಯಾದ ಫಲಾನುಭವಿಯಾದ ವೀರೇಶ್ ಆಲುವಳ್ಳಿ ರವರು ಮಾಜಿ ಶಾಸಕರಾದ ಗೋಪಾಲಕೃಷ್ಣರವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿರುತ್ತಾರೆ ಎಂದರು.
ಮಾಜಿ ಶಾಸಕರ ಬಗ್ಗೆ ನೀವು ಈ ಹಂತದ ಕೀಳುಮಟ್ಟದ ರಾಜಕೀಯಕ್ಕೆ ಇಳಿಯುವುವಾಗ ನಾವು ಕೂಡ ಆ ಹಂತಕ್ಕೆ ಇಳಿದರೆ ನಿಮ್ಮ ಸೀಮೆ ಎಣ್ಣೆ,ಗೊಬ್ಬರ,ಸೊಸೈಟಿಯ ಕರ್ಮಕಾಂಡ ತೆರೆದಿಡಬೇಕಾಗುತ್ತದೆ ಎಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಸದಸ್ಯ ಬಿ ಆಸೀಫ಼್ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಫ್ಯಾನ್ಸಿ ರವರು ಜಂಟಿ ಪತ್ರೀಕಾಗೋಷ್ಟಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂಧರ್ಭದಲ್ಲಿ ಅರಸಾಳು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಮಾಕರ್ ಕಾನುಗೊಡು, ಮತ್ತು ಉಲ್ಲಾಸ್ ತೆಂಕೋಲ್ ಉಪಸ್ತಿತರಿದ್ದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್