
ಅಕ್ರಮ ಮರ ಕಡಿತಲೆ – ನಾಲ್ವರ ಬಂಧನ
ಅಕ್ರಮ ಮರ ಕಡಿತಲೆ – ನಾಲ್ವರ ಬಂಧನ ಅಕ್ರಮವಾಗಿ ಮರ ಕಡಿತಲೆ ಮಾಡಿ ಸಾಗುವನಿ ಮರಗಳನ್ನು ಸಾಗಾಣಿಕೆ ಮಾಡುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಾಲಿಗೆರೆ ಗ್ರಾಮದ ಮಧುಸೂದನ್, ಉಂಬ್ಳೇಬೈಲು ಗ್ರಾಮದ ಕುಮಾರ್, ಕೃಷ್ಣ ಹಾಗೂ ಗಾಜನೂರು ಗ್ರಾಮದ ಮೈಲಾರಿ ಎಂದು ಗುರುತಿಸಲಾಗಿದೆ. ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಮರಕಡಿತಲೆ ಮಾಡಿ ಟಾಟಾ ಏಸ್‌ನಲ್ಲಿ 6 ಮರಗಳನ್ನು ಸಾಲಿಗೆರೆಯಿಂದ ಗಾಜನೂರಿಗೆ ಸಾಗಿಸುವ ವೇಳೆ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ….


