
ಬಂಕಾಪುರದಲ್ಲಿ 486ನೇ ಮಹಾರಾಣಾ ಪ್ರತಾಪ್ ಸಿಂಹ ಜಯಂತೋತ್ಸವ ಆಚರಣೆ
ಬಂಕಾಪುರದಲ್ಲಿ 486ನೇ ಮಹಾರಾಣಾ ಪ್ರತಾಪ್ ಸಿಂಹ ಜಯಂತೋತ್ಸವ ಆಚರಣೆ ಬಂಕಾಪುರ, ಜೂ.12: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಕನೋಜಗಲ್ಲಿಯ ಈಶ್ವರ ದೇವಸ್ಥಾನದಲ್ಲಿ 486ನೇ ಮಹಾರಾಣಾ ಪ್ರತಾಪ್ ಸಿಂಹ ಜಯಂತೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯ ರಾಜೇಂದ್ರ ಟೋಪಣ್ಣವರ್ ಚಾಲನೆ ನೀಡಿ ಮಾತನಾಡಿ, ಮಹಾರಾಣಾ ಪ್ರತಾಪ್ ಸಿಂಹ ಭಾರತೀಯ ಇತಿಹಾಸದ ಅತ್ಯಂತ ಧೈರ್ಯಶಾಲಿ ಆಡಳಿತಗಾರರಲ್ಲಿ ಒಬ್ಬರಾಗಿದ್ದು, ದೇಶಭಕ್ತಿ, ಶೌರ್ಯ ಹಾಗೂ ತ್ಯಾಗದ ಪ್ರತೀಕವಾಗಿದ್ದಾರೆ ಎಂದು ಹೇಳಿದರು. ಮೊಘಲ್ ಸಾಮ್ರಾಜ್ಯದ ಅಕ್ಬರ್‌ನ ದಬ್ಬಾಳಿಕೆಯ ವಿರುದ್ಧ ಧೈರ್ಯದಿಂದ…



