Headlines

ಭಾರಿ ಮಳೆ | ಹೊಸನಗರ ತಾಲೂಕಿನಾದ್ಯಂತ ಶಾಲೆಗಳಿಗೆ ‘ರಜೆ’ ನೀಡುವ ನಿರ್ಧಾರ ಶಾಲಾಭಿವೃದ್ದಿ ಸಮಿತಿಗೆ

ಭಾರಿ ಮಳೆ | ಹೊಸನಗರ ತಾಲೂಕಿನಾದ್ಯಂತ ಶಾಲೆಗಳಿಗೆ ‘ರಜೆ’ ನೀಡುವ ನಿರ್ಧಾರ ಶಾಲಾಭಿವೃದ್ದಿ ಸಮಿತಿಗೆ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ನಿಟ್ಟೂರು ಭಾಗದಲ್ಲಿ ಮುಂಗಾರು ಮಳೆ ರಭಸವಾಗಿ  ಸುರಿಯುತ್ತಿರುವುದು ಮುಂದುವರೆದಿರುವುದು ವರದಿಯಾಗಿದ್ದು ಈ ಬಗ್ಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ರವರೊಂದಿಗೆ ಚರ್ಚಿಸಿದ್ದು, ಅವರ ಸೂಚನೆಯಂತೆ, ಇದೇ ರೀತಿ ಪರಿಸ್ಥಿತಿ ತಾಲ್ಲೂಕಿನ  ಕೆಲವು ಭಾಗದಲ್ಲಿಯೂ ಇರುವ ಕಾರಣ ಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾಗುವ  ಪರಿಸ್ಥಿತಿಯಿದ್ದಲ್ಲಿ ಎಸ್ ಡಿಎಂಸಿ ಯವರೊಂದಿಗೆ ಚರ್ಚಿಸಿ ರಜೆ ನೀಡಲು ಕ್ರಮವಹಿಸಲು ತಾಲೂಕಿನ ಎಲ್ಲಾ ಶಾಲೆಯ…

Read More

ಬಸ್ಸು ಚಲಿಸುತ್ತಿರುವಾಗಲೇ ತುಂಡಾಗಿ ಬಿದ್ದ ವಿದ್ಯುತ್ ತಂತಿ – ತಪ್ಪಿದ ಭಾರೀ ಅನಾಹುತ

ಬಸ್ಸು ಚಲಿಸುತ್ತಿರುವಾಗಲೇ ತುಂಡಾಗಿ ಬಿದ್ದ ವಿದ್ಯುತ್ ತಂತಿ – ತಪ್ಪಿದ ಭಾರೀ ಅನಾಹುತ ಬಸ್ಸು ಚಲಿಸುತ್ತಿರುವಾಗಲೇ ವಿದ್ಯುತ್ ತಂತಿ ತುಂಡಾಗಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹನಿಯ ಬಳಿ ನಡೆದಿದೆ. ನಗರ ಕಡೆಯಿಂದ ಹೊಸನಗರ ಕಡೆ ದುರ್ಗಾಂಬ ಖಾಸಗಿ ಬಸ್ಸು ಹೋಗುತ್ತಿರುವಾಗ ವಿದ್ಯುತ್ ತಂತಿ ಬಿದ್ದಿದೆ. ಈ ವೇಳೆ ಚಾಲಕ ಸೇರಿದಂತೆ ಪ್ರಯಾಣಿಕರು ಆತಂಕಗೊಳ್ಳುವಂತಾಗಿತ್ತು. ಆದರೆ ವಿದ್ಯುತ್ ಇಲ್ಲದ ಕಾರಣ ಯಾವುದೇ ಅನಾಹುತವಾಗಿಲ್ಲ, ಒಂದು ವೇಳೆ ಈ ಸಂಧರ್ಭದಲ್ಲಿ ವಿದ್ಯುತ್ ಇದ್ದಿದ್ದರೆ ಭಾರಿ ಅನಾಹುತವಾಗುವ…

Read More

ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ಸಂಚಾರ ವ್ಯತ್ಯಯ , ತಪ್ಪಿದ್ ಭಾರಿ ಅನಾಹುತ್

ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ಸಂಚಾರ ವ್ಯತ್ಯಯ , ತಪ್ಪಿದ್ ಭಾರಿ ಅನಾಹುತ್ ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದು ಸಂಚಾರ ವ್ಯತ್ಯಯವಾಗಿದೆ.ಮರ ಬಿದ್ದ ಪಕ್ಕದಲ್ಲಿಯೇ ಪಿಕಪ್ ವಾಹನವೊಂದು ನಿಂತಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಭಾರಿ ಅನಾಹುತವೊಂದು ತಪ್ಪಿದೆ. ಸಾಗರ ರಸ್ತೆಯ ಮುಸ್ಲಿಂ ಖಬರ್ ಸ್ಥಾನ್ ಮುಂಭಾಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರ ವ್ಯತ್ಯಯವಾಗಿದೆ.ಈ ಸಂಧರ್ಭದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವಾಹನದ…

Read More

ಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗೆ ಮನೆ ಕುಸಿತ – ಸ್ಥಳಕ್ಕೆ ತಹಶೀಲ್ದಾರ್ , ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ – ಆರ್ಥಿಕ ನೆರವು

ಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗೆ ಮನೆ ಕುಸಿತ – ಸ್ಥಳಕ್ಕೆ ತಹಶೀಲ್ದಾರ್ , ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ – ಆರ್ಥಿಕ ನೆರವು ಹೊಸನಗರ : ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳವಳ್ಳಿ ಗ್ರಾಮದಲ್ಲಿ ಬಾರಿ ಮಳೆಯಿಂದ ಮನೆಯೊಂದು ಕುಸಿತವಾಗಿದ್ದು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸಿಲ್ದಾರ್ ರಶ್ಮಿ ಹಾಲೇಶ್ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳವಳ್ಳಿ ಗ್ರಾಮದ ಸೀತಮ್ಮ ಕೋಂ ಗಿರೀಶ್ ಎಂಬುವವರ…

Read More

ಹೊಸನಗರಕ್ಕೆ ಪ್ರವಾಸ ಹೊರಟಿದ್ದ ಕಾರು ಅಪಘಾತ – ಯುವ ವೈದ್ಯೆ ಸಾವು

ಹೊಸನಗರಕ್ಕೆ ಪ್ರವಾಸ ಹೊರಟಿದ್ದ ಕಾರು ಅಪಘಾತ – ಯುವ ವೈದ್ಯೆ ಸಾವು ಶಿವಮೊಗ್ಗ : ಕಾರು ಅಪಘಾತದಲ್ಲಿ ಗಾಯಗೊಂಡು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯೆಯೋರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜೂ. 19 ರ ಮುಂಜಾನೆ ನಡೆದಿದೆ. ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಸನಾ ರಾಬಿಯಾ ಕೌಸರ್ (22) ಮೃತಪಟ್ಟ ಯುವ ವೈದ್ಯೆ ಎಂದು ಗುರುತಿಸಲಾಗಿದೆ.ಇತ್ತೀಚೆಗೆ ಇವರು ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದು, ಸಿಮ್ಸ್ ಮೆಡಿಕಲ್ ಕಾಲೇಜ್ ನಲ್ಲಿ ಇಂಟರ್ನ್’ಶಿಪ್ ಮಾಡುತ್ತಿದ್ದರು ಎಂಬ ಮಾಹಿತಿ…

Read More

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ ಮಲೆನಾಡು ಕರಾವಳಿ ಸಂಪರ್ಕದ ​​ಪ್ರಮುಖ ಮಾರ್ಗಗಳಲ್ಲಿ ಒಂದಾದ ಹುಲಿಕಲ್ ಘಾಟಿಯಲ್ಲಿ ಮಧ್ಯರಾತ್ರಿಯಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರಮುಖ ಹೇರ್ ಪಿನ್ ತಿರುವಿನಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‌ಗಟ್ಟಲೆ ವಾಹನಗಳು ರಸ್ತೆಯ ಸಾಲುಗಟ್ಟಿ ನಿಂತ ಘಟನೆ ನಡೆದಿದೆ. ಸೋಮವಾರ ಮಧ್ಯ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನ 1 ಗಂಟೆಯವರೆಗೂ ಸಂಚಾರ ಸ್ಥಗಿತವಾಗಿತ್ತು ನಗರ ಪೊಲೀಸ್…

Read More

ಕಿಡಿಗೇಡಿಗಳಿಂದ ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ: ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ರಿಂದ ಸ್ಥಳ ಪರಿಶೀಲನೆ‌

ಕಿಡಿಗೇಡಿಗಳಿಂದ ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ: ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ರಿಂದ ಸ್ಥಳ ಪರಿಶೀಲನೆ‌ ಹೊಸನಗರ ತಾಲೂಕಿನ ಪುರಪ್ಪೆಮನೆ ಹಾಗೂ ಹರಿದ್ರಾವತಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕೈಗಾರಿಕಾ ತ್ಯಾಜ್ಯವನ್ನು ಎಸೆಯುವ ಮೂಲಕ ಅರಣ್ಯ ಜೀವಿಗಳ ಸಂತತಿಯ ಮೇಲೆ ಪರಿಣಾಮ ಬೀರುವ ಮತ್ತು ಜೀವ ವೈವಿಧ್ಯತೆಯನ್ನು ಕಡಿಮೆ ಮಾಡುವ ಯತ್ನ ಕಿಡಿಗೇಡಿಗಳಿಂದ ನಡೆಯುತ್ತಿದೆ. ಹೌದು ಹೊಸನಗರ ತಾಲೂಕಿನ ಪುರಪ್ಪೆಮನೆ ಹಾಗೂ ಹರಿದ್ರಾವತಿ ಗ್ರಾಪಂ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಕೈಗಾರಿಕಾ…

Read More

HOSANAGARA | ಭಾರಿ ಮಳೆಗೆ ಭೂ ಕುಸಿತ – ಒಂದಡಿಯಷ್ಟು ಕೆಳಗೆ ಕುಸಿದ ರಸ್ತೆ

HOSANAGARA | ಭಾರಿ ಮಳೆಗೆ ಭೂ ಕುಸಿತ – ಒಂದಡಿಯಷ್ಟು ಕೆಳಗೆ ಕುಸಿದ ರಸ್ತೆ ಶಿವಮೊಗ್ಗ ಜಿಲ್ಲಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಹಲವಾರು ಕಡೆ ಅನಾಹುಗಳು ನಡೆದಿದೆ ಇನ್ನು ಹೊಸನಗರ ತಾಲೂಕಿನ ಅರಮನೆ ಗ್ರಾಪಂ ವ್ಯಾಪ್ತಿಯಲ್ಲಿ ಕುಂದಗಲ್ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಕುಂದಗಲ್‌ ಗ್ರಾಮದಲ್ಲಿ ಸುಮಾರು 200 ಅಡಿಯಷ್ಟು ವ್ಯಾಪ್ತಿಯಲ್ಲಿ ಭೂಕುಸಿತವಾಗಿರುವ ವರದಿಯಾಗಿದೆ.ಇನ್ನೂ ಈ ಕುಸಿತದಿಂದ ರಸ್ತೆ ಒಂದು ಅಡಿಯಷ್ಟು ಕೆಳಗೆ ಇಳಿದಿದೆ. ಕುಂದಗಲ್‌ ಗ್ರಾಮದಲ್ಲಿ ಸುಮಾರು ಒಂದು ಅಡಿಯಷ್ಟು ಭೂ ಕುಸಿತ ಉಂಟಾಗಿದೆ. ಕಳೆದ…

Read More

ಸಾಗರ ಹೊಸನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ

ಸಾಗರ ಹೊಸನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ಶಿವಮೊಗ್ಗ: ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ಕ್ಷೇತ್ರದ ಮನೆ, ರಸ್ತೆಗಳು ಹಾನಿಗೊಂಡಿವೆ‌.ಸದರಿ ಪ್ರದೇಶಗಳಿಗೆ ತತ್ತಕ್ಷಣ ಭೇಟಿ ನೀಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ವಿದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು ಶಾಸಕರ ಆಪ್ತ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ…

Read More

ಹೊಸನಗರದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಬಕ್ರೀದ್ ಆಚರಣೆ

ಹೊಸನಗರದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಬಕ್ರೀದ್ ಆಚರಣೆ HOSANAGARA |  ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್‌ ಹಬ್ಬ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ನಂತರ ಬರುವ ದೊಡ್ಡ ಹಬ್ಬ ಇದಾಗಿದ್ದು, ತ್ಯಾಗದ ಸಂಕೇತವಾಗಿರುವ ಈ ಹಬ್ಬವನ್ನು ಪ್ರಪಂಚದಾದ್ಯಂತ ಮುಸ್ಲಿಮರು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಪ್ರತಿವರ್ಷ ದುಲ್-ಅಜ್‌-ಹಜ್ಜ್ ತಿಂಗಳಿನ ಹತ್ತನೇ ದಿನದಂದು, ಪ್ರಪಂಚದಾದ್ಯಂತ ಮುಸ್ಲಿಮರು ಈದ್‌-ಉಲ್‌-ಅಧಾ ಅಂದರೆ ಬಕ್ರೀದ್‌ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ದಿನ ಸಾಮಾನ್ಯವಾಗಿ ಕುರಿ, ಮೇಕೆಯನ್ನು ದೇವರಿಗಾಗಿ ಬಲಿ ಕೊಡಲಾಗುತ್ತದೆ ಎಂದು…

Read More
Exit mobile version