Headlines

ಬೊಮ್ಮನಕಟ್ಟೆಯಲ್ಲಿ ರೌಡಿ ಶೀಟರ್ ಅವಿನಾಶ್ ನ ಬರ್ಬರ ಹತ್ಯೆ

ಬೊಮ್ಮನಕಟ್ಟೆಯಲ್ಲಿ ರೌಡಿ ಶೀಟರ್ ಅವಿನಾಶ್ ನ ಬರ್ಬರ ಹತ್ಯೆ ಶಿವಮೊಗ್ಗ ನಗರದ ಹಳೆ ಬೊಮ್ಮನಕಟ್ಟೆಯ ಕೆಂಚಮ್ಮನ ದೇವಸ್ಥಾನದ ಹಿಂಬದಿಯ ಕೆರೆ ಏರಿಯ ಮೇಲೆ ಶನಿವಾರ ತಡರಾತ್ರಿ ವ್ಯಕ್ತಿಯೊಬ್ಬನ ಕೊಲೆ ನಡೆದಿದೆ. ಹಳೇಬೊಮ್ಮನಕಟ್ಟೆಯ ಶೇಖರಪ್ಪ ಎಂಬುವವರ ಪುತ್ರ ಅವಿನಾಶ್ (32) ಕೊಲೆಗೀಡಾದವ. ಅವಿನಾಶ್ 10 ವರ್ಷಗಳ ಹಿಂದೆ ನಡೆದ ರೌಡಿ ಶೀಟರ್ ತಮಿಳುಗಿರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ನಂತರ ನ್ಯಾಯಾಲಯ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪೆರೋಲ್ ಮೇಲೆ ಅವಿನಾಶ್ ಈಚೆಗೆ ಮನೆಗೆ ಬಂದಿದ್ದನು ಎಂದು ತಿಳಿದುಬಂದಿದೆ.ಕೊಲೆ…

Read More

ಸ್ನೇಹಿತನ ಮನೆಯಲ್ಲಿ ಪಾರ್ಟಿ ನಡೆಸುವಾಗ ದುರಂತ – ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಸಾವು

ಸ್ನೇಹಿತನ ಮನೆಯಲ್ಲಿ ಪಾರ್ಟಿ ನಡೆಸುವಾಗ ದುರಂತ – ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಸಾವು ಸ್ನೇಹಿತನ ತೋಟದ ಮನೆಯಲ್ಲಿ ಪಾರ್ಟಿ ನಡೆಸಲು ತೆರಳಿದ್ದ ವೇಳೆ ತಾಲ್ಲೂಕಿನ ಯಡವಾಲದಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಶನಿವಾರ ತಡರಾತ್ರಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಯಡವಾಲ ಗ್ರಾಮದ ಕುಮಾರನಾಯ್ಜ ಅವರ ಪುತ್ರ, ಬಿ.ಕಾಂ ಓದುತ್ತಿದ್ದ ಗೌತಮ್ (22) ಹಾಗೂ ಶಿವಮೊಗ್ಗದ ಕುಂಬಾರಗುಂಡಿ ಚೌಡಮ್ಮನ ದೇವಸ್ಥಾನ ಸಮೀಪದ ನಿವಾಸಿ ವಿಜಯ್ ಅವರ ಪುತ್ರ ಚಿರಂಜೀವಿ (22) ಸಾವಿಗೀಡಾದವರು. ಸ್ನೇಹಿತ ಗೌತಮ್ ಸಹೋದರಿ…

Read More

ಶಾಲಾ ವಾಹನಗಳ ದಿಢೀರ್ ತಪಾಸಣೆ –ಸುರಕ್ಷತಾ ನಿಯಮ ಪಾಲನೆಗೆ ಖಡಕ್ ವಾರ್ನಿಂಗ್

ಶಾಲಾ ವಾಹನಗಳ ದಿಢೀರ್ ತಪಾಸಣೆ –ಸುರಕ್ಷತಾ ನಿಯಮ ಪಾಲನೆಗೆ ಖಡಕ್ ವಾರ್ನಿಂಗ್ ಶಿವಮೊಗ್ಗ  ಜೂ. 21: ಶಿವಮೊಗ್ಗ ನಗರದಲ್ಲಿ ಜೂ. 21 ರಂದು ಪೂರ್ವ ಹಾಗೂ ಪಶ್ಚಿಮ ಟ್ರಾಫಿಕ್ ಠಾಣೆಗಳ ಪೊಲೀಸರು, ಖಾಸಗಿ ಶಾಲಾ ವಾಹನಗಳ ದಿಢೀರ್ ತಪಾಸಣೆ ನಡೆಸಿ, ಸುರಕ್ಷತಾ ನಿಯಮಗಳ ಪಾಲನೆ ಕುರಿತಂತೆ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದರು. ‘ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಟ್ರಾಫಿಕ್ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು, ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗ ನಗರಾದ್ಯಂತ ಶಾಲಾ ವಾಹನಗಳ…

Read More

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1.75 ಲಕ್ಷ ರೂ ಕಳ್ಳತನ

ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 1.75 ಲಕ್ಷ ರೂ ಕಳ್ಳತನ ಶಿವಮೊಗ್ಗ : ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ನಿವಾಸಿ ಪಾಲಾಕ್ಷಮ್ಮ  ಅವರ  ಮಗಳು ಅಡಮಾನವಿಟ್ಟಿದ್ದ ಒಡವೆಗಳನ್ನು ಬಿಡಿಸಿಕೊಳ್ಳಲು ಹಣ ಬೇಕೆಂದು ಹೇಳಿದ್ದರಿಂದ ತಮ್ಮ ಗ್ರಾಮದ ಬಳಿ ಇರುವ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ೧,೭೫,೦೦೦ ಹಣವನ್ನು ಬಿಡಿಸಿಕೊಂಡು ಜೂನ್ ೧೪ರಂದು ಎನ್‌ಆರ್ ಪುರದಲ್ಲಿರುವ ಅವಳ…

Read More

ANANDAPURA | ಸಾಲಬಾಧೆಗೆ ಬೇಸತ್ತು ಗ್ರಾಪಂ ಮಾಜಿ ಸದಸ್ಯ ಆತ್ಮಹತ್ಯೆ

ಸಾಲಬಾಧೆಗೆ ಬೇಸತ್ತು ಗ್ರಾಪಂ ಮಾಜಿ ಸದಸ್ಯ ಆತ್ಮಹತ್ಯೆ ಸಾಗರ : ಸಾಲ ಬಾಧೆ ತಾಳಲಾರದೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೇಘರಾಜ್ ಬಿ ಎಚ್ (43) ಗೌತಮಪುರ  ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಾಗಿರುವ ಮೇಘರಾಜ್  5 ಲಕ್ಷಕ್ಕೂ ಅಧಿಕ ಸಾಲವನ್ನು  ಬೆಳೆಗಾಗಿ ಮಾಡಿರುವ ಮಾಹಿತಿ ತಿಳಿದು ಬಂದಿದೆ. ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೋಲ್ಡ್ ಲೋನ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ….

Read More

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ಖಡಕ್ ಎಚ್ಚರಿಕೆ..!

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಯುವಕನನ್ನು ವಶಕ್ಕೆ ಪಡೆದು ಪೊಲೀಸರಿಂದ ಖಡಕ್ ಎಚ್ಚರಿಕೆ..! ತೀರ್ಥಹಳ್ಳಿ :  ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದು ರೀಲ್ಸ್ ಮಾಡಿದ ಘಟನೆ ಬಗ್ಗೆ ಹಲವು ಮಾದ್ಯಮಗಳಲ್ಲಿ ವರದಿಯಾಗಿತ್ತು. ವರದಿ ಬೆನ್ನಲ್ಲೇ ರೀಲ್ಸ್ ಮಾಡಿದ ಯುವಕನನ್ನು ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸುಷ್ಮಾ ರವರು ಕರೆದು ವಿಚಾರಿಸಿ ಎಚ್ಚರಿಕೆ ನೀಡಿದ್ದಾರೆ. ರೀಲ್ಸ್ ಮಾಡಿದ ಯುವಕನ ಮೇಲೆ ಸಣ್ಣದೊಂದು ಕೇಸ್…

Read More

ಹೊಸನಗರಕ್ಕೆ ಪ್ರವಾಸ ಹೊರಟಿದ್ದ ಕಾರು ಅಪಘಾತ – ಯುವ ವೈದ್ಯೆ ಸಾವು

ಹೊಸನಗರಕ್ಕೆ ಪ್ರವಾಸ ಹೊರಟಿದ್ದ ಕಾರು ಅಪಘಾತ – ಯುವ ವೈದ್ಯೆ ಸಾವು ಶಿವಮೊಗ್ಗ : ಕಾರು ಅಪಘಾತದಲ್ಲಿ ಗಾಯಗೊಂಡು, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯೆಯೋರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜೂ. 19 ರ ಮುಂಜಾನೆ ನಡೆದಿದೆ. ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಸನಾ ರಾಬಿಯಾ ಕೌಸರ್ (22) ಮೃತಪಟ್ಟ ಯುವ ವೈದ್ಯೆ ಎಂದು ಗುರುತಿಸಲಾಗಿದೆ.ಇತ್ತೀಚೆಗೆ ಇವರು ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದು, ಸಿಮ್ಸ್ ಮೆಡಿಕಲ್ ಕಾಲೇಜ್ ನಲ್ಲಿ ಇಂಟರ್ನ್’ಶಿಪ್ ಮಾಡುತ್ತಿದ್ದರು ಎಂಬ ಮಾಹಿತಿ…

Read More

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಸಾರ್ವಜನಿಕರ ಪರದಾಟ

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಸಾರ್ವಜನಿಕರ ಪರದಾಟ ತೀರ್ಥಹಳ್ಳಿ : ಸಾಮಾಜಿಕ ಜಾಲತಾಣಗಳಿಂದ ಎಷ್ಟು ಒಳ್ಳೆಯದೋ ಅದಕ್ಕಿಂತ ಜಾಸ್ತಿ ಹಾಳಾಗುವುದೇ ಹೆಚ್ಚು. ಅದರಲ್ಲೂ ಈಗ ರೀಲ್ಸ್ ಎಂಬ ಶೋಕಿ ಕೆಲವರಿಗೆ ಹುಚ್ಚಾಟವಾಗಿದೆ. ತೀರ್ಥಹಳ್ಳಿಯಲ್ಲಿ ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ಬೈಕ್ ಸುತ್ತು ಹೊಡೆಯುತ್ತಿದ್ದು ಅದರ ಮಧ್ಯೆ ಓರ್ವ ಯುವಕ ಡ್ಯಾನ್ಸ್ ಮಾಡುತ್ತಿರುವ ರೀಲ್ಸ್…

Read More

SHIVAMOGGA | ಪತ್ನಿ ಮತ್ತು ಅತ್ತೆಯ ಕೊಲೆಗೆ ಯತ್ನಿಸಿದವನಿಗೆ ಶಿಕ್ಷೆ ಪ್ರಕಟ

SHIVAMOGGA | ಪತ್ನಿ ಮತ್ತು ಅತ್ತೆಯ ಕೊಲೆಗೆ ಯತ್ನಿಸಿದವನಿಗೆ ಶಿಕ್ಷೆ ಪ್ರಕಟ ಶಿವಮೊಗ್ಗ: ವಿಚ್ಛೇದಿತ  ಪತ್ನಿಯ ಮನೆಗೆ ತೆರಳಿ ಆಕೆ ಮತ್ತು ಆಕೆಯ ತಾಯಿಯನ್ನು ಕೊಲೆ ಮಾಡುವ ಉದ್ದೇಶದಿಂದ  ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಪತಿಗೆ ಜಿಲ್ಲಾ ನ್ಯಾಯಾಲಯ  ೨ ವರ್ಷ ಸಾದಾ ಕಾರಾಗೃಹವಾಸ ಶಿಕ್ಷೆ ಮತ್ತು ರೂ ೨೦ ಸಾವಿರ  ರೂ. ದಂಡ ವಿಧಿಸಿ ತೀರ್ಪು ನೀಡಿದೆ. ವಿದ್ಯಾನಗರದ ವಾಸಿ ರಾಘವೇಂದ್ರ (೩೮) ಶಿಕ್ಷಗೊಳಗಾದವನು.  ಈತನು, ತನ್ನ ಹೆಂಡತಿಯೊಂದಿಗೆ ವಿಚ್ಛೇದನ ಮಾಡಿಕೊಂಡಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು….

Read More

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ ಮಲೆನಾಡು ಕರಾವಳಿ ಸಂಪರ್ಕದ ​​ಪ್ರಮುಖ ಮಾರ್ಗಗಳಲ್ಲಿ ಒಂದಾದ ಹುಲಿಕಲ್ ಘಾಟಿಯಲ್ಲಿ ಮಧ್ಯರಾತ್ರಿಯಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರಮುಖ ಹೇರ್ ಪಿನ್ ತಿರುವಿನಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‌ಗಟ್ಟಲೆ ವಾಹನಗಳು ರಸ್ತೆಯ ಸಾಲುಗಟ್ಟಿ ನಿಂತ ಘಟನೆ ನಡೆದಿದೆ. ಸೋಮವಾರ ಮಧ್ಯ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನ 1 ಗಂಟೆಯವರೆಗೂ ಸಂಚಾರ ಸ್ಥಗಿತವಾಗಿತ್ತು ನಗರ ಪೊಲೀಸ್…

Read More
Exit mobile version