ಹೊಸನಗರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಹೊತ್ತಿ ಉರಿದ ಮನೆ – ಉಟ್ಟ ಬಟ್ಟೆಯಲ್ಲಿಯೇ ಬೀದಿಗೆ ಬಿದ್ದ ಬಡ ಕುಟುಂಬ|Fire
ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಕೂಡ್ಲಿಕೊಪ್ಪ ಸ್ವಾಮಿ ಎಂಬುವವರ ಮನೆಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ಸಂಭವಿಸಿದ್ದು ಮನೆ ಸಂಪೂರ್ಣ ಸುಟ್ಟು ಹೋಗಿದೆ. ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು ಕೂಡಲೇ ಮನೆಯಲ್ಲಿದ್ದವರೆಲ್ಲಾ ಹೊರಗೆ ಬಂದಿದ್ದಾರೆ. ನೋಡನೋಡುತ್ತಿದ್ದಂತೆ ಮನೆ ಬೆಂಕಿಯ ಕೆನ್ನಾಲಿಗೆ ಮನೆಯನ್ನೆಲ್ಲಾ ಆವರಿಸಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಹೊಸನಗರ ಅಗ್ನಿ ಶಾಮಕ ಸಿಬ್ಬಂದಿಗಳು ಅಳಿದುಳಿದ ಬೆಂಕಿಯನ್ನು ಆರಿಸಲು ಪ್ರಯತ್ನ ಪಟ್ಟಿದ್ದಾರೆ. ಕೂಡ್ಲಿಕೊಪ್ಪ…


