ಕೆಂಚನಾಲ ನೂತನ ಮಾರಿಕಾಂಬಾ ದೇವಾಲಯ ಲೋಕಾರ್ಪಣೆ:
ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬಾ ದೇವಾಲಯವು ಇಂದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಲೋಕಾರ್ಪಣೆಗೊಂಡಿತು. ಕೆಂಚನಾಲ ಮಾರಿಕಾಂಬಾ ದೇವಾಲಯದ ಲೋಕಾರ್ಪಣ ಕಾರ್ಯಕ್ರಮವು ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನಡೆಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮವು ಕೆಂಜಿಗಾಪುರ ಶ್ರೀಧರ ಭಟ್ ನೇತ್ರತ್ವದಲ್ಲಿ ಜರುಗಿತು.ಹಾಗೂ ಕೊರೊನಾ ರೋಗದ ಭೀತಿಯಿಂದ ಇಲ್ಲಿಗೆ ಆಗಮಿಸುವ ಭಕ್ತಾದಿಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿತ್ತು. ರಾಜ್ಯ ಸರ್ಕಾರದ ಆದೇಶದಂತೆ ಕೊರೋನ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿತ್ತು. ತಾಲೂಕು ಆಡಳಿತ, ಗ್ರಾಮಾಡಳಿತ, ಕಂದಾಯ…


