Headlines

ಕೋಡೂರು ಸಮೀಪ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ|Accident

ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಕೋಡೂರು ಸಮೀಪದ ಕೊಪ್ಪರಗುಂಡಿ ಸೇತುವೆ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಪ್ಪರಗುಂಡಿ ಗ್ರಾಮದ ಸೇತುವೆ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ರಿಪ್ಪನ್‌ಪೇಟೆ ಕಡೆಯಿಂದ ಅಕ್ಕಿ ತುಂಬಿಕೊಂಡು ಹೋಗುತಿದ್ದ ಲಾರಿ ಹಾಗೂ ಹೊಸನಗರ ಕಡೆಯಿಂದ ಬರುತಿದ್ದ ಖಾಲಿ ಲಾರಿ ನಡುವೆ ಡಿಕ್ಕಿಯಾಗಿದ್ದು,ಆಟೋವೊಂದನ್ನು ಓವರ್ ಟೇಕ್ ಮಾಡುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಲಾರಿ ಚಾಲಕನೊಬ್ಬನಿಗೆ ಗಾಯಗಳಾಗಿದ್ದು ಆತನನ್ನು ಹೊಸನಗರದ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈ ಅಪಘಾತದಿಂದ…

Read More

ತೀರ್ಥಹಳ್ಳಿ : ಶರಾವತಿ ಚಳುವಳಿ ಪಾದಯಾತ್ರೆಗೆ ಕಲ್ಲುಕೊಪ್ಪದಿಂದ ಚಾಲನೆ :

ತೀರ್ಥಹಳ್ಳಿ : ಶರಾವತಿ ವರಾಹಿ ಚಕ್ರ ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗೆ ಭೂಮಿ ಮತ್ತು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಇಂದು ಕಲ್ಲುಕೊಪ್ಪದಲ್ಲಿ ಮೂರು ದಿನ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ ಚುನಾವಣೆ ಇರಲಿ ಬಿಡಲಿ ಸಂತ್ರಸ್ತರಿಗೆ ನ್ಯಾಯಕೊಡಿಸಬೇಕು. ಈ ಭಾಗದಲ್ಲಿ ನೆಲೆಸಿರುವ ಸಂತ್ರಸ್ತರ ಪಟ್ಟಿ ಮಾಡಿ ಈ ಕಾಯ್ದೆ ಅಡಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ್ ಗೆ ಪಟ್ಟಿ ನೀಡುವಂತೆ ಕೋರಿದ ಕಾಗೋಡು. ಬಂದವರಿಗೆಲ್ಲಾ ಹಕ್ಕುಪತ್ರ ಕೊಡಿ ಎಂದು ಅರ್ಜಿ ಕೊಡುವುದಲ್ಲವೆಂದು ಗುಡುಗಿದರು….

Read More

Ripponpete | ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಅತ್ಯಗತ್ಯ – ಪಿಎಸ್‌ಐ ಪ್ರವೀಣ್ ಎಸ್ ಪಿ

Ripponpete | ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಅತ್ಯಗತ್ಯ – ಪಿಎಸ್‌ಐ ಪ್ರವೀಣ್ ಎಸ್ ಪಿ ರಿಪ್ಪನ್‌ಪೇಟೆ : ವಿದ್ಯಾರ್ಥಿಗಳು ಪೊಲೀಸ್‌ ಕಾನೂನು, ರಸ್ತೆ ಸುರಕ್ಷ ತೆ ಮುಂತಾದ ನಿಯಮಗಳ ಬಗ್ಗೆ ಅರಿವು ಹೊಂದುವ ಅಗತ್ಯವಿದೆ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪೊಲೀಸ್‌ ಇಲಾಖೆಯ ಕಾನೂನು, ನಿಯಮಗಳ ಬಗ್ಗೆ ಅರಿವು ಹೊಂದಿ ಪೋಷಕರು ಹಾಗೂ ಸಾರ್ವಜನಿಕರನ್ನು ಜಾಗೃತಿಗೊಳಿಸುವಷ್ಟು ಪ್ರಬುದ್ಧರಾಗಬೇಕು…

Read More

ಹಾವು ಕಡಿತಕ್ಕೆ ಎರಡುವರೆ ವರ್ಷದ ಮಗು ಬಲಿ: ಸಾಗರದಲ್ಲಿ ದಾರುಣ ಘಟನೆ

ಹಾವು ಕಡಿತಕ್ಕೆ ಎರಡುವರೆ ವರ್ಷದ ಮಗು ಬಲಿ: ಸಾಗರದಲ್ಲಿ ದಾರುಣ ಘಟನೆ A tragic incident in Shivamogga’s SN Nagar where a 2.5-year-old boy died after a snake bite while playing outside his house. The child succumbed despite medical treatment at Meggan Hospital. ಶಿವಮೊಗ್ಗ: ಮನೆಯ ಮುಂಭಾಗದಲ್ಲೇ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿಗೆ ಹಾವು ಕಡಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬುಧವಾರ ಎಸ್.ಎನ್ ನಗರದಲ್ಲಿ ನಡೆದಿದೆ….

Read More

ಹರ್ಷ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜಿಲ್ಲಾ ಕಾಂಗ್ರೆಸ್ ನಾಯಕರುಗಳು: ಇಂತಹ ನೀಚ ಕೃತ್ಯಗಳನ್ನು ಎಸಗುವವರನ್ನು ಮರಣದಂಡನೆಗೆ ಗುರಿಪಡಿಸಿ : ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು !!!

ಇತ್ತೀಚೆಗೆ  ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಮನೆಗೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಹರ್ಷ ರವರ ಕುಟುಂಬಕ್ಕೆ ಸಾಂತ್ವನ ಹೇಳಿದರು  ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಕೊಲೆ ಮಾಡುವಂತಹ ವ್ಯಕ್ತಿಗಳು ಯಾವುದೇ ಜಾತಿ ಧರ್ಮದವರಾಗಿರಲಿ  ಅಂಥವರಿಗೆ ಶಿಕ್ಷೆಯನ್ನು ನೀಡಬೇಕು. ಪ್ರತಿಯೊಬ್ಬರ ಜೀವಕ್ಕೂ ಬೆಲೆಯಿದೆ.ಅವರ ಅಕ್ಕ ಹಾಗೂ ತಂಗಿ ಮತ್ತು ತಾಯಿಯ ನೋವು ನಿಜಕ್ಕೂ ಮನ ಕಲಕುವಂತಿದೆ.ಇಂತಹ ಘಟನೆಗಳು ಮರುಕಳಿಸಬಾರದು. ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ವಹಿಸಬೇಕು. ಇಂತಹ ಕೆಟ್ಟ…

Read More

ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು : ದಂಪತಿ ಸಾವು

ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು : ದಂಪತಿ ಸಾವು ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹಳ್ಳಕ್ಕೆ ಬಿದ್ದ ಪರಿಣಾಮ ದಂಪತಿ ಸಾವನ್ನತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಐನಾಪೂರ ರಸ್ತೆಯಲ್ಲಿ ಸಂಭವಿಸಿದೆ. ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕುಪಿರೆ ಗ್ರಾಮದ ಆದರ್ಶ ಯುವರಾಜ ಪಾಂಡವ (27) ಈತನು ಫೋರ್ಡ್ ಕಾರ ಅನ್ನು ತೆಗೆದುಕೊಂಡು, ಮಂಗಸೂಳಿ- ಐನಾಪೂರ ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆ ತಿರುವಿನಲ್ಲಿ ಕಾರಿನ ನಿಯಂತ್ರಣ…

Read More

ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ |Yellow alert

ರಾಜ್ಯದ ಶಿವಮೊಗ್ಗ , ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ,ಮತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಳಲ್ಲಿ ಭಾರೀ ಮಳೆಯಾಗಲಿದ್ದು, ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಲಿದೆ ಎಂದು ಐಎಂಡಿ ಹೇಳಿದೆ.  ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿಯೂ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕೇಂದ್ರ ಭಾಗದಲ್ಲಿರುವ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್…

Read More

ಶಿಮೂಲ್ ಚುನಾವಣೆ ಫಲಿತಾಂಶ ಪ್ರಕಟ

ಶಿಮೂಲ್ ಚುನಾವಣೆ ಫಲಿತಾಂಶ ಪ್ರಕಟ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.ಇಂದು ಬೆಳಗ್ಗೆ ಮತದಾನ ನಡೆದಿತ್ತು. ಸಂಜೆ ವೇಳೆಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಿಸಲಾಗಿದೆ. ಶಿವಮೊಗ್ಗ ತಹಶೀಲ್ದಾರ್‌ ಬಿ.ಎನ್.ಗಿರೀಶ್‌ ಅವರು ರಿಟರ್ನಿಂಗ್‌ ಆಫೀಸರ್‌ ಆಗಿದ್ದರು.12 ಸ್ಥಾನಕ್ಕೆ ಪೈಕಿ 31 ಜನ ಸ್ಪರ್ಧಿಸಿದ್ದರು. ಇದರಲ್ಲಿ ಇಬ್ಬರ ಅವಿರೋಧ ಆಯ್ಕೆಯಾಗಿತ್ತು. ಶಿವಮೊಗ್ಗ ವಿಭಾಗ : ಶಿವಮೊಗ್ಗ ವಿಭಾಗದಿಂದ ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದು, ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್…

Read More

ವಿದ್ಯಾರ್ಥಿಗಳ ತಪ್ಪು ಉತ್ತರಕ್ಕೆ ಶಿಕ್ಷಕನಿಗೆ ದಂಡನೆ…!! ವಿನೂತನ ಪ್ರಯೋಗದಿಂದ ಮಕ್ಕಳನ್ನು ಜಾಣರನ್ನಾಗಿಸಿದ ಶಿಕ್ಷಕರೊಬ್ಬರ ಸ್ಟೋರಿ – ಮಿಸ್ ಮಾಡದೇ ನೋಡಿ

ವಿದ್ಯಾರ್ಥಿಗಳ ತಪ್ಪು ಉತ್ತರಕ್ಕೆ ಪ್ರತಿಫಲ ಶಿಕ್ಷಕನಿಗೆ ದಂಡನೆ…!! ವಿನೂತನ ಪ್ರಯೋಗದಿಂದ ಮಕ್ಕಳನ್ನು ಜಾಣರನ್ನಾಗಿಸಿದ ಶಿಕ್ಷಕರೊಬ್ಬರ ಸ್ಟೋರಿ – ಮಿಸ್ ಮಾಡದೇ ನೋಡಿ ಶಿಕ್ಷೆಯೇ ಶಿಕ್ಷಣದ ಮಾನದಂಡ ಎಂಬಂತೆ ವರ್ತಿಸುವ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಮರುಳಾಗಿ,  ದೂರದಿಂದಲೇ  ಸರ್ಕಾರಿ ಶಾಲೆಗಳ ಕಾರ್ಯವೈಕರಿಯ ಬಗ್ಗೆ ಅಸಡ್ಡೆ ತೋರುವವರೆ ಹೆಚ್ಚು , ಇದಕ್ಕೆ ಅಪವಾದ ಎಂಬಂತೆ ಶಿವಮೊಗ್ಗ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಟ್ಟ ಹಳ್ಳಿಯ ಹಾಲಂದೂರಿನ ಸರ್ಕಾರಿ  ಶಾಲೆ ಸಾಕ್ಷಿಕರಿಸಿದೆ. ಇಲ್ಲಿನ ಶಿಕ್ಷಕ ಗೋಪಾಲ್ ಹೆಚ್. ಎಸ್….

Read More

ರಿಪ್ಪನ್‌ಪೇಟೆ : ಬಾಳೆಕೊನೆ ಕಟಾವು ಮಾಡುವ ವಿಚಾರದಲ್ಲಿ ಗಲಾಟೆ – ಎರಡು ಪ್ರತ್ಯೇಕ ಪ್ರಕರಣ ದಾಖಲು|crime news

ರಿಪ್ಪನ್‌ಪೇಟೆ : ಬಾಳೆಕೊನೆ ಕಟಾವು ಮಾಡುವ ವಿಚಾರದಲ್ಲಿ ಗಲಾಟೆ – ಎರಡು ಪ್ರತ್ಯೇಕ ಪ್ರಕರಣ ದಾಖಲು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗೌಡಕೊಪ್ಪ ಗ್ರಾಮದಲ್ಲಿ ಬಾಳೆಕೊನೆ ಕಡಿಯುವ ವಿಚಾರದಲ್ಲಿ ಗಲಾಟೆ ನಡೆದಿದ್ದು ಎರಡು ಪ್ರತ್ಯೇಕ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಾಗರ ಮೂಲದ ಇಮ್ರಾನ್ ಎಂಬುವವರಿಗೆ ಗೌಡಕೊಪ್ಪ ಗ್ರಾಮದ ಅರುಣ್ ಕುಮಾರ್ ಎಂಬುವವರಿಗೆ ಸೇರಿದ ಬಾಳೆ ತೋಟದ ಬಾಳೆಕೊನೆಯನ್ನು ತೂಕದ ಲೆಕ್ಕದಲ್ಲಿ ಕಟಾವು ಮಾಡಲು ಮಾತುಕತೆ ನಡೆದಿತ್ತು. ಆ ಹಿನ್ನಲೆಯಲ್ಲಿ ಸೋಮವಾರ ಬಾಳೆಕೊನೆ…

Read More
Exit mobile version