ರಿಪ್ಪನ್ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ಮೆಕ್ಕಾ ಜುಮ್ಮಾ ಮಸೀದಿ, ತಝೀಝುಲ್ ಇಸ್ಲಾಂ ಮದ್ರಸ.ಮೀಲಾದ್ ಸ್ವಾಗತ ಸಮಿತಿ, ಬದ್ರಿಯಾ ಮದ್ರಸ ಸಮಿತಿ ಎಸ್.ಎಸ್.ಎಫ್,ಮತ್ತು ಎಸ್.ವೈ.ಎಸ್. ಇವರ ಸಹಯೋಗದಲ್ಲಿ ಅಯೋಜಿಸಲಾದ “ಇಲಲ್ ಹಬೀಬ್ ಮೀಲಾದ್’ ಸಮಾರಂಭದ ಅಂಗವಾಗಿ ಇಂದು ಈದ್ ಮಿಲಾದ್ ಮೆರವಣಿಗೆ ನಡೆಯಿತು.
ಹೊಸನಗರ ರಸ್ತೆಯಿಂದ ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯಲ್ಲಿನ ಖಬರ್ ಸ್ಥಾನ್ ವರೆಗೆ ಮುಸಲ್ಮಾನ ಭಾಂಧವರು ಯುವಕರ “ದಫ಼್’’ ಅಕರ್ಷಣೆಯೊಂದಿಗೆ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಮೆರವಣಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ವಿನಾಯಕ ವೃತ್ತದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರುಗಳಾದ ಮುನೀರ್ ಸಖಾಫ಼ಿ ರವರು ಸಂದೇಶ ಬಾಷಣ ಮಾಡಿದರು.
ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫಿ, ಮೆಕ್ಕಾ ಮಸೀದಿ ಅಧ್ಯಕ್ಷ ಫ಼ಾಜೀಲ್ ಈದ್ ಮೀಲಾದ್ ಸಮಿತಿಯ ಅಧ್ಯಕ್ಷ ಮುಸ್ತಾಫ್ ಕೆ.ಹೆಚ್.ಆರ್,ಮುಖಂಡರಾದ ಆರ್.ಎ.ಚಾಬುಸಾಬ್,ಅಮ್ಮೀರ್ ಹಂಜಾ,ಕೆ.ಹೆಚ್.ಆರ್.ಮೋಣು, ಅಶೀಫ್ ಭಾಷಾ ಸಾಬ್, ಮಹಮ್ಮದ್ಸಾಬ್ ಚಾಲಿ,ಸಯೈದ್ ಜಾಫರ್ ಸ್ವಾದಿಕ್, ಮನ್ಸೂರು,ನೂರುಲ್ಲಾ,ಮಹಮ್ಮದ್ ಶಫಿ,ಆರ್.ಎಸ್.ಇಲಿಯಾಸ್,ಆರ್.ಈ ಹಮೀದ್ಸಾಬ್,ಹಸನಬ್ಬ,ಹನೀಫ್,ಹಸೈನಾರ್,ಮೂಹಿಯುದ್ದೀನ್ ಜೀರಿಗೆ ಮನೆ,ನಾಸೀರ್,ಅದಂಸಾಬ್,ಅಬೂಬಕರ್ ಸಾಬ್,ಹಂಜಾ, ಅಬ್ದುಲ್ಲಾ,ಚಾಬುಸಾಬ್,ಫಯಾಝ್,ಬಾನುಸಾಬ್,ಬಾಬು,ಆರ್.ಎಸ್.ಶಂಶುದ್ದೀನ್,ಇಬ್ರಾಹಿಂ,ಅಬ್ದುಲ್ ಸಿದ್ದೀಕ್, ಮುಖ್ತಿಯಾರ್ಅಹಮದ್ ಸಾಬ್,ಆರ್.ಹೆಚ್ ಮೋಹಿದ್ದೀನ್,ನದೀಮ್ ಹಾಗೂ ಇನ್ನಿತರರಿದ್ದರು
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್