ಮೀಸಲಾತಿ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಹುಟ್ಟು ಹಾಕುವ ಪ್ರಯತ್ನ ಸಹಿಸುವುದಿಲ್ಲ : ವೀರೇಶ್ ಆಲುವಳ್ಳಿ
ರಿಪ್ಪನ್‌ಪೇಟೆ: ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಲಿಂಗಾಯಿತ ಜಾತಿಗೆ 2(ಎ) ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ಜಾಗೃತ ಸಭೆ ನಡೆಸಿ ತಾಲೂಕಿನ ವ್ಯಾಪ್ತಿಯ ವೀರಶೈವ ಸಮಾಜದಲ್ಲಿ ಒಡಕು ಹುಟ್ಟುಹಾಕುವ ಪ್ರಯತ್ನ ನಡೆಸುತ್ತಿದ್ದಾರೆಂದು ಹೊಸನಗರ ತಾಲ್ಲೂಕು ವೀರಶೈವ ಜಾಗೃತಿ ವೇದಿಕೆಯ ಮುಖಂಡ,ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಆರೋಪಿಸಿದ್ದಾರೆ. ಪಟ್ಟಣದ ಗ್ರಾಪಂ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಮಾಜದ ಎಲ್ಲಾ ಬಾಂಧವರು ಹೊಂದಿಕೊಂಡು ಹೋಗಬೇಕಾಗಿದೆ.ವೀರಶೈವರು ಹಾಗೂ…


