ಸ್ಕೂಟಿ ಹಾಗೂ ಬಸ್ ನಡುವೆ ಭೀಕರ ಅಪಘಾತ : ಇಬ್ಬರ ಸಾವು
ಶಿವಮೊಗ್ಗ : ಮಾಚೇನಹಳ್ಳಿಯ ಶಿಮುಲ್ ಡೈರಿ ಎದುರುಗಡೆ ಕೆಎಸ್ ಆರ್ ಟಿ ಸಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿರುವ ಘಟನೆ ಇಂದು ನಡೆದಿದೆ. ದ್ವಿಚಕ್ರ ವಾಹನ ಭದ್ರಾವತಿ ಕಡೆಯಿಂದ ಡೈರಿ ಹಿಂಭಾಗದ ಜಯಂತಿ ಗ್ರಾಮಕ್ಕೆ ತಿರುಗುವ ವೇಳೆ ದ್ವಿಚಕ್ರ ವಾಹನಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ಸವಾರಾದ ಮಂಜುನಾಥ್ (25) ಹಾಗೂ ಆಂಥೋಣಿ ಎಂಬುವರು ಸ್ಥಳದಲ್ಲಿಯೇ…


