Headlines

ಒಕ್ಕಲಿಗರ ಸಂಘದ ಚುನಾವಣೆ ಸಿರಿಬೈಲ್ ಧರ್ಮೇಶ್ ಮುನ್ನಡೆ : ಗೆಲುವು ಬಹುತೇಕ ಖಚಿತ

ರಾಜ್ಯ ಒಕ್ಕಲಿಗರ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶದ ಮೂರನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಮೂರನೇ ಸುತ್ತಿನಲ್ಲಿ ಧರ್ಮೇಶ್ ಸಿರಿ ಬೈಲ್ ಮುನ್ನಡೆ ಸಾಧಿಸಿದ್ದಾರೆ.

ಎರಡನೇ ಸುತ್ತಿನಲ್ಲಿ ಎಸ್ ಕುಮಾರ್ ಮುನ್ನಡೆ ಪಡೆದಿದ್ದ ಎಸ್ ಕುಮಾರ್ ಮೂರನೇ ಸುತ್ತಿನಲ್ಲಿ ಹಿನ್ನಡೆ ಆಗಿದೆ. ಎರಡನೇ ಸುತ್ತಿನಲ್ಲಿ 2436 ಮತ ಪಡೆದಿದ್ದ ಕುಮಾರ್ ಮೂರನೇ ಸುತ್ತಿನಲ್ಲಿ 2912 ಮತ ಪಡೆದುಕೊಂಡಿದ್ದಾರೆ.

ಅದರಂತೆ ಧರ್ಮೇಶ್ ಸಿರಿಬೈಲ್ 3265 ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ದಾರೆ. ಧರ್ಮೇಶ್ ಅವರು ನಾಲ್ಕನೇ ಸುತ್ತಿನಲ್ಲಿಯೂ ಹೆಚ್ಚು ಮತಗಳಿಂದ ಮುನ್ನಡೆ ಪಡೆದಿರುವುದಾಗಿ ತಿಳಿದು ಬಂದಿದೆ. ಧರ್ಮೇಶ್ ಸಿರಿಬೈಲ್ ಅವರ ಗೆಲುವಿನತ್ತ ಸಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ

About The Author

Leave a Reply

Your email address will not be published. Required fields are marked *

Exit mobile version