ರಿಪ್ಪನ್‌ಪೇಟೆ ಸ್ನೇಹ ಬಳಗದ ವತಿಯಿಂದ ಮಾನವೀಯ ಕಾರ್ಯ

ರಿಪ್ಪನ್‌ಪೇಟೆ : ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 1995-96 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ಇಂದು ಪಟ್ಟಣದ ಹಲವು ಕಡೆ ಮಾನವೀಯ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಇತ್ತೀಚೆಗೆ 1995 96ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಗುರುವಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇಂದು ಹೊರ ದೇಶಗಳಲ್ಲಿ & ಹೊರ ರಾಜ್ಯಗಳಲ್ಲಿ ಮತ್ತು ರಿಪ್ಪನ್ ಪೇಟೆಯ ಸುತ್ತಮುತ್ತಲೂ ಇರುವ ಸ್ನೇಹಿತರನ್ನು ಒಳಗೊಂಡು ಪಟ್ಟಣದ ಸುತ್ತಮುತ್ತಲಿನ ನೊಂದ ಕುಟುಂಬಕ್ಕೆ ಆಸರೆಯಾಗುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಹಾಲುಗುಡ್ಡೆಯ…

Read More

ಲಂಚ ಸ್ವೀಕರಿಸುತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪಕ|surveyor arrested

ಜಮೀನು ಸರ್ವೆ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಭೂಮಾಪಕರೊಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಂಗನಾಥ್ ಲೋಕಾಯುಕ್ತದ ಬಲೆಗೆ ಬಿದ್ದ ಭೂಮಾಪಕ ಎಂದು ತಿಳಿದು ಬಂದಿದೆ. ಸಾಗರ ತಾಲೂಕಿನ ತ್ಯಾಗರ್ತಿಯ ಎಡಿಎಲ್ಆರ್ ಕಚೇರಿಯಲ್ಲಿ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಂಗನಾಥ್, ಸಾಗರದ ನಿವಾಸಿ ಉಮೇಶ್ ಎಂಬುವವರ  ಜಮೀನು ಸರ್ವೆ ಮಾಡಲು  ಮೂರು ಸಾವಿರ ರೂ ಹಣದ ಬೇಡಿಕೆ ಇಟ್ಟಿದ್ದಾರೆ. ಮುಂಗಡವಾಗಿ 1500 ರೂ  ಪಡೆದುಕೊಂಡಿದ್ದರು. ಉಳಿದ ಹಣವನ್ನು ಪಡೆಯುವಾಗ  ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ…

Read More

ರಿಪ್ಪನ್‌ಪೇಟೆ – ಕನ್ನಡಪರ ಹೋರಾಟಗಾರ ವಿನಾಯಕ್ ಶೆಟ್ಟಿ ಹೃದಯಾಘಾತದಿಂದ ನಿಧನ|RPET

ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿನ ಭಗತ್ ಸಿಂಗ್ ನಗರದ ನಿವಾಸಿ ಕನ್ನಡ ಪರ ಹೋರಾಟಗಾರ ಸಮಾಜ ಸೇವಕ ಹಾಗೂ ಪುನೀತ್ ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ವಿನಾಯಕ್ ಶೆಟ್ಟಿ (26) ಇಂದು ಬೆಳಗಿನಜಾವ ಹೃದಯಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗಿನಜಾವ ವಿನಾಯಕ್ ಶೆಟ್ಟಿ ರವರಿಗೆ (ಭಾನುವಾರ) ಎದೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಮೃತ ವಿನಾಯಕ್ ಶೆಟ್ಟಿ ತಂದೆ, ತಾಯಿ, ಓರ್ವ ಸಹೋದರಿ, ಓರ್ವ ಸಹೋದರ ಸೇರಿದಂತೆ…

Read More

ಭಾರತ ದೇಶವನ್ನು 3 ತುಂಡು ಮಾಡಿದವರಿಂದಲೇ ಈಗ ಜೋಡೋ ಯಾತ್ರೆ ಶುರುವಾಗಿದೆ : ಕೆ ಎಸ್ ಈಶ್ವರಪ್ಪ

 ‘ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆ ಶುರು ಮಾಡಿರುವುದು ಬಹಳ ಸಂತೋಷದ ವಿಚಾರ. ಯಾಕೆಂದರೆ, ದೇಶವನ್ನು ಮೂರು ತುಂಡು ಮಾಡಿದವರೇ ಅವರು’ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗೇಲಿ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ವಾತಂತ್ರ್ಯಕೋಸ್ಕರ ಬಲಿದಾನ ಮಾಡಿದ ಸಾವಿರಾರು ಜೀವಗಳಿಗೆ ಬೆಲೆಯೇ ಇಲ್ಲ ಎನ್ನುವ ಹಾಗೆ ಅಖಂಡ ಭಾರತವನ್ನು ಮೂರು ತುಂಡು ಮಾಡುವ ಪಾಪದ ಕೆಲಸ ಮಾಡಿದ್ದು ಕಾಂಗ್ರೆಸ್’  ಎಂದು ಹೇಳಿದರು. ‘ಹೀಗೆ ದೇಶವನ್ನು ತುಂಡು ಮಾಡಿದ ಆ ಪಾಪದ ಪ್ರಾಯಶ್ಚಿತ್ತವಾಗಿ…

Read More

ರಿಪ್ಪನ್ ಪೇಟೆ : ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಸೈನಿಕ ಮುಖ್ಯಸ್ಥರಿಗೆ ಹಾಗೂ ಅಧಿಕಾರಿಗಳಿಗೆ ಶ್ರದ್ಧಾಂಜಲಿ

ರಿಪ್ಪನ್ ಪೇಟೆ : ಬುಧವಾರ ತಮಿಳು ನಾಡಿನ  ಕುನೂರು ಸಮೀಪದಲ್ಲಿ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಬಿಪಿನ್ ರಾವತ್ ಹಾಗೂ ಮೃತಪಟ್ಟ ಸೇನಾ ಅಧಿಕಾರಿಗಳಿಗೆ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಶ್ರದ್ದಾಂಜಲಿ ಕಾರ್ಯಕ್ರಮ ನಡೆಸಿ ಸಂತಾಪ ಸೂಚಿಸಲಾಯಿತು.  ಈ ಸಂಧರ್ಭದಲ್ಲಿ  ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಮಾತನಾದಿ ಬಿಪಿನ್ ರಾವತ್ ಅವರು ಮೂರು ದಶಕಗಳಿಗೂ ಹೆಚ್ಚಿನ ಅವಧಿಗೆ ಭಾರತದ ಸೇವೆ ಮಾಡಿದ್ದಾರೆ. ಇತ್ತೀಚೆಗೆ ಪ್ರಪಂಚದ ಗಮನ…

Read More

ರಿಪ್ಪನ್‌ಪೇಟೆ – ಚಿಪ್ಪಿಗರ ಕೆರೆಯ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ|rpet

ರಿಪ್ಪನ್‌ಪೇಟೆ ಚಿಪ್ಪಿಗರ ಕೆರೆಯ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ  ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಚಿಪ್ಪಿಗರ ಕೆರೆ ಬಳಿಯ ಪಾರ್ಕ್ ಸಮೀಪ ಸುಮಾರು 45 ರಿಂದ 50 ವಯೋಮಾನದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪಟ್ಟಣದಲ್ಲಿ ಕಳೆದ ಕೆಲವು ವರ್ಷಗಳಿಂದ ಚಿಂದಿ ಆಯುತಿದ್ದ ಮಹಿಳೆ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ,ಸದಸ್ಯರಾದ ಆಸೀಫ಼್ ಭಾಷಾಸಾಬ್ ,ಪ್ರಕಾಶ್ ಪಾಲೇಕರ್…

Read More

ಪೋಸ್ಟ್ ಮ್ಯಾನ್ ನ್ಯೂಸ್‌ ಇಂಫ್ಯಾಕ್ಟ್ – ಬಡ ವೃದ್ದೆಯ ಕಿವಿಚೈನ್‌ ಅಡಮಾನದ ಕೇಸ್‌ ಕ್ಲಿಯರ್‌! ಫ್ರೀಡಂ ಫೈಟರ್‌ ಮನೆಗೆ ಬಂತು, ಸಾಲಕ್ಕೆ ಕಟ್‌ ಆಗಿದ್ದ ಹಣ !

ಪವರ್‌ ಫುಲ್‌ ನ್ಯೂಸ್‌ಗೆ ಕಿವಿಚೈನ್‌ ಅಡಮಾನದ ಕೇಸ್‌ ಕ್ಲಿಯರ್‌! ಫ್ರೀಡಂ ಫೈಟರ್‌ ಮನೆಗೆ ಬಂತು, ಸಾಲಕ್ಕೆ ಕಟ್‌ ಆಗಿದ್ದ ಹಣ ! ಫ್ರೀಡಂ ಫೈಟರ್‌ ಮಡದಿ ಪರವಾದ ಹೋರಾಟಕ್ಕೆ ಜಯ! | ಸುದ್ದಿ ಇಂಪ್ಯಾಕ್ಟ್‌ಗೆ ಮನೆ ಅಡ್ರೆಸ್‌ ಹುಡ್ಕೊಂಡು ಬಂದ್ರು ಮ್ಯಾನೇಜರ್‌! ಪಿಂಚಣಿ ಆಧಾರದ ಸಾಲಕ್ಕೆ ಕಟ್‌ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಮಡದಿಯ ಕಿವಿಚೈನ್‌ ಕಾಸು..  ಮನೆಗೆ ಬಂತು ವಾಪಸ್‌… ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಇಂಪ್ಯಾಕ್ಟ್‌ಗೆ ಅಡ್ರೆಸ್‌ ಹುಡ್ಕೊಂಡು ಬಂದ್ರು ಕೋಣಂದೂರಿನ ಕೆನರಾ ಬ್ಯಾಂಕ್ ಮ್ಯಾನೇಜರ್‌!…

Read More

RIPPONPETE | ಚಾಣಾಕ್ಯ ಬಾರ್‌ನಲ್ಲಿ ಮದ್ಯಪಾನ ವೇಳೆ ವಾಗ್ವಾದ – ಬಿಯರ್ ಬಾಟಲಿಯಿಂದ ಯುವಕನ‌ ಮೇಲೆ ಹಲ್ಲೆ

RIPPONPETE | ಚಾಣಾಕ್ಯ ಬಾರ್‌ನಲ್ಲಿ ಮದ್ಯಪಾನ ವೇಳೆ ವಾಗ್ವಾದ – ಬಿಯರ್ ಬಾಟಲಿಯಿಂದ ಯುವಕನ‌ ಮೇಲೆ ಹಲ್ಲೆ ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಚಾಣುಕ್ಯ ಬಾರ್ ನಲ್ಲಿ ಮದ್ಯಪಾನದ ವೇಳೆ ಇಬ್ಬರ ನಡುವೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿದ್ದು ಗಲಾಟೆಯಲ್ಲಿ ಯುವಕನೊಬ್ಬನ ಎಡಭಾಗದ ಹಣೆಗೆ ಗಂಭೀರ ಗಾಯಗೊಂಡಿರುವ ಘಟನೆ ಅಕ್ಟೋಬರ್ 26ರ ರಾತ್ರಿ ಸುಮಾರು 9.30ರ ಸುಮಾರಿಗೆ ನಡೆದಿದೆ. ಪಟ್ಟಣದ ಗಾಂಧಿನಗರ ನಿವಾಸಿ ರವಿಕುಮಾರ್ ಎಂಬಾತನಿಗೆ ಗಂಭೀರ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಬನ್ನಿ…

Read More

ಬೊಮ್ಮಾಯಿ ಸರ್ಕಾರಕ್ಕೆ ತಾಕತ್ ಇದ್ರೆ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲಿ – ಮಧು ಬಂಗಾರಪ್ಪ|Sharavathi

ಬೊಮ್ಮಾಯಿ ಸರ್ಕಾರಕ್ಕೆ ತಾಕತ್ ಇದ್ರೆ ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡಿ ಎಂದು ಕೆಪಿಸಿಸಿ ಹಿಂದೂಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ. ಶಿವಮೊಗ್ಗದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರ ಬುಡಕ್ಕೆ ಕೈ ಹಾಕುವ ಮೂಲಕ ಜೇನುಗೂಡಿಗೆ ಬಿಜೆಪಿ ಸರ್ಕಾರಕ್ಕೆ ಕೈ ಹಾಕಿದೆ ಇದು ಅವರನ್ನು ಸುಮನ್ನೆ ಬಿಡುವುದಿಲ್ಲ. ನಾಡಿಗೆ ಬೆಳಕು ಕೊಟ್ಟವರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಬಿಜೆಪಿ ಸರ್ಕಾರದ ಅಂತ್ಯ ಶುರುವಾಗಿದೆ. ಮಾನ ಮಾರ್ಯಾದೆ ಇಲ್ಲ, ಸರ್ಕಾರಕ್ಕೆ ದಮ್…

Read More

ಅಯ್ಯಪ್ಪಸ್ವಾಮಿ ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು – ಓರ್ವ ಯುವತಿ ಸಾವು 08 ಜನರಿಗೆ  ಗಂಭೀರ ಗಾಯ

ಅಯ್ಯಪ್ಪಸ್ವಾಮಿ ಜಾತ್ರೆಯಲ್ಲಿ ಭಕ್ತರ ಮೇಲೆ ಹರಿದ ಕಾರು – ಓರ್ವ ಯುವತಿ ಸಾವು 08 ಜನರಿಗೆ  ಗಂಭೀರ ಗಾಯ ಸಿದ್ದಾಪುರ:  ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ ದಲ್ಲಿ  ಭಕ್ತರ ಮೇಲೆ  ಕಾರು ಹರಿದ ಪರಿಣಾಮ   ಓರ್ವ ಯುವತಿ ಸಾವಿಗೀಡಾಗಿ  08 ಭಕ್ತರಿಗೆ ದಲ್ಲಿ ಗಂಭೀರ ಗಾಯ ಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ  ಸಿದ್ದಾ ಪುರದಲ್ಲಿ ನಿನ್ನೆ ಸಂಭವಿಸಿದೆ. ಕಾರು ಚಾಲಕ ರೋಶನ್ ಫರ್ನಾಂಡಿಸ್ ನನ್ನು ಪೊಲೀಸರು ಬಂಧಿಸಿದ್ದಾರೆ.ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಈತ ಜಾತ್ರೆಗೆ ನುಗ್ಗಿಸಿದ್ದಾನೆ….

Read More
Exit mobile version