ಆಕಳು ಖರೀದಿಗೆ ಸಹಾಯಧನಕ್ಕಾಗಿ ಆರ್ಜಿ ಆಹ್ವಾನ::
ಶಿವಮೊಗ್ಗ, ಜುಲೈ-03: ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಹೈನುಗಾರಿಕೆಗೆ ಯೋಗ್ಯವಾದ ಒಂದು ವರ್ಷ ಮೇಲ್ಪಟ್ಟ ಮತ್ತು ವಿಮೆಗೊಳಪಡಿಸುವ ಸಮಯದಲ್ಲಿ ಗರಿಷ್ಠ 8 ವರ್ಷಗಳಿಗೆ ಮೀರದಂತಹ ಮಣಕ/ಆಕಳು/ಎಮ್ಮೆಗಳಿಗೆ ಒಂದು ವರ್ಷದ/ಮೂರು ವರ್ಷದ ಅವಧಿಗೆ ಮಾರುಕಟ್ಟೆ ಮೌಲ್ಯದ 2%/6% ಪ್ರೀಮಿಯಂ ದರದಲ್ಲಿ ಗರಿಷ್ಠ ರೂ. 70 ಸಾವಿರ ಮೂಲ ಬೆಲೆಯವರೆಗೆ ಕೆಳಕಂಡ ಪ್ರೀಮಿಯಂ ಸಹಾಯಧನದ ದರದಂತೆ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ. ಬಿ.ಪಿ.ಎಲ್ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ 70% ಹಾಗೂ ಎ.ಪಿ.ಎಲ್….


