ಕೆಂಚನಾಳದಲ್ಲಿ ರೈಲ್ವೆ ಹಳಿ ಮೇಲೆ ಉರುಳಿಬಿದ್ದ ಬೃಹದಾಕಾರದ ಮರ : ರೈಲ್ವೆ ಸಂಚಾರ ಅಸ್ತವ್ಯಸ್ತ
ರಿಪ್ಪನ್‌ಪೇಟೆ : ಕೆಂಚನಾಳ ರೈಲ್ವೆ ನಿಲ್ದಾಣದ ಮುಂಭಾಗದ ರೈಲು ಹಳಿಯ ಮೇಲೆ ಮರವೊಂದು ಉರುಳಿಬಿದ್ದ ಘಟನೆ ರವಿವಾರ ಬೆಳಗಿನ ಜಾವ ನಡೆದಿದೆ. ಕೆಂಚನಾಳ ರೈಲ್ವೆ ನಿಲ್ದಾಣದ ಎದುರುಗಡೆ ಇರುವ ಸುಮಾರು ನೂರು ವರ್ಷಕ್ಕೂ ಹಳೆಯ ಮರಕ್ಕೆ ನೆಲಕ್ಕುರುಳಿದೆ.ಇದರಿಂದ ತಾಳಗುಪ್ಪ-ಬೆಂಗಳೂರು ರೈಲು ಎರಡು ಗಂಟೆ ತಡವಾಗಿ ಸಂಚರಿಸಿತು. ತಾಳಗುಪ್ಪ-ಬೆಂಗಳೂರು ರೈಲು ಸಾಗರ ರೈಲ್ವೆ ನಿಲ್ದಾಣಕ್ಕೆ 06.30ಕ್ಕೆ ಆಗಮಿಸಬೇಕಾಗಿತ್ತು ಆದರೆ ಎರಡು ಗಂಟೆ ತಡವಾಗಿ ಅಂದರೆ 8:30ಕ್ಕೆ ಆಗಮಿಸಿದೆ. ಹಾಗೂ ಸಾಗರದಿಂದ-ಮೈಸೂರಿಗೆ ಹೋಗುವ ರೈಲು ಅರ್ಧ ಗಂಟೆ ತಡವಾಗಿ ಸಂಚರಿಸಿದೆ….


