ಅರಸಾಳು ಗ್ರಾಪಂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ- ಚುಕ್ಕಾಣಿ ಹಿಡಿದ ಬಿಜೆಪಿ ಬೆಂಬಲಿತರು – ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ|Arasalu
ರಿಪ್ಪನ್‌ಪೇಟೆ : ರಾಜೀನಾಮೆಯಿಂದ ತೆರವಾಗಿದ್ದ ಅರಸಾಳು ಗ್ರಾಪಂನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಎನ್. ಉಮೇಶ್ ಕಡೆಗದ್ದೆ ಹಾಗು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಾಂತಕುಮಾರಿ ರವೀಂದ್ರ ಆಯ್ಕೆಯಾಗಿದ್ದಾರೆ. ಒಟ್ಟು 12 ಸಂಖ್ಯಾ ಬಲದ ಸದಸ್ಯರನ್ನು ಹೊಂದಿರುವ ಅರಸಾಳು ಗ್ರಾಪಂಗೆ ಈ ಹಿಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಉಮೇಶ್ ಕಡೆಗದ್ದೆಗೆ 7 ಮತ, ಪ್ರತಿಸ್ಪರ್ಧಿ…


