Headlines

ಅರಸಾಳು ಗ್ರಾಪಂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ- ಚುಕ್ಕಾಣಿ ಹಿಡಿದ ಬಿಜೆಪಿ ಬೆಂಬಲಿತರು – ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ|Arasalu

ರಿಪ್ಪನ್‌ಪೇಟೆ : ರಾಜೀನಾಮೆಯಿಂದ ತೆರವಾಗಿದ್ದ ಅರಸಾಳು ಗ್ರಾಪಂನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಎನ್. ಉಮೇಶ್ ಕಡೆಗದ್ದೆ ಹಾಗು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಾಂತಕುಮಾರಿ ರವೀಂದ್ರ ಆಯ್ಕೆಯಾಗಿದ್ದಾರೆ.


ಒಟ್ಟು 12 ಸಂಖ್ಯಾ ಬಲದ ಸದಸ್ಯರನ್ನು ಹೊಂದಿರುವ ಅರಸಾಳು ಗ್ರಾಪಂಗೆ ಈ ಹಿಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಉಮೇಶ್ ಕಡೆಗದ್ದೆಗೆ 7 ಮತ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಯೋಗೇಂದ್ರನಾಯ್ಕ 4 ಮತ ಪಡೆದರು. ಈ ಮೂಲಕ ಅಧ್ಯಕ್ಷರಾಗಿ ಉಮೇಶ್ ಆಯ್ಕೆಯಾದರು.


ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶಾಂತಕುಮಾರಿ 6 ಮತ ಪಡೆದರೆ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಪುಷ್ಪ 5 ಮತ ಪಡೆದಿದ್ದರಿಂದ ಶಾಂತಕುಮಾರಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.




ಓರ್ವ ಸದಸ್ಯೆ ಗೈರು ಹಾಜರಾಗಿದ್ದರಿಂದ 11 ಸದಸ್ಯರು ಮಾತ್ರ ಈ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ :

ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯ ಉಮಾಕರ್ ಅಧ್ಯಕ್ಷರಾಗಿ ಆಯ್ಕೆಯಾಗಿ ಗ್ರಾಪಂ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು ಆದರೆ ಒಪ್ಪಂದದಂತೆ 18 ತಿಂಗಳಿಗೆ ರಾಜೀನಾಮೆ ನೀಡಿದ್ದರು.ಆದರೆ ಅಧ್ಯಕ್ಷರು ರಾಜೀನಾಮೆ ನೀಡಿದ ಬಳಿಕ ಯೋಗೇಂದ್ರ ನಾಯ್ಕ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದ ಕಾರಣ ಬಿಜೆಪಿ ಪಕ್ಷದ ಮುಖಂಡರು ಗ್ರಾಪಂ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


ಅಭಿನಂದನೆ :

ಅರಸಾಳು ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ ಎನ್ ಉಮೇಶ್ ಕಡೆಗದ್ದೆ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಾಂತಕುಮಾರಿ ರವೀಂದ್ರ ರವರಿಗೆ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹಾಲಪ್ಪ ಹೆಚ್ ಹರತಾಳು ,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್, ಮುಖಂಡರಾದ ಎ ಟಿ ನಾಗರತ್ನ, ಸುರೇಶ್ ಸಿಂಗ್ ,ಆರ್ ಟಿ ಗೋಪಾಲ್ ,ಸುಂದರೇಶ್ ,ಉಮೇಶ್ ಜಾಗದ್ದೆ , ಇನ್ನಿತರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




ಇದೇ ಮೊದಲ ಬಾರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಕುಣಬಿ ಜನಾಂಗಕ್ಕೆ ಒಂದೇ ಗ್ರಾಪಂನಲ್ಲಿ ದೊರೆತಿರುವುದು ಅತ್ಯಂತ ಹರ್ಷ ತಂದಿದೆ ಎಂದು ಶಿವಮೊಗ್ಗ ಜಿಲ್ಲಾ ಕುಣಬಿ ಸುಧಾರಣಾ ಸಮಿತಿಯು ನೂತನ ಅಧ್ಯಕ್ಷ ಉಮೇಶ್ ಮತ್ತು ಉಪಾಧ್ಯಕ್ಷೆ ಶಾಂತಕುಮಾರಿಯನ್ನು ಈ ಮೂಲಕ ಅಭಿನಂದಿಸಿ ಶುಭಹಾರೈಸಿದೆ.

Leave a Reply

Your email address will not be published. Required fields are marked *

Exit mobile version